ಇವತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿ ಮೋಸ ಮಾಡಿದ್ದಾರೆ!

ಇವತ್ತಿನಿಂದ ಜಿಎಸ್ ಟಿ ಕೂಡ ಹೆಚ್ಚಳ ಮಾಡಿದ್ದಾರೆ

ಮೊಸರು ಮಜ್ಜಿಗೆ ಲಸ್ಸಿ ಝೀರೋ ಜಿಎಸ್ ಟಿ ಇತ್ತು

ಆದ್ರೆ ಅದಕ್ಕೆ ೫ ಪರ್ಸೆಂಟ್ ಜಿಎಸ್ ಟಿ ಹಾಕಿದ್ದಾರೆ

ಅಕ್ಕಿ, ಗೋದಿ ಬಾರ್ಲಿ ಓಟ್ಸ್ ಝೀರೋ ಇತ್ತು ಈಗ ೫ ಪರ್ಸೆಂಟ್ ಮಾಡಿದ್ದಾರೆ

೧ ಸಾವಿರ ಬಾಡಿಗೆ ಇರುವ ಹೋಟೆಲ್ ಕೊಠಡಿಗಳಿಗೆ ೧೨ ಪರ್ಸೆಂಟ್ ಮಾಡಿದ್ದಾರೆ

ಸೋಲಾರ್ ಬಳಸುವ ಮಧ್ಯಮ ವರ್ಗದವರಿಗೆ ೫ ಪರ್ಸೆಂಟ್ ನಿಂದ ೧೨ ಪರ್ಸೆಂಟ್ ಮಾಡಿದ್ದಾರೆ

ಎಲ್ ಇಡಿ ಬಲ್ಬ್ ಗಳಿಗೆ ೧೨ ರಿಂದ ೧೮ ಪರ್ಸೆಂಟ್ ಮಾಡಿದ್ದಾರೆ

ಬ್ಯ‍ಾಂಕ್ ಚೆಕ್ ಬುಕ್ ಗಳಿಗೆ ಜೀರೋ ನಿಂದ ೧೮ ಪರ್ಸೆಂಟ್ ಮಾಡಿದ್ದಾರೆ

ಹಣ್ಣ ತರಕಾರಿ ಬೇರ್ಪಡಿಸಲು ೫ ರಿಂದ ೧೮ ಪರ್ಸೆಂಟ್ ಮಾಡಿದ್ದಾರೆ

ಪಂಪ್ ಮೋಟಾರ್ ಗಳಿಗೆ ೧೨ ರಿಂದ ೧೮ ಪರ್ಸೆಂಟ್ ಮಾಡಿದ್ದಾರೆ

ಇಟ್ಟಿಗೆ ತಯಾರಿಸಲು ೫ ರಿಂದ ೧೨ ಪರ್ಸೆಂಟ್

ಮಕ್ಕಳು ವಿಧ್ಯಾಬ್ಯಾಸಕ್ಕೆ ಬಳಸುವ ಭೂಪಟಗಳು ಜೀರೋನಿಂದ ೧೨ ಪರ್ಸೆಂಟ್

ಇದು ಇವತ್ತಿನಿಂದ ಜಾರಿಗೆ ತರ್ತಿದ್ದಾರೆ

ಇದರಿಂದ ಸಾಮಾನ್ಯ ಜನ ಬಡವರು ಮಧ್ಯಮ ವರ್ಗದವರು ಬಳಸುವ ವಸ್ತುಗಳು ಪದಾರ್ಥಗಳು

೧ ಸಾವಿರರೂಪಾಯಿ ಹೋಟೆಲ್ ರೂಂ ಬಾಡಿಗೆ ಇದ್ರೆ ಈಗ ಜೀರೋನಿಂದ ೧೨ ಪರ್ಸೆಂಟ್ ಜಾಸ್ತಿ ಮಾಡಿದ್ದಾರೆ

ಇದರಿಂದ ಹೊರಗಡೆಯಿಂದ ಬರುವವರಿಗೆ ಸಿಕ್ಕಾಪಟ್ಟೇ ತೊಂದರೆಯಾಗಲಿದೆ

ಮೊದಲೇ ಡೀಸೆಲ್ ಪೆಟ್ರೋಲ್ ಬೆಲೆ ಜಾಸ್ತಿ ಇದೆ

ಇದರ ನಡುವೆ ಜಿಎಸ್ ಟಿ ಹೆಚ್ಚಳ ಮಾಡಿದರೇ ಹೇಗೆ ಬದುಕುವುದು

ಆದ್ರೆ ಶ್ರೀಮಂತರ ತೆರಿಗೆ ೩೦ ಪರ್ಸೆಂಟ್ ನಿಂದ ೨೨ ಕ್ಕೆ ಇಳಿಸಿದ್ದೀರಿ

ಆದ್ರೆ ಬಡವರು ಮಧ್ಯಮವರ್ಗದವರು ಬಳಸುವ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದೀರಾ
ಸಿದ್ದರಾಮಯ್ಯ ಹೇಳಿಕೆ

ಯಶವಂತ್ ಸಿನ್ಹಾಗೆ ಈಗಾಗಲೇ ೨೦ ಶಾಸಕರು ಮತ ಚಲಾಯಿಸಿದ್ದಾರೆ

ಇನ್ನು ಐದು ಗಂಟೆವರೆಗೆ ಟೈಮ್ ಇದೆ ಎಲ್ರು ಹಾಕ್ತಾರೆ

ನರೇಂದ್ರ ಮೋದಿಯವರು ಅಚ್ಚೇದಿನ ಅಂತಾ ದೇಶದ ಜನರಿಗೆ ಭ್ರಮೆಯನ್ನ ಹುಟ್ಟಿಸಿದರು

ದೇಶದ ಜನ ಒಳ್ಳೇ ದಿನ ಬರುತ್ತೇ ಎರಡು ಬಾರಿ ಆಯ್ಕೆ ಮಾಡಿದರು

೮ ವರ್ಷಗಳನ್ನ ನರೇಂದ್ರ ಮೋದಿ ಪೂರೈಸಿ ಸಂಭ್ರಮಾಚರಣೆ ಮಾಡಿಕೊಳ್ತಿದ್ದಾರೆ

ಕರ್ನಾಟಕದಲ್ಲೂ ಮಾಡಿಕೊಳ್ತಿದ್ದಾರೆ

೧ ಲಕ್ಷದ ೨೯ ಸಾವಿರದ ೭೬೬ ಕೋಟಿ ಕರ್ನಾಟಕಕ್ಕೆ ವಿವಿಧ ಯೋಜನೆಗಳಿಗೆ ದುಡ್ಡು ಕೊಟ್ಟಿದ್ದೀವಿ ಅಂತಾರೆ

ಕರ್ನಾಟಕದಿಂದ ತೆರಿಗೆ, ಜಿಎಸ್ಟಿ ಸೇರಿದಂತೆ ಹಲವು ತೆರಿಗೆ ರೂಪದಲ್ಲಿ ೧೯ ಲಕ್ಷ ಕೋಟಿ ನೀಡಿದೆ

ಮಹಾರಾಷ್ಟ್ರ ಬಿಟ್ರೆ ಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕ

ನಾವೂ ಇಷ್ಟೊಂದು ಕೋಟಿ ತೆರಿಗೆ ರೂಪದಲ್ಲಿ ಕೊಟ್ರೆ ಅವರು ೧ ಲಕ್ಷ ಕೋಟಿಯಷ್ಟು ಮಾತ್ರ ವಾಪಸ್ ಕೊಟ್ಟಿದ್ದಾರೆ

ನಮಗೆ ೪೦ ಪರ್ಸೆಂಟ್ ಕೊಡಬೇಕು

ಅಂದ್ರೆ ಮಿನಿಮಮ್ ೮ ಲಕ್ಷ ಕೋಟಿ ಕೊಡಬೇಕು

ಆದ್ರೆ ಅದನ್ನ ಕೊಡದೇ ಅಚ್ಚೇದಿನ್ ಅಂತಾ ಜನರಿಗೆ ಏನ್ ಮಾಡ್ತಿದ್ದಾರೆ

ಜೊತೆಗೆ ಗ್ಯಾಸ್, ಪೆಟ್ರೋಲ್ ಕಬ್ಬಿಣ ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯವಸ್ತುಗಳ ಬೆಲೆ ಜಾಸ್ತಿ ಮಾಡ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೇಸರಿ ಶಾಲು ಧರಿಸಿ ಮತದಾನಕ್ಕೆ ತೆರಳಿದ ಬಿಜೆಪಿ ಶಾಸಕರು!

Mon Jul 18 , 2022
ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ ವಿಧಾನ ಸೌಧ ಮೊದಲ ಮಹಡಿಯಲ್ಲಿ ಸಿದ್ಧತೆ ಬೆಳಗ್ಗೆ ೧೦ ಗಂಟೆಗೆ ಮತದಾನ ಆರಂಭ ಶಾಸಕರು, ಸಂಸದರು,ರಾಜ್ಯಸಭೆ ಸದಸ್ಯರಿಂದ ಮತದಾನ ಗೆಲ್ಲುವ ವಿಶ್ವಾದಲ್ಲಿ ಎನ್ಡಿಎ, ಯುಪಿಎ ಅಭ್ಯರ್ಥಿಗಳು ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕೆ ಯುಪಿಎ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಖಾಡಕ್ಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ… ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಶಾಸಕರು ಇದ್ದ ಮೊದಲ ಬಸ್ ಸಿ.ಟಿ ನೇತೃತ್ವದಲ್ಲಿ ಶಾಂಗ್ರಿಲಾ ಹೊಟೆಲ್ ನಿಂದ […]

Advertisement

Wordpress Social Share Plugin powered by Ultimatelysocial