ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಅವಕಾಶ ನೀಡಬೇಕು ̤

ಚಂಡೀಗಢ, ಫೆಬ್ರವರಿ 04: “ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೆಲಸ ಮಾಡಲು ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಅವಕಾಶ ನೀಡಬೇಕು,” ಎಂದು ಹೇಳಿದ ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ವಿರುದ್ಧ ಪಂಜಾಬ್‌ ರಾಜ್ಯ ಪಕ್ಷದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಿಡಿಮಿಡಿಗೊಂಡಿದ್ದಾರೆ.”ರಾಜ್ಯದಲ್ಲಿ ಪಕ್ಷದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸುವುದು ನಾನೂ ಅಲ್ಲ, ಸುನಿಲ್ ಜಾಖರ್‌ ಕೂಡಾ ಅಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುವುದನ್ನು ಜನರೇ ನಿರ್ಧಾರ ಮಾಡುತ್ತಾರೆ,” ಎಂದು ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್‌ಗೆ ಹಾಲಿ ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ತಿರುಗೇಟು ನೀಡಿದ್ದಾರೆ.”ಸುನಿಲ್ ಜಾಖರ್ ಅವರು ಏನು ಹೇಳಿದರೂ ಅದು ಅವರ ಕೈಯಲ್ಲಿಲ್ಲ, ನನ್ನ ಕೈಯಲ್ಲಿಯೂ ಇಲ್ಲ. ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಮತ್ತು ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ನಾವು ಜನರಿಗೆ ಅಜೆಂಡಾ, ಮಾದರಿಯನ್ನು ನೀಡಬೇಕಾಗಿದೆ,” ಎಂದು ಅಮೃತಸರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.ಸುನಿಲ್ ಜಾಖರ್ ಹೇಳಿದ್ದು ಏನು?”ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಚನ್ನಿಜಿಗೆ ಅವಕಾಶ ನೀಡಲಾಗಿದೆ. ಚನ್ನಿಜಿಗೆ ಕೆಲಸ ಮಾಡಲು ಸಮಯ ನೀಡಬೇಕು ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ. ಜನರು ಅವರನ್ನು ನೋಡಿದ್ದಾರೆ. ನಾಲ್ಕು ತಿಂಗಳಲ್ಲಿ ಒಳ್ಳೆಯ ಕೆಲಸ ಚನ್ನಿಜಿ ಮಾಡಿದ್ದಾರೆ,” ಎಂದು ಪಂಜಾಬ್‌ ಮುಖ್ಯಮಂತ್ರಿಯನ್ನು ಸುನಿಲ್ ಜಾಖರ್ ಶ್ಲಾಘಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ 79 ಶಾಸಕರ ಪೈಕಿ 42 ಮಂದಿ ತಾನು ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಬಯಸಿದ್ದರು ಹಾಗೂ ಇಬ್ಬರು ಮಾತ್ರ ಚನ್ನಿ ಪರವಾಗಿ ಇದ್ದರು ಎಂದು ಕೂಡಾ ಸುನಿಲ್ ಜಾಖರ್‌ ಹೇಳಿದ್ದಾರೆ.ಚನ್ನಿ ಪರವಾಗಿ ನಿಂತ ಸುನಿಲ್‌ ಜಾಖರ್‌ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ಸಿದ್ಧವಾಗಿರುವ ಸಮಯದಲ್ಲಿ ಚನ್ನಿ ಪರವಾಗಿ ನಿಂತ ಸುನಿಲ್‌ ವಿರುದ್ಧ ನವಜೋತ್‌ ಸಿಂಗ್‌ ಸಿಧು ವಾಗ್ದಾಳಿ ನಡೆಸಿದ್ದಾರೆ. ಇನ್ನು ತನ್ನ ಪತಿಗೆ ಸಿಎಂ ಅಭ್ಯರ್ಥಿ ಸ್ಥಾನ ಲಭಿಸಲಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್ ಕೌರ್ ಸಿಧು, “ನನ್ನ ಪತಿ ಹಿರೋ. ಪಕ್ಷ ಯಾರನ್ನು ಬೇಕಾದರೂ ಮುಖ್ಯಮಂತ್ರಿ ಆಯ್ಕೆ ಮಾಡಿದರೂ ಏನೂ ತೊಂದರೆ ಇಲ್ಲ,” ಎಂದಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಫೆಬ್ರವರಿ 6 ರಂದು ಘೋಷಿಸಲಾಗುವುದು ಎಂದು ಚನ್ನಿ ಗುರುವಾರ ತಿಳಿಸಿದ್ದಾರೆ.ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಮೂಲಕ ಈ ಸಮೀಕ್ಷೆಯು ನಡೆಯುತ್ತದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮತದಾರರಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಒಂದನೇ ಆಯ್ಕೆ ನವಜೋತ್ ಸಿಂಗ್ ಸಿಧು, ಎರಡನೇ ಆಯ್ಕೆ ಚರಣ್‌ಜೀತ್‌ ಸಿಂಗ್‌ ಚನ್ನಿ ಹಾಗೂ ಮೂರನೇ ಆಯ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಬೇಡ ಎಂಬುವುದಾಗಿದೆ. ಇನ್ನು ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಎಐಸಿಸಿ ಮುಖಂಡರು ಹಾಗೂ ಸಮೀಕ್ಷಾ ತಂಡಗಳ ಮೂಲಕವೂ ಪ್ರತಿಕ್ರಿಯೆ ಕೇಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ ನಾಗರಿಕರೇ ಗಮನಿಸಿ : ಕುಂದುಕೊರತೆ ಆಲಿಸಲು 14567 ಉಚಿತ ಸಹಾಯವಾಣಿ

Fri Feb 4 , 2022
  ದಾವಣಗೆರೆ : ಹಿರಿಯ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸುವ ಒಂದು ಸಾರ್ವಜನಿಕ ವೇದಿಕೆಯಾಗಿ 14567 ಎಲ್ಡರ್‍ಲೈನ್ ಸಹಾಯವಾಣಿ ಸಂಖ್ಯೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರೂಪುಗೊಳಿಸಿರುವ ಒಂದು ಮಹತ್ವಪೂರ್ಣ ಯೋಜನೆಯಾದ ಸಹಾಯವಾಣಿ ಸಂಖ್ಯೆ 14567 ಕ್ಕೆ ಕರೆ ಮಾಡುವ ಹಿರಿಯ ನಾಗರಿಕರಿಗೆ ಕೋವಿಡ್ ಸಂಬಂಧಿತ ವಿಷಯಗಳ ಕುರಿತು ಮಾಹಿತಿ, […]

Advertisement

Wordpress Social Share Plugin powered by Ultimatelysocial