ಸಿದ್ದರಾಮಯ್ಯ ವಿರುದ್ಧ ಬೋಪಯ್ಯ ಕಿಡಿ

ಬೆಂಗಳೂರು, ಮೇ17- ಕೊಡಗಿನ ಪೊನ್ನಂಪೇಟೆಯ ಶಾಲೆಯೊಂದರಲ್ಲಿ ಶಸ್ತ್ರಾಭ್ಯಾಸ ತರಬೇತಿ ಪಡೆದ ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಕೆಂಡ ಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬರೇ ಒಂದು ವರ್ಗದ ಕ್ರಿಮಿನಲ್‍ಗಳ ಕೇಸ್ ಮುಕ್ತಗೊಳಿಸಿದ ನೀವು ನಮಗೆ ಕಾನೂನಿನ ಪಾಠ ಮಾಡುವ ಅಗತ್ಯವಿಲ್ಲ. ಡಿಜೆಹಳ್ಳಿ-ಕೆಜೆಹಳ್ಳಿಯಲ್ಲಿ ದಲಿತ ಮುಖಂಡರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಮಾಡಿದಾಗ ಏನಾಗಿತ್ತು ನಿಮ್ಮ ಬದ್ಧತೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಸಿದ್ಧರಾಮಯ್ಯನವರೇ, ನೀವು ತಮ್ಮ ಆಡಳಿತದಲ್ಲಿ ಮತಾಂಧರ ಶಕ್ತಿಗಳನ್ನು ಓಲೈಕೆಯನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ. ಬದ್ಧತೆ, ಸಿದ್ಧಾಂತದ ವಿಚಾರದಲ್ಲಿ ನಮಗೆ ಸಂಘ ಏನು ಕಲಿಸಿಕೊಡಬೇಕು ಅದನ್ನು ಕಲಿಸಿಕೊಟ್ಟಿದೆ, ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಕಾರ್ಯಕರ್ತರು ಬಂದೂಕು ತಗೆದುಕೊಂಡು ಡಿಜೆ ಹಳ್ಳಿ ಕೆಜಿ ಹಳ್ಳಿ ತರಹ ದಲಿತರ ಮನೆ ಎಂದಿಗೂ ನುಗ್ಗಿಲ್ಲ. ಗೌರಿಪಾಳ್ಯ, ಮಂಗಳೂರಿನಲ್ಲಿ ಗಲಭೆ, ಹರ್ಷನ ಹತ್ಯೆ ಮಾಡಿದ ಮುಸಲ್ಮಾನರು ನಂತರದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವಾರ ಸರ್ಕಾರಿ ಕಛೇರಿಗೆ ನುಗ್ಗಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ. ನಿಮ್ಮಂತೆ ಸ್ಕ್ರ್ಯೂ ಡ್ರೈವರ್ ಹೋಂ ಮಿನಿಸ್ಟರ್ ಇರುವ ಸರ್ಕಾರ ನಮ್ಮದಲ್ಲ, ನಮ್ಮ ಗೃಹ ಸಚಿವರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಮರ್ಥ ಗೃಹ ಸಚಿವರು ಇದ್ದಾರೆ ಎಂದು ಬೋಪಯ್ಯ ಸಮರ್ಥಿಸಿಕೊಂಡಿದ್ದಾರೆ.

ನಿಮ್ಮಂತಹ ಮತಾಂಧರ ಓಲೈಕೆ ಮಾಡುವ ರಾಜಕಾರಣಿಗಳು ಇರುವವರೆಗೂ ಹಿಂದೂಪರ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ಶಸ್ತ್ರಾಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ನಮ್ಮ ಕಾರ್ಯಕರ್ತರು ಶಸ್ತ್ರಾಭ್ಯಾಸ ಕಲಿತು ಎಂದಿಗೂ ಕಾಶ್ಮೀರಿ ಪಂಡಿತರನ್ನು ಗುಂಡಿಟ್ಟು ಕೊಂದಿಲ್ಲ ಎಂದು ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ಬಡ ರೈತರ ಕೊಟ್ಟಿಗಳಿಗೆ ನುಗ್ಗಿ ಬೆದರಿಸಿ ಗೋವುಗಳನ್ನು ಕದ್ದಿಲ್ಲ. ತಲವಾರ ಹಾಗೂ ಬಂದೂಕು ಹಿಡಿದು ಬಲವಂತದ ಮತಾಂತರ ಮಾಡಿಲ್ಲ. ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗರು- ಬ್ರಿಟೀಷರು ಒಂದೇ: ಟಿಪ್ಪು ಸುಲ್ತಾನ್‌ ಪಠ್ಯ ಕಡಿತಕ್ಕೆ ಕುಮಾರಸ್ವಾಮಿ ಆಕ್ರೋಶ...

Tue May 17 , 2022
ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ವಿಷಯ ಕಡಿತ ಮಾಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಗರು ಮತ್ತು ಬ್ರಿಟಿಷರು ಇಬ್ಬರೂ ಒಂದೇ ಎಂದಿದ್ದಾರೆ. ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು ಎಂದಿದ್ದಾರೆ. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. […]

Advertisement

Wordpress Social Share Plugin powered by Ultimatelysocial