ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ ಆಗಿದೆ.

ವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ.

ಇಂಡಿಕಾ ಕಾರಿನೊಂದಿಗಿನ ತಮ್ಮ ಫೋಟೋ ಶೇರ್​ ಮಾಡಿಕೊಂಡಿದ್ದು, ’25 ವರ್ಷಗಳ ಹಿಂದೆ ಟಾಟಾ ಇಂಡಿಕಾ ಕಾರ್ ಬಿಡುಗಡೆ ಭಾರತದ ದೇಶೀಯ ಪ್ರಯಾಣಿಕರ ಕಾರು ಕೈಗಾರಿಕೆಯ ಜನನಕ್ಕೆ ಕಾರಣವಾಯಿತು.

ಇದು ನನಗೆ ಹಳೆಯ ಆತ್ಮೀಯ ನೆನಪುಗಳನ್ನು ಮಾಡಿಕೊಟ್ಟಿರುವ ಜೊತೆಗೆ ನನ್ನ ಹೃದಯದಲ್ಲಿ ನನಗೆ ವಿಶೇಷ ಸ್ಥಾನ ಸಿಗುವಂತೆ ಮಾಡಿದೆ’ ಎಂದಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಈ ಕಾರನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಇಂಡಿಗೋನಿಂದ ಹಿಡಿದು ವಿಸ್ತಾ ಹಾಗೂ ಮಂಝ ಮಾಡೆಲ್ ಗಳ ತನಕ ಸಣ್ಣ ಕಾರುಗಳ ಉತ್ಪಾದನೆಗೆ ಇದು ನಾಂದಿ ಹಾಡಿತು.

ಬಿಡುಗಡೆಯಾದ ಕೇವಲ ಎರಡು ವರ್ಷಗಳಲ್ಲೇ ಈ ವಾಹನ ಯಶಸ್ಸು ಗಳಿಸುವ ಜೊತೆಗೆ ಅದರ ಫೀಚರ್ಸ್ ಹಾಗೂ ಲಭ್ಯತೆಯ ಹಿನ್ನೆಲೆಯಲ್ಲಿ ಜನರ ಪ್ರಿಯ ಬ್ರ್ಯಾಂಡ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಆದರೆ, 20 ವರ್ಷಗಳ ಬಳಿಕ ಅಂದರೆ 2018ರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಇದರ ಉತ್ಪಾದನೆ ಸ್ಥಗಿತಗೊಳಿಸಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯನಾರಸಿಂಹ ಕನ್ನಡದ ಮರೆಯಲಾಗದ ಚಿತ್ರ ಸಾಹಿತಿ.

Mon Jan 16 , 2023
ವಿಜಯನಾರಸಿಂಹ ಕನ್ನಡದ ಮರೆಯಲಾಗದ ಚಿತ್ರ ಸಾಹಿತಿಗಳ ಆಗ್ರಪಂಕ್ತಿಯಲ್ಲಿ ಚಿರವಿರಾಜಿತರು. ಪುಟ್ಟಣ್ಣ ಕಣಗಾಲ್‌, ಸಿದ್ಧಲಿಂಗಯ್ಯ ಮುಂತಾದ ಕನ್ನಡ ಚಿತ್ರರಂಗದ ಅಗ್ರಪಂಕ್ತಿಯ ಚಿತ್ರ ನಿರ್ದೇಶಕರ ಅವಿಸ್ಮರಣೀಯ ಚಿತ್ರಗಳಿಗೆ ತಮ್ಮ ಚಿತ್ರಗೀತೆಗಳ ಮೂಲಕ ಶೋಭೆ ತಂದವರು ವಿಜಯನಾರಸಿಂಹ. ವಿಜಯನಾರಸಿಂಹ 1927ರ ಜನವರಿ 16ರಂದು ಜನಿಸಿದರು. ವಿಜಯನಾರಸಿಂಹ ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಹಳ್ಳಿಯವರು. ಚಿಕ್ಕಂದಿನಿಂದಲೇ ನಾಟಕ, ಕಾದಂಬರಿ ಬರೆವ ಗೀಳು ಅಂಟಿಸಿಕೊಂಡ ವಿಜಯನಾರಸಿಂಹ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಪು.ತಿ.ನ, ಗೋಪಾಲಕೃಷ್ಣ ಅಡಿಗರಂಥ […]

Advertisement

Wordpress Social Share Plugin powered by Ultimatelysocial