ಕೆಲವರು ನಾನೇ ಸಮರ್ಥ ಎಂಬ ಭ್ರಮೆಯಲ್ಲಿದ್ದಾರೆ.

 

ಬೆಂಗಳೂರು: ಕೆಲವರು ನಾನೇ ಸಮರ್ಥ ಎಂಬ ಭ್ರಮೆಯಲ್ಲಿದ್ದಾರೆ. ನಾನು ಯಾವುದೇ ಭ್ರಮೆಯಲ್ಲಿ ಇಲ್ಲ. ಬೈದು ಜನರಿಂದ ಮತ ಪಡೆಯುವ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಮತ ಸಿಗುತ್ತೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ), ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಇಂದು ಮೈಸೂರು ರಸ್ತೆಯ ರಾಮಾನುಜ ಮಠದ ಆವರಣದಲ್ಲಿ ನಡೆಯುತ್ತಿರುವಂತ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಸಾಮರ್ಥ್ಯ, ಅಸಾಮರ್ಥ್ಯ ಅಂದ್ರೆ ಏನು ? ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನ ಕೊಟ್ಟಿದೆ. ಇದು ನಮ್ಮ ಸಾಮರ್ಥ್ಯ ಅಲ್ಲವೇ ? ಬೈದು ಜನರಿಂದ ಮತ ಪಡೆಯುವ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಮತ ಸಿಗುತ್ತೆ ಎಂದರು.

ಆರ್ಥಿಕತೆ ಅಂದ್ರೆ ಹಣವಲ್ಲ, ದುಡಿಮೆಯಾಗಿದೆ. ದುಡಿಮೆ ಹಚ್ಚುವ ಕೆಲಸ ಮಾಡುತ್ತಿದ್ದೇನೆ. ಸಾಮಾಜಿಕ ‌ನ್ಯಾಯ ಕೇವಲ ಭಾಷಣದ ವಸ್ತುವಾಗಿದೆ. ಯಾರಿಗೆ ಯಾವ ಸಾಮಾಜಿಕ ನ್ಯಾಯ ಕೊಟ್ಟಿದ್ದೀರ. ನಮ್ಮ ‌ಕೆಲಸದ ಮೇಲೆ ಮತ ಕೇಳುತ್ತೇವೆ ಎಂಬುದಾಗಿ ಪರೋಕ್ಷವಾಗಿ ಸಿದ್ದರಾಮಯ್ಯ ( Siddaramaiah ) ವಿರುದ್ಧ ವಾಗ್ದಾಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶದಲ್ಲಿ 53,942 ಧ್ವನಿವರ್ಧಕಗಳನ್ನು ತೆರವು!

Sun May 1 , 2022
  ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳ ಮೇಲ್ಲಿರುವ ದೊಡ್ಡ ಧ್ವನಿವರ್ಧಕಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು ಇಲ್ಲಿಯವರೆಗೆ ಒಟ್ಟು 53,942 ಲೌಡ್ ಸ್ಪೀಕರ್ಗಳನ್ನು ತೆರವುಗೊಳಿಸಿಲಾಗಿದೆ ಎಂದು ಯುಪಿ ಸರ್ಕಾರ ತಿಳಿಸಿದೆ. ಈ ಕುರಿತು ಮಾತನಾಡಿರುವ ಉತ್ತರಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ), ಭಾನುವಾರ ಬೆಳ್ಳಗ್ಗೆ 7ರವರೆಗು ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಿಂದ ಒಟ್ಟು 53,942 ಸ್ಪೀಕರ್ಗಳನ್ನು ತೆಗೆದು ಹಾಕಲಾಗಿದೆ ಮತ್ತು 60,295 ಧ್ವನಿವರ್ದಕಗಳ ಧ್ವನಿ ಮಟ್ಟವನ್ನು ಕಡಿಮೆ ಮಾಡಲಾಗಿದೆ […]

Advertisement

Wordpress Social Share Plugin powered by Ultimatelysocial