ವಟಗಲ್ ಬಿರಲಿಂಗೇಶ್ವರ ಗುಡಿಗೆ ಧರ್ಮ ಸ್ಥಳ ಯೋಜನೆ ನೆರವಿನ ಹಸ್ತ

ಸಿರವಾರ:ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯೂ ಜನರಿಗೆ ತುಂಬಾ ಚಿರಪರಿಚಿತ ಮಹಿಳೆಯರ ಧರ್ಮಸ್ಥಳ ಸಂಘ ಮಾಡುವುದರ ಜೊತೆಗೆ ಇದರಲ್ಲಿ ಸದಸ್ಯರಿಗೆ ಹಾಗೂ ನಿರ್ಗತಿಕರಿಗೆ ರೈತರಿಗೆ ಕೃಷಿ, ಆರೋಗ್ಯ, ಶಿಕ್ಷಣ, ಮಾಶಾಸನ, ಹಾಗೂ ವಿಮೆ ಸೇರಿದಂತೆ ಹತ್ತು ಹಲವಾರು ಜನಪರ ಕಾರ್ಯಗಳನ್ನ ಮಾಡುತ್ತಾ,ಜನರಿಗೋಸ್ಕರ ದುಡಿಯುವ ಯೋಜನೆಯಾಗಿದೆ.ಇನ್ನು ಕವಿತಾಳ ಪಟ್ಟಣಕ್ಕೆ ಸಮೀಪದ ವಟಗಲ್ ಗ್ರಾಮದಲ್ಲಿರುವ ಬಿರಲಿಂಗೇಶ್ವರ ಗುಡಿಗೆ ಒಂದು ಲಕ್ಷದ ಐವತ್ತು ಸಾವಿರ ಮೊತ್ತದ ಡಿ.ಡಿ ಯನ್ನ ಗುಡಿ ಜೀರ್ಣೋದ್ಧಾರಕ್ಕಾಗಿ ಸಮಿತಿಯವರ ಕೈಯಲ್ಲಿ ನೀಡಿದೆ.ಅತ್ಯಂತ ಪುರಾತನವಾದ ಗುಡಿಯು ತನ್ನದೇ ಆದ ಇತಿಹಾಸವನ್ನ ಹೊಂದಿದೆ, ಗುಡಿಗೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಧರ್ಮಸ್ಥಳ ನೆರವಿನ ಹಸ್ತ ಚಾಚಿದ್ದು, ಬಿರಲಿಂಗೇಶ್ವರ ಸಮಿತಿ ಸಂತಸವನ್ನ ವ್ಯಕ್ತಪಡಿಸಿದೆ.ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್, ಮಾನವಿ ಯೋಜನಾಧಿಕಾರಿ ಚಂದ್ರ ಹಾಸ್,ವಲಯ ಮೇಲ್ವಿಚಾರಕಿ ಮಹೇಶ್ವರಿ ಸೇರಿದಂತೆ, ಬಿರಲಿಂಗೇಶ್ವರ ಸಮಿತಿ ಅಧ್ಯಕ್ಷರಾದ ಮೊನೇಶ್ ಹಿರೇಕುರಬರ್ ,ಬಿರಪ್ಪ ಹೀರಾ ,ಯಮನಪ್ಪ ದಿನ್ನಿ, ಮೋನೇಶ ಪೂಜಾರಿಹೀರಾ, ಅದಪ್ಪ ಹೀರಾ.ಶಿವಣ್ಣ ಯಡವಟ್ ಮೊನೇಶ ಯಾದವ್ ಶಿವಕುಮಾರ್ ಬೀರಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬ್ಯಾನರ್‌ನಲ್ಲಿ ಮುನಿಯಪ್ಪ ಅವರ ಭಾವಚಿತ್ರ ಹಾಕಿಲ್ಲ ಎಂದು ಅವರ ಬಣದವರು ಆಕ್ಷೇಪ ತೆಗೆದರು!

Fri Jul 29 , 2022
ಕೋಲಾರ: ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ‘ಸಿದ್ದರಾಮಯ್ಯ 75’ ಕಾರ್ಯಕ್ರಮಕ್ಕೆ ಸಿದ್ಧತೆ ಸಂಬಂಧಿಸಿದಂತೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣದ ನಡುವೆ ಕಿತ್ತಾಟ ನಡೆಯಿತು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಉಭಯ ಬಣಗಳ ನಾಯಕರು ಪರಸ್ಪರ ಕೈಮಿಲಾಯಿಸುವ ಹಂತ ತಲುಪಿದ್ದರು. ಈ ಜಗಳವನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮದವರ ಮೇಲೆ ರಮೇಶ್ ಕುಮಾರ್ […]

Advertisement

Wordpress Social Share Plugin powered by Ultimatelysocial