ಸ್ಮಿತಾ ಪಾಟೀಲ್ ಭಾರತೀಯ ಚಿತ್ರರಂಗ ಕಂಡ ಅಮೋಘ ಪ್ರತಿಭೆ.

 

ಸ್ಮಿತಾ, ಪಾಟೀಲ್ ಅವರು 1955ರ ಅಕ್ಟೋಬರ್ 17ರಂದು ಪುಣೆಯಲ್ಲಿ ಜನಿಸಿದರು. ತಂದೆ ಮಹಾರಾಷ್ಟ್ರದ ಸಚಿವರಾಗಿದ್ದ ಶಿವಾಜಿರಾವ್ ಪಾಟೀಲ್. ತಾಯಿ ವಿದ್ಯಾಪಾಟೀಲ್. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದೀ ಪಕ್ಷದಲ್ಲಿದ್ದವರು. ಸ್ಮಿತಾ ಕಲಿತದ್ದು ಪುಣೆಯ ಭಾವೆ ಶಾಲೆ, ಫರ್ಗ್ಯೂಸನ್ ಕಾಲೇಜು, ಮುಂಬಯಿಯ ಎಲ್ಫಿನ್ಸ್ಟನ್ ಕಾಲೇಜು ಮತ್ತು ಸೇಂಟ್ ಕ್ಸೇವಿಯರ್ ಕಾಲೇಜುಗಳಲ್ಲಿ.
ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಕಲಿಯುವ ಆಸೆ ಹೊತ್ತಿದ್ದ ಸ್ಮಿತಾ ಪಾಟೀಲ್ ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿದ್ದಾಗ ಶಾಮ್ ಬೆನಗಲ್ ಅವರ ಕಣ್ಣಿಗೆ ಬಿದ್ದರು. ಹೀಗೆ ಅವರು ಪದವೀಧರರಾಗುವ ಮುಂಚೆಯೇ ಚಿತ್ರರಂಗಕ್ಕೆ ಕಾಲಿಟ್ಟರು, ಮತ್ತೆ ಹಿಂದಿರುಗಿ ನೋಡಲಿಲ್ಲ.
ಸ್ಮಿತಾ ಪಾಟೀಲರು ನಟಿಸಿದ ಮೊದಲ ಚಿತ್ರ ಸಾಮ್ನಾ. ಆಗಿನ್ನೂ ಇವರಿಗೆ 17ವರ್ಷ. ಮೊದಲ ಕಮರ್ಶಿಯಲ್ ಚಿತ್ರ ‘ಶಕ್ತಿ’. ಸತ್ಯಜಿತ್ ರೇ ಅವರ ‘ಸದ್ಗತಿ’ ಚಿತ್ರದಲ್ಲಿ ಅವಕಾಶ ಪಡೆದ ಇವರು ರೇ ಅವರ ದೂರದರ್ಶನ ಧಾರವಾಹಿಯಾದ ‘ಅಭಿನೇತ್ರಿ’ಯಲ್ಲೂ ಅಭಿನಯಿಸಿದರು. ಕನ್ನಡದ ‘ಅನ್ವೇಷಣೆ’ ಚಿತ್ರವೂ ಸೇರಿದಂತೆ ಹಿಂದಿ, ಗುಜರಾತಿ, ತೆಲುಗು, ಬಂಗಾಲಿ, ಮರಾಠಿ, ಮಲಯಾಳಮ್ ಮುಂತಾದ ಭಾಷೆಗಳ ಸುಮಾರು 50 ಚಿತ್ರಗಳಲ್ಲಿ ಅವರು ನಟಿಸಿದರು. ಆಗಾಗ ಮರಾಠಿ ನಾಟಕಗಳಲ್ಲೂ ಪಾತ್ರವಹಿಸುತ್ತಿದ್ದರು. ಭೂಮಿಕಾ, ಮಂಥನ್ ಚಿತ್ರಗಳು ಇವರಿಗೆ ಕೀರ್ತಿ ತಂದವು.
ಚರಣ್ದಾಸ್ ಚೋರ್; ನಿಶಾಂತ್; ಜೈತ್ ರೇ ಜೈತ್, ದಿ ನಕ್ಸಲೈಟ್ಸ್, ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂಂ ಆತಾ ಹೈ, ಸದ್ಗತಿ, ಬಜಾರ್, ಸುಬಹ್, ಶಕ್ತಿ, ಅರ್ಥ್, ದರ್ದ್ ಕಾ ರಿಷ್ತಾ, ಮಂಡಿ, ಅರ್ಧಸತ್ಯ, ತರಂಗ್, ಸಿತಂ ಮುಂತಾದವು ಇವರ ಇತರ ಯಶಸ್ವೀ ಚಿತ್ರಗಳು. ಇವರ ಕೊನೆಯ ಚಿತ್ರ ಅಂಗಾರೇ. ಕಲಾತ್ಮಕ ಚಿತ್ರಗಳಲ್ಲಾಗಲೀ, ಮನರಂಜನಾತ್ಮಕ ಚಿತ್ರಗಳಲ್ಲಾಗಲೀ ಅವರು ತಂದ ವೈವಿಧ್ಯ ಅಸಾಮಾನ್ಯವಾದುದು.
ಭಾರತೀಯ ಚಿತ್ರಮಾಧ್ಯಮದ ವಿಕಾಸ ಹಾಗೂ ಹೊಸ ಪ್ರವೃತ್ತಿಗಳ ಬೆಳೆವಣಿಗೆಯಲ್ಲಿ ಸ್ಮಿತಾ ಪಾಟೀಲ್ ಪಾತ್ರ ಹಿರಿದಾದುದು. ಗಂಭೀರ ಹಾಗೂ ಕಲಾತ್ಮಕ ಪಾತ್ರಗಳಲ್ಲಿ ತೇಜಸ್ವೀ ನಟಿಯಾಗಿ ಬೆಳಗಿದ ಇವರಿಗೆ ಸಮನಾಗಿ ನಿಂತವರು ವಿರಳ ಎನ್ನಬೇಕು. ಬಹುಮುಖ ಪ್ರತಿಭೆಯ ಈ ನಟಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದರು. ಹಲವು ವೇಳೆ ಇವರ ಅಭಿನಯ ಅನನುಕರಣೀಯ ಎನ್ನುವ ಮಟ್ಟಕ್ಕೆ ಏರಿದುದನ್ನು ಕಾಣಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

 

 

 

Please follow and like us:

Leave a Reply

Your email address will not be published. Required fields are marked *

Next Post

ಸಾಹುಕಾರ್ ಜಾನಕಿ ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿದ್ದಾರೆ

Fri Dec 23 , 2022
  ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ.ಸಾಹುಕಾರ್ ಜಾನಕಿ 1931ರ ಡಿಸೆಂಬರ್ 12ರಂದು ಜನಿಸಿದರು. ಮೂಲತಃ ಅವರ ಕುಟುಂಬದವರು ಉಡುಪಿಯವರು. ತಂದೆಯವರಿಗೆ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹೀಗಾಗಿ ಜಾನಕಿ ಅವರು ಆಂಧ್ರದ ರಾಜಮುಂಡ್ರಿಯಲ್ಲಿ ಜನಿಸಿದರು. ಅದರೆ ಮನೆಯಲ್ಲಿ ಅವರ ಮಾತು ಕನ್ನಡವೇ ಆಗಿತ್ತು. ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ […]

Advertisement

Wordpress Social Share Plugin powered by Ultimatelysocial