ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ

ಕಳೆದ ಮೂರು ವರ್ಷಗಳಿಂದ ಉತ್ತರ ಪ್ರದೇಶದ ಸಾರಿಗೆ ನಿಗಮ ರಕ್ಷಾ ಬಂಧನ ನಿಮಿತ್ತ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿದೆ. ಈ ವರ್ಷವು ಕೂಡ ಅದೇ ಪದ್ಧತಿಯನ್ನು ಮುಂದುವರಿಸಿದೆ. ಈ ವರ್ಷವೂ ರಕ್ಷಾ ಬಂಧನ ದಿನದಂದು ಮಹಿಳೆಯರಿಗೆ ಫ್ರೀ ರೈಡ್ ಗಿಫ್ಟ್ ನೀಡಲಾಗುತ್ತಿದೆ. ಎಲ್ಲಾ ಮಾದರಿಯ ಬಸ್ಸ್ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ. ಇದರ ಜೊತೆಗೆ ರಾಜಸ್ಥಾನದಲ್ಲೂ ಕೂಡ ಮಹಿಳೆಯರಿಗೆ ರಕ್ಷಾ ಬಂಧನದoದು ಪ್ರಯಾಣ ಉಚಿತವಾಗಿರಲ್ಲಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬ್ರಾಡ್ ವೇ ಆಸ್ಪತ್ರೆ ಕಾರ್ಯಾರಂಭ

Sun Aug 2 , 2020
ಶಿವಾಜಿನಗರದ ಬ್ರಾಡ್ ವೇ ಆಸ್ಪತ್ರೆಯನ್ನು ೨೦೦ ಹಾಸಿಗೆಗಳ ಕೋವಿಡ್ ಆಸ್ಪತ್ರೆಯಗಿ ಸಜ್ಜುಗೊಳಿಸಲಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್ ಪಾರಾ ಮೆಡಿಕಲ್ ಮತ್ತು ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಇನ್ನು ೨ವಾರದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial