ಬೆಂಗಳೂರಿನಲ್ಲಿ ‘The Conversion’ ಸಿನಿಮಾದ ಪ್ರೀಮಿಯರ್ ಶೋ..ಮೇ 6ಕ್ಕೆ ಬೆಳ್ಳಿತೆರೆಗೆ ಮತಾಂತರ ವಿಷಯಾಧಾರಿತ ಚಿತ್ರ ಎಂಟ್ರಿ!

ಮತಾಂತರ ವಿಷಯಾಧಾರಿತ ಸಿನಿಮಾ The Conversion ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಮೇ 6ರಂದು ಸಿನಿಮಾ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಂಡಿತ್ತು.ಇತ್ತೀಚೆಗಷ್ಟೇ ಅಹಮದಬಾದ್ ನಲ್ಲಿ ಪ್ರೀಮಿಯರ್ ಶೋ ನಡೆಸಿದ್ದ ಚಿತ್ರತಂಡ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಗರುಡ ಮಾಲ್ ನಲ್ಲಿಯೂ ಪ್ರೀಮಿಯರ್ ಶೋ ಆಯೋಜಿಸಿತ್ತು‌. ಈ ವಿಶೇಷ ಶೋಗೆ ಹಿಂದು ಸಂಘಟನೆಯ ಮುಖ್ಯಸ್ಥರು, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಭಾಗವಹಿಸಿ ಸಿನಿಮಾ ವೀಕ್ಷಣೆ ಮಾಡಿದರು.ವಿನೋದ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ the conversion ಸಿನಿಮಾದಲ್ಲಿ ಪ್ರತೀಕ್ ಶುಕ್ಲಾ ಮತ್ತು ರವಿ ಭಾಟೀಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಾಮಿಕ ಚೌಹಾಣ್, ರಾಜ್ ಪಾಟೇಲ್, ರಾಜ್ ನಸ್ಟ್ರೋಮ್ ಹಾಗೂ ವಿಫುಲ್ ಪಟೇಲ್ ಚಿತ್ರಕ್ಕೆ ಹಣ ಹಾಕಿದ್ದು, ಬರೋ ಮೇ 6 ರಿಂದ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಜೇಮ್ಸ್" ಚಿತ್ರದಲ್ಲಿ ಕೇಳಲಿದೆ ಪುನೀತ್ ರಾಜಕುಮಾರ್ ಧ್ವನಿ. ಅಪ್ಪು ಧ್ವನಿ ಮತ್ತೆ ತಂದ ಪಪ್ಪುಗೆ ಅಭಿನಂದನೆ.

Tue Apr 19 , 2022
ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್”. ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ‌ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು. ಇದೇ 22 ರ ಶುಕ್ರವಾರದಿಂದ “ಜೇಮ್ಸ್‌” ಚಿತ್ರದಲ್ಲಿ ಪುನೀತ್ ಅವರ ಧ್ವನಿ ಕೇಳಬಹುದು. ಇಂತಹದೊಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದ ಚಿತ್ರತಂಡ ಸಫಲವಾಗಿದೆ. […]

Advertisement

Wordpress Social Share Plugin powered by Ultimatelysocial