“ಜೇಮ್ಸ್” ಚಿತ್ರದಲ್ಲಿ ಕೇಳಲಿದೆ ಪುನೀತ್ ರಾಜಕುಮಾರ್ ಧ್ವನಿ. ಅಪ್ಪು ಧ್ವನಿ ಮತ್ತೆ ತಂದ ಪಪ್ಪುಗೆ ಅಭಿನಂದನೆ.

ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್”.

ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ‌ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು.

ಇದೇ 22 ರ ಶುಕ್ರವಾರದಿಂದ
“ಜೇಮ್ಸ್‌” ಚಿತ್ರದಲ್ಲಿ ಪುನೀತ್ ಅವರ ಧ್ವನಿ ಕೇಳಬಹುದು. ಇಂತಹದೊಂದು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದ ಚಿತ್ರತಂಡ ಸಫಲವಾಗಿದೆ. ಹೈದರಾಬಾದ್ ನ ಪಪ್ಪು ಅವರು ತಮ್ಮ ಬಿಟ್ ಮಂತ್ರ ತಂಡದೊಂದಿಗೆ ಸೇರಿ ಈ ಹೊಸ ಆವಿಷ್ಕಾರ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಪ್ರಯತ್ನ. ಈ ನೂತನ ತಂತ್ರಜ್ಞಾನಕ್ಕೆ ಅಪ್ಪು ಅವರ ಧ್ವನಿಯೇ ನಾಂದಿಯಾಗಿದೆ.

ನಾವು ಚಿತ್ರ ಆರಂಭಕ್ಕೂ ಮೊದಲೇ ಕೆಲವು ಸಂಸ್ಥೆಗಳನ್ನು ಸಂಪರ್ಕಿಸಿ, ಚಿತ್ರೀಕರಣದ ಸಮಯದಲ್ಲಿದ್ದ ಅಪ್ಪು ಅವರ ಧ್ವನಿ ಬಳಿಸಿ ಎನ್ನಾದರೂ ಮಾಡಬಹುದಾ? ಅಂತ ಕೇಳಿದ್ದೇವು. ಆದರೆ ಏನು ಆಗಿರಲಿಲ್ಲ. ಅದೇ ಸಮಯದಲ್ಲಿ ಪಪ್ಪು ಅವರನ್ನು ಸಂಪರ್ಕ ಮಾಡಿದ್ದೆವು. ಈಗ ಆರು ದಿನಗಳ ಮುಂಚೆ ಅವರಿಂದ ಒಳ್ಳೆಯ ಉತ್ತರ ಸಿಕ್ಕಿದೆ. ನಮ್ಮ ದೇವರ ಧ್ವನಿಯನ್ನು ಮತ್ತೆ ಕೇಳುವ ಹಾಗೆ ಆಗಿದೆ ಎಂದು ನಿರ್ದೇಶಕ ಚೇತನ್ ಕುಮಾರ್ ಭಾವುಕರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ "ಭೀಮ" ನಿಗೆ ಚಾಲನೆ. !

Tue Apr 19 , 2022
ವಿಜಯ ಕುಮಾರ್ (ದುನಿಯಾ ವಿಜಯ್) ನಿರ್ದೇಶನದ ಎರಡನೇ ಚಿತ್ರಕ್ಕೆ ಅದ್ದೂರಿ ಮುಹೂರ್ತ. ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, “ಸಲಗ” ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು. ವಿಜಯ್ ಅವರ ಎರಡನೇ ನಿರ್ದೇಶನದ “ಭೀಮ” ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. “ಸಲಗ” ನಂತರ […]

Advertisement

Wordpress Social Share Plugin powered by Ultimatelysocial