ಸೌತ್ ಇಂಡಸ್ಟ್ರೀಗೆ ಎಂಟ್ರಿ ಕೊಡಲು ರೆಡಿ ಆರ್ತಿ ಬೇಡಿ…ಯಾರು ಗೊತ್ತಾ ಈ ಬ್ಯೂಟಿ!

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹೈ ಸ್ಕೋರ್ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕುರಿಸಿತ್ತು. ಈ ಪಂದ್ಯದ ಮಧ್ಯೆ ಎಲ್ಲರ ಗಮನಸೆಳೆದಿದ್ದು ಆ ಬ್ಯೂಟಿ. ಅವ್ರೇ ಆರ್ತಿ ಬೇಡಿ. ಈ ಪಂದ್ಯದಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಆರ್ತಿ ಬೇಡಿ ರಾತ್ರೋ ರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು‌. ಇಂಟರ್ ನೆಟ್ ಜಗತ್ತಿನಲ್ಲಿ ಎಲ್ಲೆಡೆ ಆರ್ತಿ ಬೇಡಿ ಪಟಗಳು ವೈರಲ್ ಆದ ನಂತ್ರ ಈಕೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟರು.ಆರ್ತಿ ಬೇಡಿ ಖ್ಯಾತಿ ಈಗ ದುಪ್ಪಟ್ಟಾಗಿದೆ. ಈ ನಡುವೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ಈ ಬ್ಯೂಟಿ ತಯಾರಾಗ್ತಿದ್ದಾಳೆ. ಹಲವು ನಿರ್ಮಾಪಕರು, ನಿರ್ದೇಶಕರನ್ನು ಅಪ್ರೋಚ್ ಆಗಿರುವ ಆರ್ತಿ ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದು, ಈಗಾಗಲೇ ಕೆಲ ಕಥೆಗಳನ್ನು ಓದುತ್ತಿದ್ದು, ಆ ಕಥೆಗಳು ಇಷ್ಟವಾದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಎದುರು ಹಾಜರಾಗಲಿದ್ದಾರೆ.ಆರ್ತಿ ಬೇಡಿ ಹಿಮಾಲಯ, ಒಲಾ, ಐಸಿಐಸಿಐ ಬ್ಯಾಂಕ್, ವೈಲ್ಡ್ ಸ್ಟೋನ್ ನಂತಹ 35-40ಕ್ಕೂ ಜಾಹೀರಾತುಗಳಲ್ಲಿ ನಟಿಸ್ತಿದ್ದಾರೆ. ಸದ್ಯ ಆರ್ತಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಲು ಅಖಾಡ ಸಿದ್ಧ ಮಾಡಿಕೊಳ್ತಿದ್ದು, ಯಾವ ರೀತಿ ಸಿನಿಮಾವನ್ನು ಚ್ಯೂಸ್ ಮಾಡ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಊಹೆಗೂ ಮೀರಿದ ವಸಿಷ್ಠನ 'Love...ಲಿ' ಇಂಟ್ರೂಡಕ್ಷನ್ ಫೈಟ್ ಸೀನ್ಸ್...

Sat May 14 , 2022
ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಹೀರೋ, ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸ್ತಿರುವ Love…ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಇದೇ ತಿಂಗಳ 4 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇಂಟ್ರೂಡಕ್ಷನ್ ಫೈಟ್ಸ್ ಸೀನ್ಸ್ ಚಿತ್ರೀಕರಣ ಕಂಪ್ಲೀಟ್ ಆಗಿದೆ.ಹೇಗಿದೆ ಇಂಟ್ರೂಡಕ್ಷನ್ ಫೈಟ್ ಸೀನ್ಸ್?Love..ಲಿ ಸಿನಿಮಾದ ಇಂಟ್ರೂಡಕ್ಷನ್ ಫೈಟ್ ಸೀನ್ಸ್, ಸಖತ್ ಅದ್ಧೂರಿಯಾಗಿ ಮೂಡಿ ಬಂದಿದೆ. ವಸಿಷ್ಠ, ಸುಧಿ, ಶೋಭರಾಜ್ ಹಾಗೂ ವರದ ಫೈಟ್ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ವಿಶೇಷ ಅಂದ್ರೆ ವಸಿಷ್ಠ […]

Advertisement

Wordpress Social Share Plugin powered by Ultimatelysocial