ಟೆಸ್ಟ್ ಸರಣಿ: ಭಾರತದ ವಿರುದ್ಧ ತಿರುಗಿಬೀಳುವ ಸುಳಿವು ನೀಡಿದ ದ.ಆಫ್ರಿಕಾ ವೇಗಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಭಾರತದ ಆರಂಭಿಕ ಆಟಗಾರರು ಪ್ರದರ್ಶಿಸಿದ ಉತ್ತಮ ಆಟದ ಕಾರಣದಿಂದಾಗಿ ಟೀಮ್ ಇಂಡಿಯಾ ಮೊದಲ ದಿನ ಮೂರು ವಿಕೆಟ್ ಕಳೆದುಕೊಂಡು 272 ರನ್‌ಗಳನ್ನು ಗಳಿಸಿದೆ.

ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಬೃಹತ್ ಮೊತ್ತವನ್ನು ಪೇರಿಸುವ ಮುನ್ಸೂಚನೆ ನೀಡಿದೆ. ಶತಕ ಸಿಡಿಸಿರುವ ಕೆಎಲ್ ರಾಹುಲ್ ಹಾಗೂ ಅರ್ಧ ಶತಕದ ಸನಿಹದಲ್ಲಿರುವ ಅಜಿಂಕ್ಯಾ ರಹಾನೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆದರೆ ಮೊದಲ ದಿನದಾಟದಲ್ಲಿ ಭಾರತ ಅದ್ಭುತತ ಆಟವನ್ನು ಪ್ರದರ್ಶಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ವಿಶ್ವಾಸವನ್ನು ಹರಿಣಗಳ ತಂಡದ ವೇಗಿ ಲುಂಗಿ ಎನ್‌ಗಿಡಿ ವ್ಯಕ್ತಪಡಿಸಿದ್ದಾರೆ. ಮೊದಲ ದಿನ ಭಾರತ ಕಳೆದುಕೊಂಡ ಮೂರು ವಿಕೆಟ್‌ಗಳು ಕೂಡ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಪಾಲಾಗಿದೆ. ಹೀಗಾಗಿ ಎರಡನೇ ದಿನ ಮತ್ತಷ್ಟು ತೀಕ್ಷ್ಣ ದಾಳಿಯ ಮುನ್ಸೂಚನೆ ನೀಡಿದ್ದಾರೆ.

“ಇದು ಟೆಸ್ಟ್ ಕ್ರಿಕೆಟ್. ಇಲ್ಲಿ ನೀವು ಸೆಶನ್‌ಗಳಲ್ಲಿ ಗೆಲ್ಲ ಬಹುದು ಸೆಶನ್‌ಗಳಲ್ಲಿ ಸೋಲು ಕಾಣಬಹುದು. ಎಲ್ಲವೂ ಸಾಧ್ಯವಿದೆ. ಆದರೆ ಇದು ಕ್ರಿಕೆಟ್‌ನ ಉತ್ತಮವಾದ ದಿನವಾಗಿತ್ತು. ಆದರೆ ಈ ಪಿಚ್‌ನಲ್ಲಿ ಇನ್ನು ಕೂ ಬಹಳಷ್ಟು ಬಾಕಿಯಿದೆ. ಪರಿಸ್ಥಿತಿಗಳು ಕ್ಷಣಾರ್ಧದಲ್ಲಿ ಬದಲಾಗಬಹುದು” ಎಂದು ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಲುಂಗಿ ಎನ್‌ಗಿಡಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೊದಲ ದಿನದ 41ನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಭಾರತ ಎರಡು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಭಾರತದ ಆರಂಭಿಕರು ಶತಕದ ಜೊತೆಯಾಟವನ್ನು ಆಡಿ ಮುನ್ನುಗ್ಗುತ್ತಿದ್ದ ವೇಳೆ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಆಘಾತ ನೀಡಿದರು. ನಂತರ ಮುಂದಿನ ಎಸೆತದಲ್ಲಿಯೇ ಅನುಭವಿ ಚೇತೇಶ್ವರ್ ಪೂಜಾರ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಈ ಬಗ್ಗೆ ಮಾತನಾಡಿದ ಎನ್‌ಗಿಡಿ “ನೀವು ಎರಡು ಪಂದ್ಯದಲ್ಲಿ ಎರಡು ವಿಕೆಟ್ ಪಡೆಯಲು ಯಶಸ್ವಿಯಾದಿರಿ ಎಂದರೆ ಇಲ್ಲಿ ಏನು ಬೇಕಾದರೂ ನಡೆಯಲು ಸಾಧ್ಯವಿದೆ ಎಂದರ್ಥ. ನಾವು ಬೆಳಿಗ್ಗೆ ಶೀಘ್ರವಾಗಿ ಒಂದೆರಡು ಯಶಸ್ಸು ಪಡೆಯಲು ಸಾಧ್ಯವಾದರೆ ಅದು ಪಂದ್ಯವನ್ನು ನಮ್ಮತ್ತ ಬದಲಾಯಿಸಲು ಸಾಧ್ಯವಾಗಲಿದೆ” ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಇನ್ನು ಭಾರತ ತಂಡವನ್ನು 340-350ರ ಒಳಗೆ ಆಲೌಟ್ ಮಾಡಲು ಸಾಧ್ಯವಾದರೆ ಅದು ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ಉತ್ತಮವಾದ ಸಂಗತಿ ಎಂದು ಕೂಡ ವೇಗಿ ಹೇಳಿದ್ದಾರೆ. ಲುಂಗಿ ಎನ್‌ಗಿಡಿ ದಕ್ಷಿಣ ಆಫ್ರಿಕಾ ಪರವಾಗಿ ಮೊದಲ ದಿನದಾಟದಲ್ಲಿ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ. 17 ಓವರ್‌ಗಳ ಬೌಲಿಂಗ್ ಮಾಡಿದ ಎನ್‌ಗಿಡಿ 45 ರನ್‌ಗಳಿಗೆ 3 ವಿಕೆಟ್ ಪಡೆದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಎರಡು ಬಾರಿ ಗೋಲ್ಡನ್ ಡಕ್‌ಗೆ ಬಲಿ ಪಡೆದ ಏಕೈಕ ಬೌಲರ್ ಆಗಿದ್ದಾರೆ.

ಶಿಸ್ತಿನ ಆಟವನ್ನು ಭಾರತೀಯರು ಪ್ರದರ್ಶಿಸಿದರು: ಇನ್ನು ಇದೇ ಸಂದರ್ಭದಲ್ಲಿ ಲುಂಗಿ ಎನ್‌ಗಿಡಿ ಪಿಚ್ ಹೆಚ್ಚು ಸ್ವಿಂಗ್ ಆಗದಿರುವ ಕಾರಣ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಕೂಡ ತಿಳಿಸಿದರು. ಅಲ್ಲದೆ ಟೀಮ್ ಇಂಡಿಯಾದ ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದ ಅವರು ಮೊದಲ ದಿನ ಟೀಮ್ ಇಂಡಿಯಾದ ಬ್ಯಾಟರ್‌ಗಳು ಅತ್ಯಂತ ಶಿಸ್ತಿನ ಆಟವನ್ನು ಪ್ರದರ್ಶಿಸಿದ್ದಾರೆ ಎಂದಿದ್ದಾರೆ. “ನಾನು ಸ್ವಲ್ಪ ಹೆಚ್ಚು ಸ್ವಿಂಗ್ ಆಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಅದು ಆಗದಿದ್ದಾಗ ನೀವು ನಿಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಯಿತು” ಎಂದಿದ್ದಾರೆ ಎನ್‌ಗಿಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಣೇಬೆನ್ನೂರು: ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾದು ಕುಳಿತ ಎಂಎಲ್‌ಸಿ ಶಾಂತಾರಾಮ್ ಸಿದ್ಧಿ

Mon Dec 27 , 2021
ಹಾವೇರಿ, ಡಿಸೆಂಬರ್ 27: ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರಾದರೆ ಸಾಕು ಐಷಾರಮಿ ಕಾರಿನಲ್ಲಿ ಓಡಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial