ಐದು ತಿಂಗಳ ನಂತರ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಪತ್ನಿ ಪ್ರತ್ಯಕ್ಷ!

ಸಿಯೋಲ್‌: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪತ್ನಿ ರೈ ಸೊಲ್‌ ಜು 5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ನಾಪತ್ತೆಯಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆ ಎಂಬ ಶಂಕೆಗಳಿಗೆ ತೆರೆಬಿದ್ದಿದೆ.ಚಂದ್ರಮಾನ ಹೊಸವರ್ಷದ ರಜಾದಿನದಂದು ನಡೆದ ಸಂಗೀತೋತ್ಸವದಲ್ಲಿ ಕಿಮ್‌, ಪತ್ನಿಯೊಂದಿಗೆ ಹಾಜರಾದರು.ಒಡನೆಯೇ ಜನರು ಜೋರಾಗಿ ಕೂಗಿ ಇಬ್ಬರನ್ನೂ ಸ್ವಾಗತಿಸಿದರು. ಜನರ ಈ ಖುಷಿಗೆ ಇನ್ನೊಂದು ಕಾರಣವೂ ಇದೆ.ಎಲ್ಲ ಸಂಕಷ್ಟಗಳ ನಡುವೆಯೂ ಕಿಮ್‌ ಉತ್ತರ ಕೊರಿಯವನ್ನು ಬಲಿಷ್ಠವಾಗಿ ಮುನ್ನಡೆಸುತ್ತಿದ್ದಾರೆ. ಅದರ ರಕ್ಷಣಾ ವ್ಯವಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ ಎನ್ನುವುದೇ ಇದಕ್ಕೆ ಕಾರಣ.ಜ.30ರಂದು ಕಿಮ್‌ ದೂರ ತಲುಪಬಲ್ಲ ಕ್ಷಿಪಣಿಯೊಂದನ್ನು ಪರೀಕ್ಷಿಸಿದ್ದಾರೆ. ಅದೇ ತಿಂಗಳಲ್ಲಿ ಇನ್ನೂ ಕೆಲ ಕ್ಷಿಪಣಿಗಳನ್ನು ಪರೀಕ್ಷಿಸಿದ್ದಾರೆ. ಇದು ಪರೋಕ್ಷವಾಗಿ ಅಮೆರಿಕದ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು ̤

Thu Feb 3 , 2022
ಉಡುಪಿ: ಸರ್ಕಾರದ ಆದೇಶವಿದ್ದರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದಿದ್ದರಿಂದ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ಉಂಟಾದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು.ಬಳಿಕ ಹಿಜಾಬ್ ಕಳಚಿ ಕ್ಲಾಸ್​ಗೆ ಬರುವಂತೆ ಸೂಚಿಸಿದರು.ಈ ವೇಳೆ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಾದಿಸಿದರು. ಆದರೆ, ಸರಕಾರ […]

Advertisement

Wordpress Social Share Plugin powered by Ultimatelysocial