‘ಧೂಮಪಾನ’ ದಿಂದಾಗುವ ಹಾನಿಯನ್ನು ಕಡಿಮೆ ಮಾಡುತ್ತೆ ಈ ಆಹಾರ

 

ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ.

ಇದರಿಂದ ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ ಮುಂತಾದ ಭಾಗಗಳು ಹಾನಿಗೀಡಾಗುತ್ತವೆ.

ಆರೋಗ್ಯಕ್ಕೆ ಹಾನಿ ಮಾಡುವ ಧೂಮಪಾನದಿಂದ ದೂರವಿರಲು ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟುವಂತ ಕೆಲವು ಆಹಾರಗಳು ಹೀಗಿವೆ.

ಕಿತ್ತಳೆ : ಧೂಮಪಾನ ಮಾಡುವವರು ವಿಟಮಿನ್ ‘ಸಿ’ ಅಂಶ ಹೇರಳವಾಗಿರುವ ಕಿತ್ತಳೆ ಹಣ್ಣಿನ ಸೇವನೆ ಮಾಡಬೇಕು. ನಿಕೋಟಿನ್ ವಿರುದ್ಧ ಹೋರಾಡಲು ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ‘ಸಿ’ ಯ ಅಗತ್ಯವಿರುತ್ತದೆ. ಹಾಗಾಗಿ ಧೂಮಪಾನಿಗಳು ವಿಟಮಿನ್ ‘ಸಿ’ ಯಿಂದ ಕೂಡಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ಕ್ರ್ಯಾನ್ ಬೆರ್ರಿ : ಕ್ರ್ಯಾನ್ ಬೆರ್ರಿಯಲ್ಲಿರುವ ಆಮ್ಲೀಯ ಅಂಶಗಳು ಶರೀರದಲ್ಲಿರುವ ನಿಕೋಟಿನ್ ಅಂಶವನ್ನು ಹೊಡೆದು ಹಾಕುತ್ತದೆ.

ಬ್ರಕೋಲಿ : ಬ್ರಕೋಲಿಯಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಬಿ5’ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಚಯಾಪಚಯ ಕ್ರಿಯೆಗಳು ಸರಾಗವಾಗುತ್ತದೆ ಮತ್ತು ಶ್ವಾಸಕೋಶಗಳ ಸೋಂಕುಗಳನ್ನು ತಡೆಗಟ್ಟಬಹುದಾಗಿದೆ.

ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಪಾಲಿಕ್ ಎಸಿಡ್ ಮತ್ತು ವಿಟಮಿನ್ ‘ಬಿ9’ ಹೇರಳವಾಗಿರುತ್ತದೆ. ಇದು ದೇಹದಲ್ಲಿರುವ ಹಾನಿಕಾರಕ ನಿಕೋಟಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಶುಂಠಿ : ಶುಂಠಿಯ ಸೇವನೆಯಿಂದ ನಿಕೋಟಿನ್ ನಿಂದ ಉಂಟಾಗುವ ಹಾನಿಯನ್ನು ತಪ್ಪಿಸಬಹುದು ಮತ್ತು ಇದರ ಸೇವನೆಯಿಂದ ನಿಕೋಟಿನ್ ಸೇವಿಸುವ ಬಯಕೆ ಕೂಡ ಕಡಿಮೆಯಾಗುತ್ತದೆ.

ನಿಂಬು : ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಎಸಿಡ್ ಮತ್ತು ವಿಟಮಿನ್ ‘ಸಿ’ ಧೂಮಪಾನದಿಂದಾಗುವ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದ ಶರೀರ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.

ಕ್ಯಾರೆಟ್ : ಪ್ರತಿ ದಿನ ಕ್ಯಾರೆಟ್ ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ‘ಸಿ’ ಮತ್ತು ‘ಎ’ ಅಂಶಗಳು ಹೇರಳವಾಗಿ ಸಿಗುತ್ತವೆ.

ದಾಳಿಂಬೆ : ದಾಳಿಂಬೆ ಹಣ್ಣಿನ ಸೇವನೆಯಿಂದ ರಕ್ತಸಂಚಲನ ಸರಾಗವಾಗಿ ನಡೆಯುತ್ತದೆ ಮತ್ತು ಇದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಉಕ್ರೇನ್ ಆಕ್ರಮಿಸುತ್ತಿದ್ದಂತೆ ಇಮ್ರಾನ್ ಖಾನ್ ಪುಟಿನ್ ಭೇಟಿಯಲ್ಲಿ ಕಾಶ್ಮೀರ ಸಮಸ್ಯೆ ಅನ್ನು ಕಂಡುಕೊಳ್ಳುತ್ತದೆ;

Fri Feb 25 , 2022
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಶ್ಯದಲ್ಲಿರುವ ‘ಉತ್ತೇಜಕ’ ಸಮಯವು ಅದರ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ‘ಮಿಲಿಟರಿ ಕಾರ್ಯಾಚರಣೆ’ ನಡೆಸುತ್ತಿದ್ದಂತೆ ಮತ್ತೊಂದು ಮಹತ್ವದ ಬೆಳವಣಿಗೆಯನ್ನು ಕಂಡಿತು. ರಷ್ಯಾದ ಪಡೆಗಳು ಗುರುವಾರ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಮುಂದಾದಾಗ, ಖಾನ್ ಅದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ಅಗತ್ಯವನ್ನು ಒತ್ತಿಹೇಳಿದರು ಎಂದು ಪಾಕಿಸ್ತಾನದ ಅಧಿಕೃತ APP ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರು ಮಾಸ್ಕೋದೊಂದಿಗೆ “ದೀರ್ಘಾವಧಿಯ ಮತ್ತು […]

Advertisement

Wordpress Social Share Plugin powered by Ultimatelysocial