ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಭಕ್ತಾದಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಂಗಳೂರು: ಕುಕ್ಕೆ ಸುಬ್ರಮಣ್ಯದಲ್ಲಿ ಕೋವಿಡ್‌ನಿಂದ ಹೇರಲಾಗಿದ್ದ ಸೇವೆಗಳ ನಿರ್ಬಂಧ ತೆರವು ಮಾಡಲಾಗಿದ್ದು, ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.ಹೌದು, ರಾಜ್ಯದಲ್ಲಿ ಇದೀಗ ಸೋಂಕು ತಗ್ಗಿದ ಹಿನ್ನೆಲೆ ದೇವಾಲಯದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ತೆಗೆಯಲಾಗಿದೆ.ಇದೇ ವೇಳೆ ಆದೇಶ ಪತ್ರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಹಿಂದಿನಂತೆ, ಭಕ್ತಾದಿಗಳು ಸೇವೆಗಳನ್ನು ನೇರವೇರಿಸಲು ಅವಕಾಶ ಮಾಡಿಕೊಡಲಾಗಿದೆ ಅಂತ ಹೇಳಿದೆ.

ಆದೇಶದಲ್ಲಿ ಇರೋದು ಏನು?
ರಾಜ್ಯ ಸರ್ಕಾರದ ನಡವಳಿ ಸಂಖ್ಯೆ ಆರ್. ಡಿ 158 ಟಿ.ಯನ್.ಆರ್ 2020, ದಿನಾಂಕ 29-01-2022 ರ ಆದೇಶದ ಮೇರೆಗೆ, ಕೋವಿಡ್-19 ರ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿಕೊಂಡು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ದಿನಾಂಕ 01/02/2022 ರಿಂದ, ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ, ಎಲ್ಲಾ ಸೇವೆಗಳನ್ನು ನೆರವೇರಿಸಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.ಸೇವಾಕರ್ತರು ಕನಿಷ್ಠ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ವರದಿ ಹಾಜರಿ ಪಡಿಸುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮನಗರ: ಮಾ. 12ರಂದು ಮೆಗಾ ಲೋಕ ಅದಾಲತ್‌

Wed Feb 2 , 2022
ರಾಮನಗರ: ಇದೇ 12ರಂದು ಜಿಲ್ಲೆಯ ವಿವಿಧ ನ್ಯಾಯ ಪೀಠಗಳಲ್ಲಿ ಮೆಗಾ ಲೋಕ ಅದಾಲತ್‌ ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶೆ ಬಿ.ಜಿ.ರಮಾ ತಿಳಿಸಿದ್ದಾರೆ.ಜಿಲ್ಲೆಯಾದ್ಯಂತ 20 ನ್ಯಾಯಪೀಠಗಳಲ್ಲಿ ಏಕಕಾಲಕ್ಕೆ ಈ ಅದಾಲತ್‌ ನಡೆಯಲಿದೆ. ಕಕ್ಷಿದಾರರು ಹಾಗೂ ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು. ಇಲ್ಲವೇ ಆನ್‌ಲೈನ್‌ ಮೂಲಕವೂ ಹಾಜರಾಗಬಹುದುಎಂದಿದ್ದಾರೆ. ರಾಜಿ ಪ್ರಕರಣಗಳು: ಜಿಲ್ಲೆಯಲ್ಲಿ ಒಟ್ಟು 45,318 ಪ್ರಕರಣಗಳು ಬಾಕಿ ಇದ್ದು, ಇವುಗಳ ಪೈಕಿ […]

Advertisement

Wordpress Social Share Plugin powered by Ultimatelysocial