‘ಮೊದಲ ಪ್ಯಾನ್​ ಇಂಡಿಯಾ ಚಿತ್ರ ನಮ್ಮ ಕನ್ನಡದ್ದು’: ದಶಕಗಳ ಹಿಂದಿನ ಮಾಹಿತಿ ತಿಳಿಸಿದ ಎಸ್​. ನಾರಾಯಣ್​

‘ಅಂದು ರವಿಚಂದ್ರನ್​ ಮಾಡಿದ ಕೆಲಸವನ್ನು ಇಂದಿಗೂ ಯಾರೂ ಮಾಡಲು ಸಾಧ್ಯವಿಲ್ಲ’ ಎನ್ನುವ ಮೂಲಕ ‘ಶಾಂತಿ ಕ್ರಾಂತಿ’ ಚಿತ್ರದ ಬಗ್ಗೆ ಎಸ್​. ನಾರಾಯಣ್​ ಮಾತನಾಡಿದ್ದಾರೆ.

ಈಗ ಸ್ಟಾರ್​ ನಟರ ಬಹುತೇಕ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿವೆ.

ಏಕಕಾಲಕ್ಕೆ ಬಹುಭಾಷೆಯಲ್ಲಿ ರಿಲೀಸ್​ ಮಾಡುವ ಮೂಲಕ ದೇಶಾದ್ಯಂತ ಧೂಳೆಬ್ಬಿಸಿದ ಚಿತ್ರಗಳು ಸಾಕಷ್ಟಿವೆ. ಕನ್ನಡ ಚಿತ್ರರಂಗದಲ್ಲಿ ದಶಕಗಳ ಹಿಂದೆಯೇ ಪ್ಯಾನ್​ ಇಂಡಿಯಾ ಮಟ್ಟದ ಸಿನಿಮಾ ಬಂದಿತ್ತು ಎಂದಿದ್ದಾರೆ ನಟ/ನಿರ್ದೇಶಕ ಎಸ್​. ನಾರಾಯಣ್​. ‘ಕನ್ನಡದಲ್ಲಿ ಬಂದ ‘ಶಾಂತಿ ಕ್ರಾಂತಿ’ (Shanti Kranti Movie) ಚಿತ್ರವೇ ಭಾರತದ ಮೊದಲ ಫ್ಯಾನ್​ ಇಂಡಿಯಾ ಸಿನಿಮಾ. ಆ ರೀತಿ ಸಿನಿಮಾ ನಿರ್ಮಾಣ ಮಾಡಲು ಈಗಲೂ ಯಾರಿಗೂ ಸಾಧ್ಯವಿಲ್ಲ. ಆಗ ನಾವೆಲ್ಲ ಸಹಾಯಕ ನಿರ್ದೇಶಕರು. ಆ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತಾ ಅಂತ ಕಾಯುತ್ತಿದ್ವಿ. ಕಂಠೀರವ ಸ್ಟುಡಿಯೋದಲ್ಲಿ ಅದರ ಶೂಟಿಂಗ್ ಆಗುತ್ತಿತ್ತು. ಏಕಕಾಲಕ್ಕೆ ನಾಲ್ಕು ಭಾಷೆಯಲ್ಲಿ ಅದರ ಚಿತ್ರೀಕರಣ ಮಾಡಲಾಗುತ್ತಿತ್ತು. ಈಗ ಒಂದು ಭಾಷೆಯಲ್ಲಿ ಶೂಟಿಂಗ್​ ಮಾಡಿ ಇನ್ನುಳಿದ ಭಾಷೆಗಳಿಗೆ ಡಬ್​ ಮಾಡುತ್ತೇವೆ. ಆದರೆ ರವಿಚಂದ್ರನ್ (Ravichandran)​ ಅವರು ಎಲ್ಲ ಭಾಷೆಯ ಕಲಾವಿದರನ್ನು ಇಟ್ಟುಕೊಂಡು ಒಟ್ಟಿಗೆ ಶೂಟಿಂಗ್​ ಮಾಡುತ್ತಿದ್ದರು’ ಎಂದು ಆ ದಿನಗಳನ್ನು ಎಸ್​. ನಾರಾಯಣ್​ (S Narayan) ನೆನಪಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಸೋನು ಸೂದ್ ಸರ್ಕಾರವನ್ನು ಒತ್ತಾಯ!

Fri Feb 25 , 2022
ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ನಟ ಸೋನು ಸೂದ್ ಗುರುವಾರ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಸೂದ್ ಬರೆದಿದ್ದಾರೆ, “ಉಕ್ರೇನ್‌ನಲ್ಲಿ 18000 ಭಾರತೀಯ ವಿದ್ಯಾರ್ಥಿಗಳು ಮತ್ತು ಹಲವಾರು ಕುಟುಂಬಗಳು ಸಿಲುಕಿಕೊಂಡಿವೆ, ಅವರನ್ನು ಮರಳಿ ಪಡೆಯಲು ಸರ್ಕಾರವು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು ಎಂದು ನನಗೆ ಖಾತ್ರಿಯಿದೆ. ಅವರಿಗಾಗಿ ಪರ್ಯಾಯ ಮಾರ್ಗವನ್ನು ಹುಡುಕಲು ನಾನು ಭಾರತೀಯ ರಾಯಭಾರ ಕಚೇರಿಯನ್ನು ಒತ್ತಾಯಿಸುತ್ತೇನೆ. […]

Advertisement

Wordpress Social Share Plugin powered by Ultimatelysocial