ಯುದ್ಧದ ಕುರಿತು ಗೇಲಿ : ಟೀಕೆಗಳ ಬಳಿಕ ಟ್ವೀಟ್ ಡಿಲೀಟ್ ಮಾಡಿದ ಅರ್ಷದ್ ವಾರ್ಸಿ

 

 

ಮುಂಬಯಿ : ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಕುರಿತಾಗಿ ಹಾಸ್ಯದ ರೂಪದಲ್ಲಿ ಮಾಡಿದ ಮೆಮೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಅರ್ಷದ್ ವಾರ್ಸಿ ಅವರು ಗೋಲ್ ಮಾಲ್ ಚಿತ್ರದ ದೃಶ್ಯವೊಂದನ್ನು ಟ್ವೀಟ್ ಮಾಡಿ, ಯುದ್ಧದ ಸನ್ನಿವೇಶವನ್ನು ತುಲನೆ ಮಾಡಿದ್ದರು.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವರು ಟ್ವೀಟ್ ಮಾಡಿ ನಟನ ವಿರುದ್ಧ ಖಂಡನೆ ವ್ಯಕ್ತಪಡಿಸಿ, ಯುದ್ಧವನ್ನು ಸಂಭ್ರಮಿಸುವ, ಹಾಸ್ಯ ಮಾಡುವ ಸಮಯ ಇದಲ್ಲ ಎಂದು ಬರೆದಿದ್ದರು.

ಒಬ್ಬ ವ್ಯಕ್ತಿ ಎಷ್ಟು ಸಂವೇದನಾಶೀಲನಾಗಿರಬಹುದು? ಎಂದು ಹಲವಾರು ಪ್ರಶ್ನಿಸಿದ್ದಾರೆ.
ಹಾಸ್ಯ ಮಾಡಲು ಇದು ಸರಿಯಾದ ಸಮಯವಲ್ಲ ಸರ್…ಯುದ್ಧವು ತುಂಬಾ ಅಪಾಯಕಾರಿ ಸನ್ನಿವೇಶವಾಗಿದೆ…ನಾವು ಗೇಲಿ ಮಾಡಬಾರದು ಎಂದು ಹಲವಾರು ಮಂದಿ ಬರೆದಿದ್ದಾರೆ.

ಆಕ್ರೋಶ ವ್ಯಕ್ತವಾದ ಬಳಿಕ ಅರ್ಷದ್ ವಾರ್ಸಿ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎನ್‌ಸಿಡಿಎಫ್‌ಐಗೆ ಬಾಲಚಂದ್ರ ಜಾರಕಿಹೊಳಿ ಆಯ್ಕೆ

Fri Feb 25 , 2022
  ಬೆಳಗಾವಿ: ಗುಜರಾತ್‌ನಲ್ಲಿರುವ ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ (ಎನ್‌ಸಿಡಿಎಫ್‌ಐ)ದ ಆಡಳಿತ ಮಂಡಳಿ ನಿರ್ದೇಶಕರಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ರಾಜ್ಯದ ಆನಂದ್ ನಗರದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳದಿಂದ ಶಾಮಲ್ ಬಾಯ್ ಪಟೇಲ್, ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದಿಂದ ವೆಂಕಟರಾವ್ ನಾಡಗೌಡ, ಹರಿಯಾಣ ಸಹಕಾರ ಹೈನು ಅಭಿವೃದ್ಧಿ ಮಹಾಮಂಡಳದಿಂದ ರಣಧೀರಸಿಂಗ್ […]

Advertisement

Wordpress Social Share Plugin powered by Ultimatelysocial