ಠಾಣೆಯ ಮುಂದೆ ನಿಲ್ಲಿಸಿದ್ದ ಪೊಲೀಸ್​ ವಾಹನವನ್ನೇ ಕದ್ದೊಯ್ದು ಭೂಪ: ಆತ ಹೇಳಿದ್ದನ್ನು ಕೇಳಿ ದಂಗಾದ ಪೊಲೀಸರು!

ಧಾರವಾಡ: ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ ಪೊಲೀಸ್​ ವಾಹನವನ್ನೇ ಖದೀಮನೊಬ್ಬ ಎಗರಿಸಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ಠಾಣೆಯಲ್ಲಿ ನಡೆದಿದೆ.ನಾಗಪ್ಪ‌ ಹಡಪದ ಎಂಬಾತನಿಂದ‌ ಕಳ್ಳತನ ನಡೆದಿದೆ. ಈತ ಅಣ್ಣಿಗೇರಿ ಅಂಬಿಕಾ ನಗರ ನಿವಾಸಿ.ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನವನ್ನು ಕಳ್ಳತನ ಮಾಡಿಕೊಂಡು ಬ್ಯಾಡಗಿವರೆಗೂ ಹೋಗಿದ್ದ. ಬಳಿಕ ವಾಹನವನ್ನು ತಡೆದು ಆತನನ್ನು ಪೊಲೀಸರು ವಶಕ್ಕೆ ಪಡೆಡು ಠಾಣೆಗೆ ಕರೆತಂದಿದ್ದಾರೆ.ಪೊಲೀಸ್​ ವಾಹನ ಯಾರು ಮುಟ್ಟುತ್ತಾರೆ ಎಂದು ಸಿಬ್ಬಂದಿ ಕೀ ಅನ್ನು ವಾಹನದಲ್ಲೇ ಬಿಟ್ಟಿದ್ದರು. ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ವಾಹನವನ್ನು ಸಿಬ್ಬಂದಿ ಬಳಸುತ್ತಿದ್ದರು. ಕೀ ಇದ್ದಿದ್ದನ್ನು ನೋಡಿ ನಾಗಪ್ಪ ಕದ್ದುಕೊಂಡು ಹೋಗಿದ್ದ. ವಿಚಾರಣೆ ವೇಳೆ ಆತ ಹೇಳಿದ್ದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.ಪೊಲೀಸ್​ ವಾಹನ ಚಲಾಯಿಸಬೇಕೆಂಬುದು ಆತನ ಆಸೆಯಂತೆ. ಇದ್ದಕ್ಕಾಗಿ ಆಗಾಗ ಪೊಲೀಸ್​ ಠಾಣೆಗೆ ಬಂದು ಸಂಚು ರೂಪಿಸುತ್ತಿದ್ದನಂತೆ. ಅಲ್ಲದೆ, ಸಿಬ್ಬಂದಿಯ ಜತೆ ಸ್ನೇಹವನ್ನು ಬೆಳೆಸಿಕೊಂಡಿದ್ದ. ಎಸ್​ಐ ರಜೆಯಲ್ಲಿದ್ದ ಸಮಯವನ್ನು ನೋಡಿ ಕಾರು ಎಗರಿಸಿಕೊಂಡು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾನೆ.ಈ ಸಂಬಂಧ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಿಟ್ಕಾಯಿನ್ ಮೈನಿಂಗ್ ಕೇಂದ್ರೀಕರಣದ ಸಂಭಾವ್ಯ ಪರಿಣಾಮ;

Wed Feb 2 , 2022
ವಾಣಿಜ್ಯೋದ್ಯಮಿ ಕೊಡುಗೆದಾರರು ವ್ಯಕ್ತಪಡಿಸಿದ ಅಭಿಪ್ರಾಯಗಳು ತಮ್ಮದೇ ಆದವು. ಕೇಂದ್ರೀಕರಣವು ಕ್ರಿಪ್ಟೋಕರೆನ್ಸಿಗಳಿಗೆ ಸಂಕಟವಾಗಿದೆ ಮತ್ತು ಇದು ಅನ್ಯಾಯ ಮತ್ತು ಬಹಳಷ್ಟು ಫೌಲ್ ಪ್ಲೇಗಳೊಂದಿಗೆ ಸಂಬಂಧಿಸಿದೆ. ಕ್ರಿಪ್ಟೋ ಪರಿಸರ ವ್ಯವಸ್ಥೆಯೊಳಗೆ ಬೆಳೆಯುತ್ತಿರುವ ಸ್ಪರ್ಧೆಯ ಪರಿಣಾಮವಾಗಿ ಇದು ಸ್ವಾಭಾವಿಕವಾಗಿ ಬರುತ್ತದೆ. ಈಗ ಕ್ರಿಪ್ಟೋಕರೆನ್ಸಿಯ ಗಣಿಗಾರಿಕೆಯು ವಿಸ್ತಾರವಾದ ಉದ್ಯಮವಾಗಿದೆ, ಬೃಹತ್ ಪ್ರಮಾಣದ ಮೂಲಸೌಕರ್ಯ ಮತ್ತು ಹ್ಯಾಶಿಂಗ್ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅದನ್ನು ಕಸಿದುಕೊಳ್ಳುತ್ತಿವೆ. ಚೀನಾದಲ್ಲಿ ಕ್ರಿಪ್ಟೋಕರೆನ್ಸಿಗಳ ನಿಷೇಧ, ನೆಟ್‌ವರ್ಕ್ ವ್ಯಾಲಿಡೇಟರ್‌ಗಳ ಭೌಗೋಳಿಕ ಕೇಂದ್ರದ […]

Advertisement

Wordpress Social Share Plugin powered by Ultimatelysocial