ಹೆಚ್ಚುತ್ತಿರುವ ತೂಕವನ್ನು ತ್ವರಿತವಾಗಿ ಇಳಿಸಲು ತಜ್ಞರು ತಿಳಿಸಿದ ಈ ಮೂರು ಸಲಹೆ ಪಾಲಿಸಿ.!

 

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದರೆ.ಇದರಿಂದ ಅವರಲ್ಲಿ ಮಧುಮೇಹ, ಹೃದ್ರೋಗ, ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಹಾಗಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳವುದು ಅಗತ್ಯ. ಅದಕ್ಕಾಗಿ ನೀವು ತಜ್ಞರು ತಿಳಿಸಿದ ಈ ಮೂರು ಸಲಹೆಗಳನ್ನು ಪಾಲಿಸಿ.ನೀವು ತ್ವರಿತವಾಗಿ ತೂಕ ಇಳಿಸಲು ಬಯಸಿದರೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನು ಕಡಿಮೆ ಮಾಡಿ. ಹಾಗೇ ಸಕ್ಕರೆ ಮತ್ತು ಪಿಷ್ಟದ ಆಹಾರಗಳನ್ನು ಸೇವಿಸಬೇಡಿ. ಅದರ ಬದಲು ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಇದರಿಂದ ಹಸಿವು ಕಡಿಮೆಯಾಗುತ್ತದೆ.ನಿಮ್ಮ ಊಟದಲ್ಲಿ ಪ್ರೋಟೀನ್ ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳಿ. ಪ್ರೋಟೀನ್ ಗಾಗಿ ಮೀನು, ಮಾಂಸ, ಮೊಟ್ಟೆ, ಮುಂತಾದವುಗಳನ್ನು ಸೇವಿಸಿ. ಹಾಗೇ ಸೊಪ್ಪುಗಳು, ಕೋಸುಗಡ್ಡೆ, ಹೂಕೋಸು, ಸೌತೆಕಾಯಿ ಮುಂತಾದ ತರಕಾರಿಗಳನ್ನು ಸೇವಿಸಿ.ಹಾಗೇ ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಹೆಚ್ಚಿನ ಕ್ಯಾಲೋರಿಗಳ್ನು ಸುಡುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಈಜು ಮುಂತಾದವುಗಳನ್ನು ಮಾಡಿ.

Please follow and like us:

Leave a Reply

Your email address will not be published. Required fields are marked *

Next Post

ಹತ್ತು ವರ್ಷದಲ್ಲಿ ಎಂಟು ಮದುವೆಯಾದ ಆಂಟಿ

Sat Feb 5 , 2022
  ಲಕ್ನೌ: ಈಕೆ ಅಂತಿಂಥ ಚಾಲಾಕಿ ಅಲ್ಲ, ಹಣ ಮಾಡಲು ಸುಲಭ ಉಪಾಯವೊಂದನ್ನು ಕಂಡುಕೊಂಡಿದ್ದಳು.ಅದು ಅಜ್ಜಂದರಿಗೆ ಗಾಳ ಹಾಕಿ ಮದುವೆ ಮಾಡಿಕೊಳ್ಳುವುದು. ಈ ಲಲನಾಮಣಿಯ ಹೆಸರು ಮೋನಿಕಾ ಮಲಿಕ್​. ಕಳೆದ ಹತ್ತು ವರ್ಷದಿಂದ ಸರಾಸರಿ ಹೇಳುವು ದಾದರೆ ವರ್ಷಕ್ಕೊಬ್ಬರನ್ನು ಮದುವೆಯಾಗುತ್ತಾ ಬಂದಿದ್ದಾಳೆ.8 ಮಂದಿ ಹಿರಿಯ ನಾಗರಿಕರು ಇವಳ ಬಲೆಗೆ ಬಿದ್ದುದ್ದು ಹಣ-ಆಸ್ತಿ ಕಳೆ ದುಕೊಂಡಿದ್ದಾರೆ! ಗಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜುಗಲ್ ಕಿಶೋರ್ ಎಂಬುವವರನ್ನು ಮದುವೆಯಾಗಿ ಮೋಸ […]

Advertisement

Wordpress Social Share Plugin powered by Ultimatelysocial