ಭಾವನ ಮೇಲಿನ ಮೋಹಕ್ಕೆ ತಂಗಿ, 4 ಮಕ್ಕಳನ್ನು ಕೊಂದ ಕಿರಾತಕಿ ಅಕ್ಕ!

ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ತಂಗಿ ಗಂಡನ ಮೇಲಿನ ಮೋಹದಿಂದ ತಂಗಿ ಮತ್ತು ಆಕೆಯ ನಾಲ್ವರು ಮಕ್ಕಳನ್ನು ಅಕ್ಕನೇ ಕೊಲ್ಲಿಸಿದ್ದು ತನಿಖೆ ವೇಳೆ ಬಹಿರಂಗಗೊಂಡಿದೆ.ಫೆಬ್ರವರಿ 6ರಂದು ಕೆಆರ್ ಎಸ್ ಬಳಿ ತಾಯಿ ಲಕ್ಷ್ಮೀ (26) ಹಾಗೂ ಮಕ್ಕಳಾದ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.ಅಕ್ಕ ಲಕ್ಷ್ಮೀ ಪತಿ ಗಂಗಾರಾಮ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ತಂಗಿ ಲಕ್ಷ್ಮೀ (26) 5 ಮಂದಿಯ ಹತ್ಯೆ ಮಾಡಿದ ಕಿರಾತಕಿ.ಅಕ್ಕನನ್ನು ಬಿಟ್ಟು ನನ್ನನ್ನು ಮದುವೆ ಆಗು ಎಂದು ಗಂಗಾರಾಮ್ ನನ್ನು ತಂಗಿ ಪೀಡಿಸುತ್ತಿದ್ದಳು. ಗಂಗಾರಾಮ್ ಸಮಯ ಮುಂದೂಡುತ್ತಾ ಬಂದಿದ್ದರಿಂದ ಆತನು ಇಲ್ಲದ ಸಮಯದಲ್ಲಿ ಮನೆಯಲ್ಲಿ ಊಟಕ್ಕೆ ಬಂದಿದ್ದ ಲಕ್ಷ್ಮೀ ಎಲ್ಲರೂ ಮಲಗಿದ ನಂತರ ಸುತ್ತಿಗೆಯಿಂದ ಎಲ್ಲರ ತಲೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಸುತ್ತಿಗೆಯಿಂದ ಹಲ್ಲೆ ಮಾಡಿದ ಬಳಿಕವೂ ಲಕ್ಷ್ಮೀ ಕುತ್ತಿಗೆ ಹಿಸುಕಿ ಸಾಯಿಸಿದ್ದಾಳೆ. ಐವರನ್ನ ಕೊಲೆಗೈದು 2-3 ಗಂಟೆ ಅದೇ ಮನೆಯಲ್ಲಿ ಕಾಲ ಕಳೆದಿದ್ದಾಳೆ ಕೊಲೆಗಾತಿ.ತಂಗಿ ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ವಾಸವಿದ್ದು, ಕಳೆದ 2 ತಿಂಗಳಿನಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ದಳು. ಅಂದು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಜನರ ಮಧ್ಯ ಅಳುತ್ತಾ ಕುಳಿತಿದ್ದಳು. ಅಲ್ಲದೇ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ KRS ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾಳೆ. ಬೆಳಿಗ್ಗೆ 10 ಗಂಟೆ ವೇಳೆಗೆ ತನಗೆ ಏನು ಗೊತ್ತಿಲ್ಲ ಎಂಬಂತೆ ಮತ್ತೆ ಕೆಆರ್​​ಎಸ್​​ಗೆ ಬಂದಿದ್ದಾಳೆ. ಮೃತರ ಮನೆ‌ ಮುಂದೆ ಕುಳಿತು ಗೋಳಾಡಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿವಾದ ಕುರಿತು ಕಮಲ್ ಹಾಸನ್: ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದನ್ನು ತಮಿಳುನಾಡಿನಲ್ಲಿ ಬಿಡಬಾರದು

Wed Feb 9 , 2022
    ಕರ್ನಾಟಕದಲ್ಲಿ ಮಂಗಳವಾರ ನಡೆದ ಘಟನೆಗಳ ಬಗ್ಗೆ ಕಮಲ್ ಹಾಸನ್ ಬುಧವಾರ ಆಘಾತ ವ್ಯಕ್ತಪಡಿಸಿದ್ದಾರೆ. ಇದು ತಮಿಳುನಾಡಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದು ಅವರು ರಾಜ್ಯದ “ಪ್ರಗತಿಪರ ಶಕ್ತಿಗಳಿಗೆ” ಕರೆ ನೀಡಿದರು. “ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ದುಃಖವನ್ನುಂಟುಮಾಡುತ್ತಿದೆ. ಅಮಾಯಕ ವಿದ್ಯಾರ್ಥಿಗಳ ನಡುವೆ ಕೋಮುವಾದದ ವಿಷದ ಗೋಡೆ ಎಬ್ಬಿಸಲಾಗುತ್ತಿದೆ. ನಮ್ಮ ಪಕ್ಕದ ರಾಜ್ಯದಲ್ಲಿ ಏನಾಗುತ್ತಿದೆಯೋ ಅದು ತಮಿಳುನಾಡಿಗೆ ಬರಬಾರದು. ಎಲ್ಲ ಪ್ರಗತಿಪರ ಶಕ್ತಿಗಳು ಮೊದಲಿಗಿಂತ ಹೆಚ್ಚು ಜಾಗೃತರಾಗುವ ಸಮಯ […]

Advertisement

Wordpress Social Share Plugin powered by Ultimatelysocial