ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ;ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ

 

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ಮಿಶ್ರಾ ಅವರ ಪುತ್ರ ಆಶಿಶ್ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸ್ಥಳೀಯ ಕೋರ್ಟ್ಆದೇಶಿಸಿದೆ. ಇಲ್ಲಿನ ಪೊಲೀಸ್ಮಾರ್ಗದಲ್ಲಿರುವ ಅಪರಾಧ ವಿಭಾಗದಲ್ಲಿ ಶನಿವಾರ ಹಾಜರಾದ ಅವರನ್ನುಎಸ್ಐಟಿ ಅಧಿಕಾರಿಗಳು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ನಂತರ, ತಡರಾತ್ರಿ ಅವರನ್ನು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದರು. ಕೋರ್ಟ್ಗೂ ಹಾಜರುಪಡಿಸುವುದಕ್ಕೂ ಮೊದಲು ವೈದ್ಯರ ತಂಡವೊಂದು ಆಶಿಶ್ಮಿಶ್ರಾ ಅವರ ಆರೋಗ್ಯ ತಪಾಸಣೆ ನಡೆಸಿತು ಎಂದು ಹಿರಿಯ ಪ್ರಾಸಿಕ್ಯೂಷನ್ಅಧಿಕಾರಿ ಎಸ್‌.ಪಿ.ಯಾದವ್ತಿಳಿಸಿದ್ದಾರೆ. ಆಶಿಶ್ಅವರನ್ನು ಪೊಲೀಸ್ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.  ಅಕ್ಟೋಬರ್.11 ಬೆಳಿಗ್ಗೆ 11ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ನಡೆಸಲಿದೆಎಂದೂ ಅವರು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲೇ ಮತ್ತೊಮ್ಮೆ ಕನ್ನಡ ಮಾಯ..?;ಆಸ್ಪತ್ರೆಯ ಅಡಿಗಲ್ಲಿನಲ್ಲೂ ಕನ್ನಡ ಭಾಷೆ ಬಳಕೆ ಮಾಡದೇ ನಿರ್ಲಕ್ಷ್ಯ!?

Sun Oct 10 , 2021
ರಾಜ್ಯ ಸರ್ಕಾರದಿಂದಲೇ ಏರ್ಪಟ್ಟಿದ್ದ ಸಿಎಂ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲೇ ಮತ್ತೊಮ್ಮೆ ಕನ್ನಡ ಮಾಯವಾಗಿದ್ದು ಈ ಅನುಮಾನಕ್ಕೆ ಕಾರಣವಾಗಿದೆ. ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ನಡೆದ ಕೋವಿಡ್ ಗಾಗಿ ಪ್ರತ್ಯೇಕ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಿಯೂ ಕನ್ನಡದ ಸುಳಿವು ಇಲ್ಲದಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಮೆಟ್ರೋ ಉದ್ಘಾಟನೆ ಸಂದರ್ಭದಲ್ಲಿಯೂ ಕೂಡ ಕನ್ನಡ ಭಾಷೆಯನ್ನು ಕಡೆಗಣಿಸಿರುವುದಕ್ಕೆ ಜನರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತದೆ ಕಥೆ […]

Advertisement

Wordpress Social Share Plugin powered by Ultimatelysocial