ಕೇಂದ್ರ ಮಾದರಿ ವೇತನ ಜಾರಿ, ಎನ್‌ಪಿಎಸ್‌ ರದ್ದತಿಗೆ ಮನವಿ

ಕಲಬುರಗಿ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಜಾರಿ ಮಾಡಬೇಕು. ಎನ್‌ಪಿಎಸ್ ಪದ್ಧತಿ ರದ್ದುಪಡಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನೌಕರರ ನಿಯೋಗವು ಈಚೆಗೆ ಮುಖ್ಯಮಂತ್ರಿ ಬಸವರವಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.ಪ್ರಸಕ್ತ ಆಯವ್ಯಯ ಮಂಡನೆ ಪೂರ್ವ ಕರೆಯಲಾದ ಸಭೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.ನೌಕರರ ಬೇಡಿಕೆ ಆಲಿಸಿದ ಮುಖ್ಯಮಂತ್ರಿ ಅವರು, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಪರಿಷ್ಕರಣೆಗೆ ‘ಅಧಿಕಾರಿಗಳ ವೇತನ ಸಮಿತಿ’ ರಚಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದರು. ಆಯವ್ಯಯದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದರು. ಇತ್ತೀಚಿಗೆ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಘೋಷಿಸಿದ್ದು, ಈ ಕುರಿತು ಅಧ್ಯಯನ ನಡೆಸಿ ರಾಜ್ಯದಲ್ಲಿಯೂ ಒಪಿಎಸ್‌ ಜಾರಿಗೆ ತರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ್ದಾರೆ.ಇದಲ್ಲದೇ, ಕರ್ತವ್ಯನಿರತ ಸರ್ಕಾರಿ ಅಧಿಕಾರಿ- ನೌಕರರ ಮೇಲಿನ ಹಲ್ಲೆಗಳನ್ನು ನಿಯಂತ್ರಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜಾಮೀನು ರಹಿತ ಬಂಧನದಂತಹ ಕಠಿಣ ಕಾನೂನು ಜಾರಿಗೆ ತರುವ ಮತ್ತು ನೌಕರರುಗಳಿಗೆ ಗುಣಮಟ್ಟದ ತರಬೇತಿಗಾಗಿ ಜಿಲ್ಲಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಪುನಶ್ಚೇತನಗೊಳಿಸುವ ಕುರಿತು ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದು ರಾಜು ಲೇಂಗಟಿ ತಿಳಿಸಿದ್ದಾರೆ.ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ.ಸಿ.ಜಾಫರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಸೇರಿದಂತೆ ಅಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳ ನಿಯೋಗದಲ್ಲಿ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Asus 8z ಭಾರತದಲ್ಲಿ ಫೆಬ್ರವರಿ 28 ರಂದು ಲಾಂಚ್ ಆಗುತ್ತಿದೆ ಎಂದು ಕಂಪನಿ ದೃಢಪಡಿಸಿದೆ;

Sun Feb 27 , 2022
ಬಹುನಿರೀಕ್ಷಿತ Asus 8z ಫೆಬ್ರವರಿ 28 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಬ್ರ್ಯಾಂಡ್ Twitter ನಲ್ಲಿ ದೃಢಪಡಿಸಿದೆ. Asus ZenFone 8 ಮತ್ತು ZenFone 8 Flip ಕಳೆದ ವರ್ಷ ಜಾಗತಿಕವಾಗಿ ಬಿಡುಗಡೆಯಾಯಿತು, ಭಾರತದಲ್ಲಿ Asus 8z ಮತ್ತು Asus 8z ಫ್ಲಿಪ್ ಆಗಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಬಹುದು ಎಂದು ಊಹಿಸಲಾಗಿದೆ. ಈ ಸಾಧನವನ್ನು ಜುಲೈ 2021 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ದೃಢಪಡಿಸಲಾಗಿದೆ ಮತ್ತು ಏಳು […]

Advertisement

Wordpress Social Share Plugin powered by Ultimatelysocial