ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣ: ತ್ವರಿತ ವಿಚಾರಣೆಗೆ ಪರಿಶೀಲನೆ

 

 

 

 

ನವದೆಹಲಿ: ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಶೀಘ್ರವೇ ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಬುಧವಾರ ತಿಳಿಸಿದೆ.

 

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ಪೀಠಕ್ಕೆ ಅರ್ಜಿ ಸಲ್ಲಿಸಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಈ ಕುರಿತು ತುರ್ತು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಕೋರಿದರು.

ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ಸಾಕಷ್ಟು ಬಾಕಿ ಪ್ರಕರಣಗಳಿವೆ. ಹಾಗಾಗಿ ಅವುಗಳ ವಿಲೇವಾರಿ ಆಗಬೇಕಿದೆ ಎಂದು ಹನ್ಸಾರಿಯಾ ಮನವಿ ಮಾಡಿದರು.

ಇತ್ತೀಚಿನ ವರದಿಯ ಪ್ರಕಾರ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ 4,984 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 1,899 ಪ್ರಕರಣಗಳು ಐದು ವರ್ಷಗಳಿಗಿಂತ ಹಳೆಯವಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಎಲ್ ರಾಹುಲ್-ಸೂರ್ಯಕುಮಾರ್ ಯಾದವ್ ಭೀಕರ ಮಿಕ್ಸ್‌ಅಪ್‌ನಲ್ಲಿ ಭಾಗಿಯಾಗಿದ್ದಾರೆ

Wed Feb 9 , 2022
      ಭಾರತ vs ವೆಸ್ಟ್ ಇಂಡೀಸ್, 2 ನೇ ODI: 2 ನೇ ODI ಆರಂಭದಿಂದಲೇ ಬಹಳಷ್ಟು ಹೊಸ ವಿಷಯಗಳು ನಡೆಯುತ್ತಿರುವ ಭಾರತ ತಂಡಕ್ಕೆ ಇದು ಆಸಕ್ತಿದಾಯಕ ದಿನವಾಗಿದೆ. ಒಂದು ಪ್ರಮುಖ ವಿಷಯವೆಂದರೆ ರಿಷಬ್ ಪಂತ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು ಮತ್ತು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಹಿಂತಿರುಗಿದರು. ಆದಾಗ್ಯೂ, ಭಾರತವು 12 ಓವರ್‌ಗಳಲ್ಲಿ 43/3 ಕ್ಕೆ ಕುಸಿದಿದ್ದರಿಂದ ಅಗ್ರ ಕ್ರಮಾಂಕವು ಬೆಂಕಿಯಿಡಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ […]

Advertisement

Wordpress Social Share Plugin powered by Ultimatelysocial