ರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ

ಬೆಳಗಾವಿ: ರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವರ್ಷಕ್ಕೆ ಸರಾಸರಿ 683 ಕೃಷಿಕರು ಪ್ರಾಣ ಕಳೆದುಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ಜಿಲ್ಲೆಯ ಅಥಣಿಯ ವಕೀಲ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದ್ದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಚೇರಿಯಿಂದ ಅಂಕಿ-ಅಂಶಗಳನ್ನು ಒದಗಿಸಿದ್ದು ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

2015-16ರಲ್ಲಿ ಅತಿ ಹೆಚ್ಚು ಅಂದರೆ 1,525 ಪ್ರಕರಣಗಳು ವರದಿಯಾಗಿವೆ. 2017-18ರಲ್ಲಿ 1,323 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲ ಪ್ರಕರಣಗಳನ್ನೂ ಸರ್ಕಾರದ ಪರಿಹಾರಕ್ಕೆ ಪರಿಗಣಿಸಿಲ್ಲ. ವಿವಿಧ ಕಾರಣಗಳನ್ನು ನೀಡಿ ನೂರಾರು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 215 ಪ್ರಕರಣಗಳು ಬಾಕಿ ಇವೆ. 18 ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌) ವರದಿ ಬರುವುದು ಬಾಕಿ ಇದೆ. 197 ಪ್ರಕರಣಗಳಲ್ಲಿ ಇತರ ದಾಖಲಾತಿಗಳನ್ನು ಕೇಳಲಾಗಿರುವುದರಿಂದ ಅವೂ ಬಾಕಿ ಇವೆ ಎಂದು ಮಾಹಿತಿ ನೀಡಲಾಗಿದೆ.

2005-16ನೇ ಸಾಲಿನಿಂದ ಸತತ ಮೂರು ವರ್ಷ ಸರಾಸರಿ 1,200 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ವರದಿಯಾದ ಒಟ್ಟು 8,207 ಪ್ರಕರಣಗಳಲ್ಲಿ 6,160 ಪ್ರಕರಣಗಳನ್ನಷ್ಟೆ ಅರ್ಹ ಎಂದು ಪರಿಹಾರಕ್ಕಾಗಿ ಪರಿಗಣಿಸಲಾಗಿದೆ. 1,809 ಪ್ರಕರಣಗಳನ್ನು ತಿರಸ್ಕರತಿಸಲಾಗಿದೆ!

‘ಅತಿವೃಷ್ಟಿ, ಪ್ರವಾಹ, ಬರ ಮತ್ತಿತರ ಕಾರಣಗಳಿಂದಾಗಿ ಬೆಳೆ ಕೈಗೆ ಬಾರದಿರುವುದು, ಉತ್ಪನ್ನಗಳಿಗೆ ಸರಿಯದ ಬೆಲೆ ಸಿಗದಿರುವುದು, ಕೌಟುಂಬಿಕ ಕಾರಣಗಳು, ಸಾಲದ ಬಾಧೆ, ಸರ್ಕಾರದ ಅವೈಜ್ಞಾನಿಕ ನೀತಿ ಮೊದಲಾದ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆ ಕುಟುಂಬಗಳು ಅತಂತ್ರವಾಗಿವೆ. ದಾಖಲಾತಿಗಳ ನೆಪವೊಡ್ಡಿ ಪರಿಹಾರ ನೀಡದೆ ಆ ಕುಟುಂಬಗಳನ್ನು ವಂಚಿಸಲಾಗಿದೆ. ಸರ್ಕಾರವು ಕುಟುಂಬಗಳನ್ನೂ ಪರಿಹಾರಕ್ಕೆ ಪರಿಗಣಿಸಿದರೆ ಅನುಕೂಲವಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಜಿಲ್ಲಾವಾರು ಪಟ್ಟಿಯನ್ನೂ ಕೇಳಿದ್ದೇನೆ’ ಎಂದು ಭೀಮನಗೌಡ ತಿಳಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳ ವಿವರ

ವರ್ಷ;ವರದಿ;ತಿರಸ್ಕರ;ಅರ್ಹ;ಪರಿಹಾರ ನೀಡಲಾದವು

2010-11;231;105;126;126

2011-12;162;63;99;99

2012-13;146;59;87;87

2013-14;89;25;64;64

2014-15;116;23;93;93

2015-16;1,525;463;1,062;1,062

2016-17;1,203;271;932

2017-18;1,323;271;1,052;1,051

2018-19;1,087;216;867;867

2019-20;1,083;191;884;822

2020-21;822;111;637;471

2021-22 (ಫೆ.22ರವರೆಗೆ);420;31;260;82

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧ್ಯಾನದೊಂದಿಗೆ ನಿಮ್ಮ ಚರ್ಮದ ಸಂಕೀರ್ಣತೆಯನ್ನು ಹೆಚ್ಚಿಸಲು ನಂಬಲಾಗದ ಮಾರ್ಗಗಳು!

Sat Feb 26 , 2022
ಧ್ಯಾನವು ಚರ್ಮದ ಆರೋಗ್ಯದೊಂದಿಗೆ ಸಂಪರ್ಕ ಹೊಂದಿದೆಯೇ? ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ನಿಮ್ಮ ಚರ್ಮವನ್ನು ನೀವು ಮುದ್ದಿಸಬಹುದು. ನಿಮ್ಮ ಚರ್ಮದ ಮೇಲಿನ ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ನೀವು ಪ್ರತಿ ರಾತ್ರಿಯೂ ನಿಮ್ಮ ಮುಖವನ್ನು ತೊಳೆಯಬಹುದು. ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಪೋಷಿಸಲು ಹಲವು ಮಾರ್ಗಗಳಿದ್ದರೂ, ಧ್ಯಾನವು ನಿಮ್ಮ ತ್ವಚೆಗೆ ಏನೆಲ್ಲಾ ಅದ್ಭುತಗಳನ್ನು ಮಾಡಬಲ್ಲದು ಎಂಬುದನ್ನು ನೀವು ಗುರುತಿಸಲು ಸಾಧ್ಯವಿಲ್ಲ. ಧ್ಯಾನವು ನಿಮ್ಮ ಆರೋಗ್ಯದ ಮೇಲೆ ತನ್ನದೇ ಆದ ಪ್ರಭಾವವನ್ನು ಹೊಂದಿರುವಾಗ, ಅದು ನಿಮ್ಮ ಚರ್ಮದ […]

Advertisement

Wordpress Social Share Plugin powered by Ultimatelysocial