ಸಾವಿರಾರು ವಿಧ್ಯಾರ್ಥಿಗಳ ಜೊತೆ ಕೂತು “ತನುಜಾ” ಸಿನಿಮಾ ವೀಕ್ಷಿಸಿದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು

ಸಾವಿರಾರು ವಿಧ್ಯಾರ್ಥಿಗಳ ಜೊತೆ ಕೂತು “ತನುಜಾ” ಸಿನಿಮಾ ವೀಕ್ಷಿಸಿದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು

ಆರಂಭದಲ್ಲಿ ದೇವರ ಶ್ಲೋಕವನ್ನು ಪಟಿಸಿ ಆಶೀರ್ವಾದವನ್ನು ಪಡೆದು ಮಾತು ಪ್ರಾರಂಭಿಸಿದ ಸನ್ಮಾನ್ಯ ಸ್ವಾಮೀಜಿಯವರು “ತನುಜಾ” ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಕಠಿಣ ಪರಿಶ್ರಮ,ಎಕಾಗ್ರತೆ,ಗುರಿ ಮತ್ತು ಹೆತ್ತವರ ಹಾಗೂ ಗುರುವಿನ ಆಶೀರ್ವಾದಗಳ ಅದ್ಭುತ ಕಥನ ಈ ತನುಜಾ ಸಿನಿಮಾ ಎಂದು ಹೊಗಳಿದರು.
ಮಾತುಗಳ ನಡುವೆ,ತಾವು ತಮ್ಮ ಸನ್ಯಾಸಪೂರ್ವದ ಜೀವನಕ್ಕೆ ಸಂಬಧಿಸಿದ ಘಟನೆಯನ್ನು ತಾನು ಹಂಚಿಕೊಳ್ಳಬಾರದು,ಆದರೂ ಒಂದು ಸಂಗತಿಯನ್ನು ಈ ಸಮಯದಲ್ಲಿ ಪರಿಚಯಿಸುತ್ತೇನೆ ಎಂದು ತಾವು ಬೆಂಗಳೂರಿಗೆ ಪದವಿ ಸೀಟು ಹಂಚಿಕೆಯ ಸಂದರ್ಶನಕ್ಕೆ ಬರುವಾಗ ಕೆರೆ ಹೊಡೆದು ,ರಸ್ತೆ ಕೊಚ್ಚಿ ಹೋಗಿ ಬೆಂಗಳೂರು ತಲುಪಲು ತಡವಾಗಿದ್ದನ್ನು ಮತ್ತು ತಾವು ಹೋಡಿಹೋಗಿ ಸಂದರ್ಶನಕ್ಕೆ ಹಾಜರಾಗಿದ್ದನ್ನು ನೆನೆಸಿಕೊಂಡರು.
ಮತ್ತೆ ಸಿನಿಮಾ ಬಗ್ಗೆ ಮಾತನಾಡಲಾರಂಭಿಸಿದ ಸ್ವಾಮೀಜಿಯವರು, ಇದೊಂದು ಅದ್ಭುತ ಚಿತ್ರ,ಪ್ರೇರಣೆಯ ಚಿತ್ರ ಎಂದು ಹೊಗಳಿದರು. ನಿರ್ದೇಶಕರಾದ ಹರೀಶ್ ಎಂ.ಡಿ ಹಳ್ಳಿಯವರ ಸಾಮಾಜಿಕ ಕಳಕಳಿಯನ್ನು ಪ್ರಶಂಶಿಸಲು ಮರೆಯಲಿಲ್ಲ, ಮಾತು ಮುಂದುವರೆ  ಸ್ಥಾಪನೆಯ ವೇಳೆ ತಾವು ಮತ್ತು ತಮ್ಮ ಸಿಬ್ಬಂದಿವರ್ಗ ಪಟ್ಟ ಶ್ರಮವನ್ನು ನೆನೆದರು ಮತ್ತು ನಸುನಗುತ್ತಲೇ ಅಲ್ಲೇ ನೆರೆದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಲು ಕರೆ ನೀಡಿದರು.
ಮತ್ತೊಮ್ಮೆ ಸಿನಿಮಾ ನೋಡುವುದಾಗಿ ಹೇಳಿದರು, ನಂತರ ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ಮತ್ತು ತಮ್ಮ ಮೊದಲ ಭೇಟಿಯನ್ನು ನೆನೆಯುತ್ತಾ, ಒಂದು ತಿಂಗಳ ಹಿಂದೆ ಹರೀಶ್ ರವರು “ತನುಜಾ” ಚಿತ್ರದ ಟ್ರೈಲರ್ ತೋರಸಿ ನನ್ನ ಅಭಿಪ್ರಾಯದ ತುಣುಕನ್ನು ಕೋರಿದರು.ಆದರೆ ಚಿತ್ರದ ಸಣ್ಣ ಸಾರಾಂಶವನ್ನು ತಿಳಿದಿದ್ದ ನಾನು, ಬೇಡ ಈಗಲೇ ಏನನ್ನು ಹೇಳುವುದಿ ಲ್ಲ ಬದಲಾಗಿ ನೂರಾರು ಮಕ್ಕಳ ಜೊತೆ ಪೂರ್ತಿ ಸಿನಿಮಾವನ್ನೇ ನೋಡುತ್ತೇನೆ ಎಂದು ಹೇಳಿ ಕಳುಹಿಸಿದೆ ಮತ್ತು ಇಂದು ನಾನು ನನ್ನ ಮಕ್ಕಳ ಜೊತೆ ಸಿನಿಮಾ ನೋಡಿದ್ದೇನೆ ಹಾಗೂ ಮೆಚ್ಚಿದ್ದೇನೆ ಎಂದು ಹೃದಯಪೂರ್ವಕವಾಗಿ ಎಲ್ಲರೆಡೆ ಒಂದು ನಗುವನ್ನು ಬೀರಿದರು.
ಹೀಗೆ ಮಾತನಾಡುತ್ತಾ,ತಾವು ನೋಡಿದ ಕೊನೆಯ ಚಿತ್ರದ ಹೆಸರು ಹೇಳಲು ಮರೆತಿದ್ದ ಅವರು ಆ ಚಿತ್ರ “ಬೆಳದಿಂಗಳ ಬಾಲೆ” ಎಂದು ನೆನೆದರು. ಆ ಚಿತ್ರದ ಮೂಲ ಕಾದಂಬರಿಯನ್ನು ನೆನೆಯುತ್ತಾ ಮಕ್ಕಳೆಲ್ಲರಿಗೂ ಸಾಧ್ಯವಾದರೆ ಅದನ್ನು ಓದಲು ಹೇಳಿದರು.
ಮತ್ತೆ ಮೂಲ ವಿಷಯದತ್ತ ಹೊರಳಿದ ಅವರು,ಎಲ್ಲರೂ ತಮ್ಮ ಸ್ನೇಹಿತರ,ಬಂಧುಗಳ ಹಾಗೂ ಮನೆಯವರೊಂದಿಗೆ ಹೋಗಿ “ತನುಜಾ” ಸಿನಿಮಾ ನೋಡಿ ಎಂದು ಹೇಳಿದರು.
ಮಾತಿನ ನಡುವೆ ಹಲವಾರು ಭಾರಿ ಪತ್ರಕರ್ತರಾದ “ಶ್ರೀ ವಿಶ್ವೇಶ್ವರ್ ಭಟ್” ರವರನ್ನು ಮತ್ತು ಸಚಿವ ಡಾ|| ಕೆ.ಸುಧಾಕರ್ ರವರನ್ನು ನೆನೆಯುತ್ತಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರಲ್ಲದೆ,ಅವರೊಡನೆ ಮತ್ತೊಮ್ಮೆ ಸಿನಿಮಾ ನೋಡುವುದಾಗಿ ಹೇಳಿದರು.ಕಟ್ಟಕಡೆಯದಾಗಿ ಈ ಚಿತ್ರವು ಗುರಿಯ ಬಗ್ಗೆ ಆಶಯ ಮತ್ತು ಅದನ್ನು ತಲುಪುವಾಗ ಇರಬೇಕಾದ ಶ್ರದ್ಧೆಯ ಬಗ್ಗೆ ಬಹಳ ಸುಂದರವಾಗಿ ಕಟ್ಟಿಕೊಟ್ಟಿದೆ ಎಂದು ಹೇಳಿದರು. ಆತ್ಮವಿಶ್ವಾಸ ಒಂದಿದ್ದರೆ ಇಡೀ ಪ್ರಪಂಚವೇ ನಿಮ್ಮೊಂದಿಗಿರುತ್ತದೆ ಮತ್ತು ಒಂದಲ್ಲಾ ಒಂದು ರೀತಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಯಾವ ಚಿತ್ರಕ್ಕೆ ಎಷ್ಟು ಪ್ರದರ್ಶನ?

Sat Feb 18 , 2023
ಕಳೆದ ಜನವರಿ 25ರಂದು ಬಿಡುಗಡೆಗೊಂಡ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾ ಬಾಯ್‌ಕಟ್ ಟ್ರೆಂಡ್ ಅನ್ನು ಹೀನಾಯವಾಗಿ ಸೋಲಿಸಿ ವಿಜಯ ಪತಾಕೆಯನ್ನು ದೊಡ್ಡ ಮಟ್ಟದಲ್ಲಿ ಹಾರಿಸಿದೆ. ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಪಠಾಣ್ ಸಿನಿಮಾ 23 ದಿನಗಳನ್ನು ಪೂರೈಸುವ ಸಮಯಕ್ಕೆ 1000 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಹೀಗೆ ಬಾಕ್ಸ್ ಆಫೀಸ್‌ನಲ್ಲಿ […]

Advertisement

Wordpress Social Share Plugin powered by Ultimatelysocial