ಎಮ್ಮೆ ಕರುವಿಗೆ ಹುಲ್ಲು ತಿನ್ನಿಸಿದ ಶ್ರೀಲೀಲಾ!

ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಇನ್​ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪುಬಣ್ಣದ ಬಟ್ಟೆ ತೊಟ್ಟಿರುವ ನಟಿ ಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿದಾಗ ತೆಗೆಸಿಕೊಂಡ ಫೋಟೋ ಇದಾಗಿದೆ. ಮೇಲ್ನೋಟಕ್ಕೆ ಶೂಟಿಂಗ್​ ಸಮಯದಲ್ಲಿ ತೆಗೆಸಿಕೊಂಡಿರುವ ಫೋಟೋ ಎಂದು ಹೇಳಲಾಗುತ್ತಿದೆ.ನಟಿ ಶ್ರೀಲೀಲಾ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೊಂದು ಫೋಟೋದಲ್ಲಿ ಮುದ್ದಾದ ಎಮ್ಮೆ ಕರುವಿಗೆ ಹುಲ್ಲು ತಿನಿಸುವ ಫೋಟೋವಿದೆ. ಸದ್ಯ ಫೋಟೋ ವೈರಲ್​ ಆಗಿದೆ.ಇನ್​ಸ್ಟಾಗ್ರಾದಲ್ಲಿ ಹಂಚಿಕೊಂಡ ಫೋಟೋಗೆ ಶ್ರೀಲೀಲಾ ‘ಜೀವನದ ಸಣ್ಣಪುಟ್ಟ ವಿಷಯಗಳನ್ನು ನಿಧಾನಗೊಳಿಸಲು ಮತ್ತು ಆನಂದಿಸಲು ಒಂದು ನಿಮಿಷವನ್ನು ಕಂಡುಕೊಂಡಿದ್ದೇನೆ, ಕಳಪೆ ಗುಣಮಟ್ಟದ ಫೋಟೋ ಬಗ್ಗೆ ಕ್ಷಮಿಸಿ’ ಎಂದು ಬರೆದಿದ್ದಾರೆ.ಶ್ರೀಲೀಲಾ ಹಂಚಿಕೊಂಡ ಫೋಟೋ ಕಂಡು ಅನೇಕರು ಕಾಮೆಂಟ್​ ಬರೆದಿದ್ದಾರೆ. ಅದರಲ್ಲಿ ಹೆಚ್ಚಿನವರು ಹಾರ್ಟ್​ ಸಿಂಬಲ್​ ಕಳುಹಿಸಿದ್ದಾರೆ. ಇನ್ನು ಶ್ರೀಲೀಲಾ ಸಿನಿಮಾ ವಿಚಾರವಾಗಿ ಮಾತನಾಡುವುದಾದರೆ, ಕನ್ನಡಕ್ಕಿಂತ ನಟಿ ತೆಉಗಿನಲ್ಲೇ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ 4 ಟಾಲಿವುಡ್​ ಸಿನಿಮಾದಲ್ಲಿ ನಟಿಸಿದರೆ, ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 


 

 

 

 

Please follow and like us:

Leave a Reply

Your email address will not be published. Required fields are marked *

Next Post

ITI ಕಾಲೇಜ ಮತ್ತು ಇಂಜಿನೀಯರಿಂಗ್ ಕಾಲೇಜಿನಲ್ಲಿ EVM ಮತ್ತು VV Pad ಬಗ್ಗೆ ಪ್ರಾತ್ಯಕ್ಷತೆ ಕಾರ್ಯಕ್ರಮ.

Tue Feb 28 , 2023
  ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಐಟಿಐ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿ.ವಿ.ಪ್ಯಾಡ್ ಮತ್ತು ಇವಿ.ಎಮ್ ಮಶೀನ್ ಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ನಿರ್ದೇಶಕರಾದ ವೆಂಕಟೇಶ್ ವಂದಾಲ್ ಸರ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಲೇಜು ವಿಧ್ಯಾರ್ಥಿಗಳು ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೋಳ್ಳುತ್ತಾರೆ. ತಮ್ಮ ಅಮೂಲ್ಯವಾದ ಮತ್ತವನ್ನು ಪ್ರಜ್ಞಾವಂತಿಕೆಯಿಂದ ಚಲಾವಣೆ ಮಾಡಬೇಕು ಎಂದರು.ಮಾನ್ಯ […]

Advertisement

Wordpress Social Share Plugin powered by Ultimatelysocial