23 ದಿನಗಳಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡ ಧ್ರುವ ಸರ್ಜಾ.

 

ಸಿನಿಮಾ ನಟ-ನಟಿಯರು ತಮ್ಮ ಪಾತ್ರಕ್ಕೆ ತಕ್ಕಂತೆ ದೇಹದ ತೂಕದಲ್ಲಿ ಬದಲಾವಣೆ ಮಾಡುವುದನ್ನು ನೋಡುತ್ತೇವೆ. ಇದೀಗ ಧ್ರುವ ಸರ್ಜಾ ಸರದಿ. ಧ್ರುವ ಮೈ ತೂಕವನ್ನು ಕಡಿಮೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಪೊಗರು ಚಿತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದರು.

ಪೊಗರು ಚಿತ್ರದಲ್ಲಿ ಹದಿಹರೆಯದ ಹುಡುಗನ ಲುಕ್‌ಗಾಗಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು. ಇದೀಗ KD ಚಿತ್ರಕ್ಕಾಗಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅದೂ 23 ದಿನಗಳಲ್ಲಿ. ಧ್ರುವ ಸರ್ಜಾ 13 ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಂಡಿದ್ದು ಹೇಗೆ ಎಂದು ನೋಡೋಣ ಬನ್ನಿ: 23 ದಿನಗಳಲ್ಲಿ 18 ಕೆಜಿ ಕಡಿಮೆಯಾಗುವುದು ಸುಲಭವಲ್ಲ. ಈಗ ಸೋಷಿಯಲ್‌ ಮೀಡಿಯಾದಲ್ಲಿ ಅವರು ಮತ್ತಷ್ಟು ತೆಳ್ಳಗಾಗಿ ಫಿಟ್‌ ಅಂಡ್‌ ಹ್ಯಾಂಡ್ಸಮ್‌ ಆಗಿರುವ ಫೋಟೋ ಗಮನ ಸೆಳೆಯುತ್ತಿದೆ. ಪೊಗರು ಚಿತ್ರದಲ್ಲಿ ಮೈ ತೂಕವನ್ನು ಕಡಿಮೆ ಮಾಡಲು ಲಿಕ್ವಿಡ್ ಡಯಟ್ ಮಾಡಿದ್ದರು. ಇದೀಗ ಮತ್ತೆ ಅದೇ ಡಯಟ್‌ ಫಾಲೋ ಮಾಡಿರಬಹುದು. ಅವರು ಈ ಡಯಟ್‌ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತೂಕ ಇಳಿಕೆಗೆ ಲಿಕ್ವಿಡ್‌ ಡಯಟ್‌ ತುಂಬಾ ಸಹಕಾರಿ. ಲಿಕ್ವಿಡ್‌ ಡಯಟ್‌ನಲ್ಲಿ ಬೇಗನೆ ತೂಕ ಕಡಿಮೆಯಾಗುವುದು. ಆದರೆ ಯಾವುದೇ ತಜ್ಞರ ಸಲಹೆ ಪಡೆಯದೆ ನೀವು ಡಯಟ್‌ ಮಾಡಿದರೆ ತುಂಬಾನೇ ಅಪಾಯಕಾರಿ ಕೂಡ ಹೌದು.ಏಕೆಂದರೆ ಈ ಡಯಟ್‌ನಲ್ಲಿ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಲ್ಲದೆ ಈ ಡಯಟ್‌ನಲ್ಲಿ ದೇಹದಲ್ಲಿರುವ ಬೊಜ್ಜು ಕರಗುವುದು, ಅಲ್ಲದೆ ಕೆಲವರಿಗೆ ನಿಶ್ಯಕ್ತಿ ಉಂಟಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಚಿತ ವಿದ್ಯುತ್ ಭರವಸೆಯು 'ಬೇಜವಾಬ್ದಾರಿ ಮತ್ತು ತರ್ಕಹೀನ': ಬಸವರಾಜ ಬೊಮ್ಮಾಯಿ.

Thu Jan 12 , 2023
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಯನ್ನು ‘ಬೇಜವಾಬ್ದಾರಿ ಮತ್ತು ತರ್ಕಹೀನ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು. ಹುಬ್ಬಳ್ಳಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಯನ್ನು ‘ಬೇಜವಾಬ್ದಾರಿ ಮತ್ತು ತರ್ಕಹೀನ’ ಎಂದು ಮುಖ್ಯಮಂತ್ರಿ ಬಸವರಾಜ […]

Advertisement

Wordpress Social Share Plugin powered by Ultimatelysocial