ಲಕ್ಷ್ಮೇಶ್ವರ:ಸರಿಯಾದ ಸಮಯಕ್ಕೆ ಬಾರದ ಬಸ್ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು

ಲಕ್ಷ್ಮೇಶ್ವರ: ಸರಿಯಾದ ಸಮಯಕ್ಕೆ ಬಾರದ ಬಸ್ . ಹರದಗಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಹರದಗಟ್ಟಿ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ–ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆದರೂ, ಗ್ರಾಮಾಂತರ ಪ್ರದೇಶಗಳಿಗೆ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್‌ ಸಿಗುತ್ತಿಲ್ಲ. ಶಾಲಾ, ಕಾಲೇಜಿಗೆ ತೆರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹರದಗಟ್ಟಿ ಗ್ರಾಮದಿಂದ ಬೆಳ್ಳಟ್ಟಿ ತೆರಳಲು ಪ್ರತಿದಿನ ಬೆಳಗ್ಗೆ ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಬೆಳ್ಳಟ್ಟಿ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಹೊರಡುತ್ತಾರೆ. ಶಾಲೆಗಳಿಗೆ ತೆರಳಲು ಹರದಗಟ್ಟಿ ಗ್ರಾಮದ ವಿದ್ಯಾರ್ಥಿಗಳು ಬೆಳ್ಳಿಗ್ಗೆ 7 ಗಂಟೆಗೆ ಕಾಯುತ್ತಿರುತ್ತಾರೆ. ಬೆಳ್ಳಿಗ್ಗೆ 8.30 ಕ್ಕೆ ಬಸ್ 10.30 ಕ್ಕೆ ಬರುತ್ತೆ ಬೆಳ್ಳಟ್ಟಿ ಪಟ್ಟಣ ಮುಟ್ಟಲು 30 ನಿಮಿಷ ಬೇಕು ಅಷ್ಟರಲ್ಲಿ ಶಾಲೆ ತರಗತಿ ನಡೆದು ತಾಸು ಮುಂದೆ ಹೋಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆ ತಪ್ಪಿಸಿ ಮನೆಯಲ್ಲಿ ಉಳಿದು ಬಿಡ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಡಿಪೋ ಮ್ಯಾನೇಜರ್ ಗೆ ಕೇಳಿದ್ರೆ ವಿದ್ಯಾರ್ಥಿಗಳಿಗೆ ಗದರಿಸಿ ಮಾತನಾಡುತ್ತಾರೆ ಬಸ್ ಅಲ್ಲಿಂದ ಬರಬೇಕು, ಇಲ್ಲಿಂದ ಬರಬೇಕು, ನೋಡೋಣ ಬಿಡೊನಂತೆ ಎಂದು ಉಡಾಫೆ ಉತ್ತರ ಕೊಡುತ್ತಾರೆ.

ಬಹುತೇಕರು ದೈನಿಕ, ಮಾಸಿಕ ಬಸ್ಪಾಸ್ ಪಡೆದಿದ್ದಾರೆ. ಕೆಎಸ್ಆರ್ಟಿಸಿ ಬಸ್ಗಳನ್ನೇ ಅವಲಂಬಿಸಬೇಕಿದೆ.
ಬೆಳಗ್ಗೆ 10 ಗಂಟೆವರೆಗಾದರೂ ಬಸ್ ಬರುವುದಿಲ್ಲ ಸಮಯಕ್ಕೆ ಸರಿಯಾಗಿ ಬಸ್ ಬರಲಿಲ್ಲ ನಾವು ತರಗತಿ ತಪ್ಪಿಸುವ ಪರಿಸ್ಥಿತಿ ಎದುರಾಗಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ:ಹಳ್ಳಿ ಸೊಗಡಿನ ಅಂದ ಹೆಚ್ಚಿಸಿದ ವಿದ್ಯಾರ್ಥಿಗಳು

Mon Jul 18 , 2022
ಗದಗ:ಕಾಲೇಜು ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ ತುಂಬಿಕೊಂಡಿತ್ತು. ಟ್ರ್ಯಾಕ್ಟರ್ ಏರಿ ಹುಡುಗರು ಕಾಲೇಜಿಗೆ ಎಂಟ್ರಿಕೊಟ್ರೆ ಹುಡ್ಗೀರು ಬುತ್ತಿ ಹೊತ್ತು ಬಂದಿದ್ರು.. ಇದ್ರಿಂದಾಗಿ ಅಲ್ಲಿ ಅಪ್ಪಟ ಹಳ್ಳಿ ಸೊಗಡಿನ ಜಾನಪದ ಲೋಕ ಸೃಷ್ಟಿ ಯಾಗಿತ್ತು. ರಂಗು ರಂಗಿನ ಪೇಟಾ ಧೋತಿ, ಜುಬ್ಬಾ ಹಾಕ್ಕೊಂಡು ಹುಡುಗ್ರು ಮಿಂಚ್ತಿದ್ರೆ.. ಹುಡುಗೀರ್ ನಾವೇನ್ ಕಮ್ಮಿ ಅಂತಾ ಇಳಕಲ್ ಸೀರೆ ಹಾಕ್ಕೊಂಡು ಫುಲ್ ರೆಡಿಯಾದೆ. ಕಾಲೇಜು ಮೈದಾನದಲ್ಲಿ ಫನ್ ವೀಕ್ ಅಂದ್ರೆ ಕೇಳ್ಬೇಕಾ ಹುಡುಗ್ರು ಹುಡುಗೀರು ಸೇರ್ಕೊಂಡು […]

Advertisement

Wordpress Social Share Plugin powered by Ultimatelysocial