ಸಚಿವ ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ.

 

ರಾಜ್ಯದಲ್ಲಿ ದೀರ್ಘಕಾಲಿಕ ಕೆಮ್ಮು ಹಾಗೂ ಜ್ವರ ಲಕ್ಷಣದ H3N2 ಸೋಂಕು ಉಲ್ಬಣದ ಆತಂಕದ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಡಾ. ಸುಧಾಕರ್ ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದು, H3N2ಇನ್ ಪ್ಲುಯಂಜಾ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, H3N2 ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚೆ ಮಾಡಿದ್ದೇವೆ. ಸೋಮವಾರ ತಜ್ಞರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಕರೆದಿದ್ದೇನೆ. ಬಳಿಕ ಕಾಯಿಲೆಯ ಸ್ಥಿತಿಗತಿ ಹಾಗೂ ರಾಜ್ಯದಲ್ಲಿ ಯಾವ ಕ್ರಮ ಕೈಗೊಳ್ಳುತ್ತೇವೆ ಎಂಬ ಸಂಪೂರ್ಣ ವಿವರ ನೀಡುತ್ತೇನೆ ಎಂದಿದ್ದಾರೆ.ದೀರ್ಘಕಾಲದಿಂದ ಕೆಮ್ಮು ಹಾಗೂ ಜ್ವರದ ಲಕ್ಷಣ ಇದ್ದರೆ H3N2 ವೈರಸ್ ಕಾರಣವಾಗಿರಬಹುದು. ದೇಶಾದ್ಯಂ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ರೋಗಲಕ್ಷಣ ಉಂಟಾದರೆ ಪರೀಕ್ಷೆ ನಡೆಸೆ ಆಯಂಟಿಬಯೋಟಿಕ್ ಮಾತ್ರೆಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಕೆ ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಂಭ ರಾಶಿ ಭವಿಷ್ಯ.

Mon Mar 6 , 2023
ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಕಟ ಸಂಬಂಧಿಗಳ ಮನೆಗೆ ಹೋಗುವುದರಿಂದ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು. ಭೇಟಿ ನೀಡುವ ಸಂಬಂಧಿಗಳು ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿರಬಹುದು. ನಿಮ್ಮ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಅದನ್ನು ಮಾಡುವುದು ನಿಮಗೆ ಉತ್ತಮವಾಗಲಿದೆ. […]

Advertisement

Wordpress Social Share Plugin powered by Ultimatelysocial