ಬೇಸಿಗೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ 7 ಚಮತ್ಕಾರಿ ಪಾನೀಯಗಳಿವು.

 

ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಮಂದಿಯ ಸಾಮಾನ್ಯ ಸಮಸ್ಯೆ ಆಗಿದೆ. ದೇಹದಲ್ಲಿ ಶೇಖರಗೊಳ್ಳುವ ಅನಾರೋಗ್ಯಕರ ಕೊಬ್ಬು ಭವಿಷ್ಯದಲ್ಲಿ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.ಇದನ್ನು ತಪ್ಪಿಸಲು ತೂಕ ಇಳಿಕೆ ಬಹಳ ಮುಖ್ಯ. ತೂಕ ಇಳಿಕೆಗಾಗಿ ಜನರು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ನೀವೂ ಕೂಡ ತೂಕ ಇಳಿಸಲು ಬಯಸಿದರೆ, ಈ ಬೇಸಿಗೆಯಲ್ಲಿ ಏಳು ಬಗೆಯ ಚಮತ್ಕಾರಿ ಪಾನೀಯಗಳು ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆ ಪಾನೀಯಗಳು ಯಾವುವು ಎಂದು ತಿಳಿಯೋಣ…ಈ ಬೇಸಿಗೆಯಲ್ಲಿ ಏಳು ಬಗೆಯ ಅದ್ಭುತ ಪಾನೀಯಗಳ ಸಹಾಯದಿಂದ ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಲು ಟ್ರೈ ಮಾಡಿ.ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಜೀರಿಗೆ ನೀರನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು. ಅದರಲ್ಲೂ ಮುಖ್ಯವಾಗಿ, ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬು ಕೇವಲ ಒಂದೇ ವಾರದಲ್ಲಿ ಕಡಿಮೆ ಆಗುವುದನ್ನು ನೀವು ಗಮನಿಸಬಹುದು.ಜೀರಿಗೆ ನೀರುಉತ್ತಮ ಜೀರ್ಣಕಾರಿಯಾಗಿದ್ದು ಅದು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ಮತ್ತೆ ಮತ್ತೆ ತಿನ್ನುವ ಬಯಕೆಯನ್ನು ದೂರ ಮಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬೊಂಬಾಟ್ ಭೋಜನ'ದಲ್ಲಿ ಅಳಿಯ ಪಿಎಂ ಆಗಿದ್ದರ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು?.

Mon Mar 6 , 2023
  ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಬೊಂಬಾಟ್ ಭೋಜನ’ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಾಗಿದೆ. ಧಾರಾವಾಹಿಗಳ ನಡುವೆ ಬೊಂಬಾಟ್ ಭೋಜನ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ಹೆಂಗಳೆಯರಿಗೆ ಈ ಶೋ ಅಂದ್ರೆ ಇನ್ನಿಲ್ಲದ ಪ್ರೀತಿ. ಅದಕ್ಕೆ ಹೆಚ್ಚಿನ ಕಾರಣವೂ ಸಿಹಿಕಹಿ ಚಂದ್ರು.ಅವರ ನಿರೂಪಣಾ ಶೈಲಿ, ಅವರ ಮಾತುಗಾರಿಕೆ ಎಲ್ಲದಕ್ಕೂ ಮಂದಿ ಫಿದಾ ಆಗಿದ್ದಾರೆ.ಬೊಂಬಾಟ್ ಭೋಜನದಲ್ಲಿ ಹಲವು ವಿಭಿನ್ನ ಖಾದ್ಯಗಳನ್ನು ಸಿಹಿ ಕಹಿ ಚಂದ್ರು ತೋರಿಸುತ್ತಾ ಹೋಗುತ್ತಾರೆ. ಅದರಲ್ಲೂ ಇತ್ತಿಚೆಗೆ ಅಮೆರಿಕಾಗೆ ಹೋಗಿ, ಅಲ್ಲಿನ […]

Advertisement

Wordpress Social Share Plugin powered by Ultimatelysocial