ಪ್ರಸಿದ್ಧ ಕಲಾ ನಿರ್ದೇಶಕ ಸುನಿಲ್ ಬಾಬು ಇನ್ನಿಲ್ಲ

 

ಪ್ರಸಿದ್ಧ ಕಲಾ ನಿರ್ದೇಶಕ ಸುನಿಲ್ ಬಾಬು  ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಾರತದಾದ್ಯಂತ ಚಿತ್ರರಂಗದಲ್ಲಿ ಪ್ರಸಿದ್ಧ ಆರ್ಟ್ ಡೈರೆಕ್ಟರ್  ಆಗಿ ಗುರುತಿಸಿಕೊಂಡಿದ್ದ ಸುನಿಲ್ ಬಾಬು ಅವರಿಗೆ 50 ವರ್ಷ ವಯಸ್ಸಾಗಿತ್ತು.
ಅವರು ಕೇರಳದ (Kerala) ಎರ್ನಾಕುಳಂನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದರು. ಬೆಂಗಳೂರು ಡೇಸ್, ಗಜನಿ, ಉರುಮಿಯಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ ಇವರು ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅವರ ಬಹುನಿರೀಕ್ಷಿತ ಚಿತ್ರ ವಾರಿಸುನಲ್ಲಿಯೂ ಕೆಲಸ ಮಾಡಿದ್ದಾರೆ.
ಅನಂತಭದ್ರ (2005) ಸಿನಿಮಾಗಾಇ ಸುನೀಲ್ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಸುನೀಲ್ ಅವರ ಅಕಾಲಿಕ ಮರಣಕ್ಕೆ ಸಿನಿಮಾ ಇಂಡಸ್ಟ್ರಿಯ ಗಣ್ಯರು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಸುನೀಲ್ ಬಾಬು ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ನಾವು ಬೆಂಗಳೂರು ಡೇಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನಗೆ ಅದರ ಕೆಲವು ಅದ್ಭುತವಾದ ನೆನಪುಗಳಿವೆ, ಅದನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆತ್ಮೀಯ ಸುನಿಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಿ ಮರಿ ಹೇಳಿಕೆ ನೀವು ತಪ್ಪು ತಿಳಕೊಂಡಿದ್ದೀರಿ ಎಂದ ಸಿದ್ದು.

Fri Jan 6 , 2023
ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ.. ಹಳ್ಳಿ ಭಾಷೆಯಲ್ಲಿ ನಾನು ಮಾತಾಡಿದ್ದೇನೆ,ಹಳ್ಳಿ ಭಾಷೆಯಲ್ಲಿ ಹೆದರೋರಿಗೆ ನಾಯಿ ಮರಿ ತರಹ,ಬೆಕ್ಕಿನ ಮರಿ ತರ ಇರ್ತೀವಿ ಅಂತೀವಿ ಎಂದ ಸಿದ್ದು.. ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕು ಅನ್ನೋ ಉದ್ದೇಶ ಇಲ್ಲ. ಪ್ರಧಾನ ಮಂತ್ರಿ ಬಳಿ ಮುಖ್ಯಮಂತ್ರಿ ಧೈರ್ಯವಾಗಿ ಇರಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದೇನೆ. ಯಡಿಯೂರಪ್ಪನವರಿಗೆ ರಾಜಾಹುಲಿ ಅನ್ನೋದು ಅನುಮಾನನಾ.? ನನಗೆ ಟಗರು,ಹೌದ ಹುಲಿಯಾ ಅನ್ನೋದು ಅನುಮಾನನಾ?? ಪ್ರಾಣಿ,ಪಕ್ಷಿಗಳಿಗೆ ಮರಗಳಿಗೆ ಹೋಲಿಕೆ ಮಾಡೋದು ಸಹಜ. ರಾಜ್ಯದ […]

Advertisement

Wordpress Social Share Plugin powered by Ultimatelysocial