ಕಲ್ಲಕುರಿಚಿ ಶಾಲಾ ವಿದ್ಯಾರ್ಥಿನಿ ಸಾವು ಪ್ರಕರಣ:

ನವದೆಹಲಿ: ಮದ್ರಾಸ್​ ಹೈಕೋರ್ಟ್​ ನೀಡಿದ್ದ ಮರುಮರಣೋತ್ತರ ಪರೀಕ್ಷೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಕಲ್ಲಕುರಿಚಿಯ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಪೋಷಕರ ಮನವಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ಇದರೊಂದಿಗೆ ನಾಳೆ ವಿದ್ಯಾರ್ಥಿನಿಯ ಕುಟುಂಬದ ಮನವಿಯನ್ನು ಆಲಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ತಮ್ಮಿಚ್ಛೆಯ ವೈದ್ಯಕೀಯ ತಂಡವನ್ನು ನೇಮಿಸಿ ಮರು ಮರಣೊತ್ತರ ಪರೀಕ್ಷೆ ನಡೆಸಬೇಕೆಂದು ಬಾಲಕಿಯ ತಂದೆ ಮನವಿ ಮಾಡಿದ್ದಾರೆ.

12ನೇ ತರಗತಿಯ ವಿದ್ಯಾರ್ಥಿ ಸಾವಿನ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಸದ್ಯ ಪ್ರಕರಣ ಸಂಬಂಧ ಸೋಮವಾರ ಮದ್ರಾಸ್​ ಹೈಕೋರ್ಟ್​ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ಮಾಡುವಂತೆ ಆದೇಶ ನೀಡಿತ್ತು.

ಮೃತ ವಿದ್ಯಾರ್ಥಿನಿಯ ಮೊದಲ ಶವಪರೀಕ್ಷೆ ಜುಲೈ 14 ರಂದು ನಡೆದಿತ್ತು, ಅದರಲ್ಲಿ ವಿದ್ಯಾರ್ಥಿಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದಾದ ಬಳಿಕ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿ ತಂದೆ ಇದೊಂದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದು, ಎರಡನೇ ಬಾರಿ ಶವಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಲೆಜೆಂಡರಿ ಸಿಂಗರ್ ಭೂಪಿಂದರ್ ಸಿಂಗ್ ನಿಧನ!

Tue Jul 19 , 2022
ಬಾಲಿವುಡ್‌ನ ಲೆಜೆಂಡರಿ ಗಾಯಕ ಭೂಪಿಂದರ್ ಸಿಂಗ್ ನಿಧನರಾಗಿರುವ ಸುದ್ದಿ ಹೊರಬಿದ್ದಿದೆ. ಸಂಗೀತಲೋಕದ ದಿಗ್ಗಜನ ಸಾವಿನ ಸುದ್ದಿ ಕೇಳಿ ಬಾಲಿವುಡ್‌ ಮಂದಿ ಶೋಕ ಸಾಗರದಲ್ಲಿದೆ. ಭೂಪಿಂದರ್ ಸಿಂಗ್ ಮುಂಬೈನಲ್ಲಿ ಇಂದು (ಜುಲೈ 18) ಸಂಜೆ 7.45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಭೂಪಿಂದರ್ ಸಿಂಗ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿಯ ಆರೋಗ್ಯದ ಬಗ್ಗೆ ಪತ್ನಿ ಮಿತಾಲಿ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ” ಭೂಪಿಂದರ್ ಸಿಂಗ್ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಲ್ಲದೆ […]

Advertisement

Wordpress Social Share Plugin powered by Ultimatelysocial