ಸುರೇಶ್ ಗೌಡ ಮಾತನಾಡಿ ಗೌರಿಶಂಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹಾಗೂ ಬಿಜೆಪಿಯ ಅಭ್ಯರ್ಥಿಯಾದ ಸುರೇಶ್ ಗೌಡ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಇಂದು ನಾಮ ಪತ್ರ‌ ಸಲ್ಲಿಸಲಾಯಿತು.

ಸುರೇಶ್ ಗೌಡ ಮಾತನಾಡಿ ಗೌರಿಶಂಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಕಲಿ ಬಾಂಡ್ ಕೊಟ್ಟು ಜನರನ್ನು ಯಾಮಾರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ಈ ಬಾರಿ ಬಿಜೆಪಿ ಪಕ್ಷದ ಗೆಲುವು ಖಚಿತ .

16 ಸಾವಿರ ನಕಲಿ ಬಾಂಡ್ ನೀಡಿ ಚುನಾಯಿತರಾದ ಬೋಗಸ್ ಶಾಸಕ ಎಂದು ಆರೋಪಿಸಿದರು. ಹೆಬ್ಬುರು ಗೂಳೂರು ಕೆರೆಗಳಿಗೆ ಏತ ನೀರಾವರಿಯಿಂದ ಈ ಭಾರಿ ನೀರು ಬರಬೇಕು ಈ ಬಾರಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಬಡವರಿಗೊಸ್ಕರ ಕ್ಷೇತ್ರದಲ್ಲಿ ಒಳ್ಳೆಯ ಶಾಲೆಗಳು ಅವಶ್ಯಕತೆ ಇದೆ.

ಬಡಜನರಿಗೆ ಬದುಕಲು ಉತ್ತಮವಾದ ಮನೆಗಳು ಬರಬೇಕಾಗಿದೆ. ನಿಮ್ಮ ಒಂದು ಮತದಿಂದ ಕ್ಷೇತ್ರದ ಅಭಿವೃದ್ಧಿ ಆಗಲಿದೆ, ಎಣ್ಣೆ ಬಾಡು ವಿತರಿಸಿ ಯುವಕರನ್ನು ದಾರಿತಪ್ಪಿಸುತ್ತಿರುವ ಮಾಜಿ ಶಾಸಕ ಎಂದು ಗೌರಿಶಂಕರ್ ವಿರುದ್ಧ ಆರೋಪ ಮಾಡಿದರು.

ಶಾಲಗಳಲ್ಲಿ ಮಕ್ಕಳಿಗೆ ಬಿಸಿಯೂಟದಲ್ಲಿ ಉಳುಗಳು ಸಿಗುತ್ತವೆ ಅದನ್ನು ತಡೆಯುವಲ್ಲಿ ಹಿಂದಿನ ಶಾಸಕರು ವಿಪಲರಾಗಿದ್ದಾರೆ. ಮಕ್ಕಳಿಗೆ ನಕಲಿ ಬಾಂಡ್ ನೀಡಿರುವ ಆರೋಪದಡಿಯಲ್ಲಿ ಅವರ ಶಾಸಕ ಸ್ಥಾನವನ್ನು ಹೈಕೋರ್ಟ್ ಅನರ್ಹಗೋಳಿಸಿದೆ.

ಆದರು ಸುಪ್ರೀಂಕೋರ್ಟ್ ಅವರ ಚುನಾವಣೆಯ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ ಅದರೆ ಚುನಾವಣೆಯಲ್ಲಿ ವಿಜೇತರಾದರೆ ಶಾಸಕಾಂಗ ಸಭೆಯಲ್ಲಿ ಯಾವುದೇ ರೀತಿಯ ಅಧಿಕಾರವಿಲ್ಲ ಎಂಬ ಅಂಶವನ್ನು ಅವರು ಮರೆಯುವಂತಿಲ್ಲ ಎಂದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವಾದ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ.!

Tue Apr 18 , 2023
2023ನೇ ಚುನಾವಣೆ ಪ್ರಚಾರ ಅಂಗವಾಗಿ ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮಕ್ಕೆ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಅವರು ಭೇಟಿ ನೀಡಿ. ನನಗೆ ಬಿಜೆಪಿ ಟಿಕೆಟ್ ಕೊಡದೆ ಇರಬಹುದು ಆದರೆ ಜನರ ನಿರ್ಣಯದಂತೆ ನಾನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ದಿನ ಜೆಡಿಎಸ್ ಗೆ ಸೇರ್ಪಡೆಯಾಗಿಗಿದ್ದೇನೆ. ನಾನು 20/04/2023ರಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಕಾರ್ಯಕರ್ತರು ರೈತರು ಮುಖಂಡರು ಎಲ್ಲರೂ ಭಾಗವಹಿಸಿ ಜೇವರ್ಗಿ ತಾಲೂಕಿನಲ್ಲಿ ಜೆಡಿಎಸ್ ಮಯವಾಗಬೇಕು ಎಂದು […]

Advertisement

Wordpress Social Share Plugin powered by Ultimatelysocial