ಆಸ್ಕರ್‌ ಸಮಿತಿ ಸೂರ್ಯಗೆ ಆಹ್ವಾನ: ಈ ಗೌರವ ಲಭಿಸಿದ ದಕ್ಷಿಣ ಭಾರತದ ಮೊದಲ ನಟ

ಚೆನ್ನೈ: ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆಅವರನ್ನು ಆಹ್ವಾನಿಸಲಾಗಿದೆ. ಭಾರತದಿಂದ ಹಿಂದಿ ನಟಿ ಕಾಜೊಲ್‌ ಹಾಗೂ ನಿರ್ದೇಶಕಿ ರೀಮಾ ಕಾಗ್ತಿ ಅವರನ್ನೂ ಆಹ್ವಾನಿಸಲಾಗಿದೆ. ಆಸ್ಕರ್‌ ಸಮಿತಿಗೆ ಆಹ್ವಾನ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ನಟ ಸೂರ್ಯ ಆಗಿದ್ದಾರೆ.

ಮಂಗಳವಾರ, ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 397 ಕಲಾವಿದರನ್ನು ʼಕ್ಲಾಸ್‌ ಆಫ್‌ 2022ʼ ರ ಭಾಗವಾಗಲು ಆಹ್ವಾನಿಸಿದೆ. ಅದರಲ್ಲಿ ಸೂರ್ಯ, ಕಾಜೊಲ್‌, ಕಾಗ್ತಿ ಸೇರಿದ್ದಾರೆ.

ತಮಿಳು ನಟ ಸೂರ್ಯ ಅವರು ತಮ್ಮ ಅಭಿನಯದ ಮೂಲಕವೇ ಭಾರತೀಯ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದವರು. ರಾಮ್‌ಗೋಪಾಲ್‌ ವರ್ಮಾ ಅವರ ʼರಕ್ತ ಚರಿತ-2ʼ ಚಿತ್ರದಲ್ಲಿ ಸೂರ್ಯ ನಟನೆಯು ವಿಮರ್ಷಕರ ಗಮನವನ್ನು ಸೆಳೆದಿತ್ತು. ಕಳೆದ ಎರಡು ವರ್ಷಗಳಲ್ಲಿ ಓಟಿಟಿ ಮೂಲಕ ಬಿಡುಗಡೆಯಾದ ಅವರ ಎರಡು ಚಿತ್ರಗಳು ವ್ಯಾಪಕ ಯಶಸ್ಸನ್ನು ಪಡೆದಿದೆ.

ಸುಧಾ ಕೊಂಗರ ನಿರ್ದೇಶನದ ‘ಸೂರೆರೈಪೋಟ್ರುʼ ಹಾಗೂ ಟಿಜೆ ಗ್ಯಾನವೇಲ್‌ ನಿರ್ದೇಶನದ ʼಜೈ ಭೀಮ್‌ʼ ಓಟಿಟಿಯಲ್ಲಿ ಬಿಡುಗಡೆಗೊಂಡಿದ್ದು, ಡಿಜಿಟಲ್‌ ಮಾಧ್ಯಮದ ಮೂಲಕ ಸೂರ್ಯ ಅವರಿಗೆ ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಟ್ಟಿತ್ತು. ಅವರ ಸಿನೆಮಾ ವ್ಯಾಪ್ತಿಯನ್ನು ಅವರು ಆ ಮೂಲಕ ಹಿಗ್ಗಿಸಿಕೊಂಡಿದ್ದರು.

ಅದರಲ್ಲೂ, ಇತ್ತೀಚೆಗೆ ತೆರೆಕಂಡ ಕಮಲ್‌ ಅಭಿನಯದ ‘ವಿಕ್ರಮ್‌’ ಚಿತ್ರದ ಕೊನೆಯ ಕೆಲವು ನಿಮಿಷಗಳಲ್ಲಿ ಸೂರ್ಯ ಕಾಣಿಸಿಕೊಂಡಿದ್ದು, ರೋಲೆಕ್ಸ್‌ ಎಂಬ ನೆಗೆಟಿವ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ವಿನ್ಯಾಸವು ಸೂರ್ಯ ಅವರು ಇದುವರೆಗೂ ಕಾಣಿಸದಂತಹ ರೀತಿಯಲ್ಲಿ ಬಿಂಬಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಸಿಂಧೆ !

Fri Jul 1 , 2022
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಸಿಂಧೆ ಹಾಗೂ ಡಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ವಿ ಸೋಮಣ್ಣ, ಅಶ್ವಥ್ ನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಾಸಕರಾದ […]

Advertisement

Wordpress Social Share Plugin powered by Ultimatelysocial