ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ಮನೆಗೆ ಬಂತು ಬೆದರಿಕೆ ಪತ್ರ

ಸಲ್ಮಾನ್ ಖಾನ್‌ಗೆ ಭೂಗತ ಜಗತ್ತಿನ ಗ್ಯಾಂಗ್ ಒಂದು ಕೊಲೆ ಬೆದರಿಕೆ ಹಾಕಿರುವ ಬೆನ್ನಲ್ಲೆ ಇದೀಗ ಬಾಲಿವುಡ್‌ನ ನಟಿಯೊಬ್ಬರಿಗೂ ಅದೇ ಮಾದರಿಯಲ್ಲಿ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಾಸವಿರುವ ಮುಂಬೈನ ವರ್ಸೋವಾದ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರವೊಂದು ಬಂದಿದ್ದು, ಪತ್ರದಲ್ಲಿ ಯಾರಿಂದ ಬೆದರಿಕೆ ಹಾಕಲಾಗಿದೆ ಎಂಬ ಅಂಶ ನಮೂದಾಗಿಲ್ಲ.

ನಟಿಯು ಬೆದರಿಕೆ ಪತ್ರ ಬಂದಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪತ್ರದಲ್ಲಿ, ‘ಈ ದೇಶದ ಯುವಕರು ವೀರ ಸಾವರ್ಕರ್ ಬಗೆಗಿನ ಅವಹೇಳನವನ್ನು ಸಹಿಸುವುದಿಲ್ಲ” ಎಂದು ಬರೆಯಲಾಗಿದೆ. ಸಾರ್ವಕರ್ ಬಗ್ಗೆ ಅವಹೇಳನ ಮಾಡಿದವರನ್ನು ಬಿಡುವುದಿಲ್ಲ ಎಂದು ಎಂಬರ್ಥದಲ್ಲಿ ಈ ಪತ್ರ ಇದ್ದು, ಪತ್ರವನ್ನು ಹಿಂದಿಯಲ್ಲಿ ಬರೆಯಲಾಗಿದೆ.

ನಟಿ ಸ್ವರಾ ಭಾಸ್ಕರ್ ಆರಂಭದಿಂದಲೂ ಆರ್‌ಎಸ್‌ಎಸ್, ಹಿಂದೂ ಮೂಲಭೂತವಾದಿತನ, ಬಿಜೆಪಿಯ ಕೆಲವು ನಡೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಸಾವರ್ಕರ್ ಬಗ್ಗೆಯೂ ಕೆಲವು ಟೀಕೆಗಳನ್ನು ಸ್ವರಾ ಭಾಸ್ಕರ್ ಮಾಡಿದ್ದರು. ಅದೇ ಕಾರಣದಿಂದ ಈಗ ಸ್ವರಾ ಅವರಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗುತ್ತಿದೆ.

ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸ್ವರಾ ಭಾಸ್ಕರ್‌ ಈ ಬಗ್ಗೆ ದೂರು ನೀಡಿದ್ದು, ದೂರಿನ ಬಗ್ಗೆ ಮಾತನಾಡಿರುವ ಅಲ್ಲಿನ ಅಧಿಕಾರಿ, ”ಅನಾಮಿಕರಿಂದ ಕೃತ್ಯ ಎಂದು ದೂರು ದಾಖಲಿಸಿಕೊಳ್ಳಲಾಗಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ” ಎಂದಿದ್ದಾರೆ.

ಸ್ವರಾ ಭಾಸ್ಕರ್‌ ವಿರುದ್ಧ ಕೊಲೆ ಬೆದರಿಕೆ ಬರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಸ್ವರಾ ವಿರುದ್ಧ ಕೊಲೆ, ಅತ್ಯಾಚಾರ ಬೆದರಿಕೆಗಳು ಬಂದಿವೆ. ಆದರೆ ಈ ಬಾರಿ ಪತ್ರದ ಮೂಲಕ ಬೆದರಕೆ ಹಾಕಲಾಗಿದೆ.

ಜೂನ್ 05 ರಂದು ಸಲ್ಮಾನ್ ಖಾನ್‌ಗೆ ಭೂಗತ ಜಗತ್ತಿಗೆ ಸೇರಿದ ಕೆಲವು ವ್ಯಕ್ತಿಗಳು ಇದೇ ಮಾದರಿಯಲ್ಲಿ ಪತ್ರ ಮುಖೇನ ಬೆದರಿಕೆ ಒಡ್ಡಿದ್ದರು. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಪ್ರತಿ ದಿನ ಜಾಗಿಂಗ್ ಮುಗಿಸಿ ಕುಳಿತುಕೊಳ್ಳುವ ಜಾಗದಲ್ಲಿ ಬೆದರಿಕೆ ಪತ್ರ ಇಡಲಾಗಿತ್ತು. ಪತ್ರದಲ್ಲಿ ”ಸಲೀಂ ಖಾನ್, ಸಲ್ಮಾನ್ ಖಾನ್‌ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ” ಎಂದು ಬರೆದಿತ್ತು. ಪತ್ರದಲ್ಲಿ ‘ಎಲ್‌.ಬಿ’ ಹಾಗೂ ‘ಜಿ.ಬಿ’ ಎಂಬ ಅಕ್ಷರಗಳನ್ನು ಸಹ ಬರೆಯಲಾಗಿತ್ತು. ಎಲ್‌.ಬಿ ಎಂದರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಜಿಬಿ ಎಂದರೆ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಗ್ಯಾಂಗ್‌ಸ್ಟರ್‌ಗಳಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ 'ಸಲಾರ್' ನಲ್ಲಿ ನಟ ಯಶ್ ಅವರು

Thu Jun 30 , 2022
  ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ‘ಸಲಾರ್’ ನಲ್ಲಿ ನಟ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಡವಾಗಿ ತಿಳಿದು ಬಂದಿದೆ. ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಮತ್ತು ಯಶ್ ಇಬ್ಬರನ್ನು ಒಂದೇ ಫ್ರೇಮ್ ನಲ್ಲಿ ತರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವದಂತಿಗಳು ಖಚಿತವಾದರೇ ಪ್ಯಾನ್ ಇಂಡಿಯಾ ನಾಯಕರುಗಳು ಪ್ರಭಾಸ್ ಮತ್ತು ಯಶ್ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. […]

Advertisement

Wordpress Social Share Plugin powered by Ultimatelysocial