‘ಪುಷ್ಪ’ ಸಿನಿಮಾ ನೋಡಿದವರು ಹೀಗೆ ಹೇಳುತ್ತಿದ್ದಾರೆ

Pushpa Twitter Review: 'ಪುಷ್ಪ' ಸಿನಿಮಾ ನೋಡಿದವರು ಹೀಗೆ ಹೇಳುತ್ತಿದ್ದಾರೆ

ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ಬೆಳ್ಳಂಬೆಳಗ್ಗೆ 5 ಗಂಟೆಗೆ ಶೋ ಪ್ರದರ್ಶನ ಮಾಡಲಾಗಿದೆ.

ಈಗಾಗಲೇ ಸಾವಿರಾರು ಮಂದಿ ‘ಪುಷ್ಪ’ ಸಿನಿಮಾದ ಮೊದಲ ಶೋ ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 

ಟ್ವಿಟ್ಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ‘ಪುಷ್ಪ’ ಸಿನಿಮಾದ ಚುಟುಕು ವಿಮರ್ಶೆಗಳು ಈಗಾಗಲೇ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ.

ಗುಂಡರಾಘವ ಎಂಬುವರು ಟ್ವೀಟ್ ಮಾಡಿದ್ದು, ”ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿಯಾಗಿ ಹೇಳುತ್ತಿದ್ದೇನೆ. ಸಿನಿಮಾದ ಮೊದಲಾರ್ಧ ತುಸು ಎಳೆದಂತೆ ಭಾಸವಾಗುತ್ತದೆ. ಅದರ ಬಳಿಕ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ” ಎಂದಿದ್ದಾರೆ.

‘ಸಿಂಪಲ್ ಔಟ್‌ಲುಕ್’ ಹೆಸರಿನ ಪ್ಯಾರಡಿ ಟ್ವಿಟ್ಟರ್ ಅಕೌಂಟ್‌ ಸಹ ಚುಟುಕು ವಿಮರ್ಶೆ ಪ್ರಕಟಿಸಿದ್ದು, ”ಸಿನಿಮಾದ ವಿಮರ್ಶೆಗಳು ಕೇವಲ ಎರಡು ವಿಧವಾಗಿ ಹೊರಗೆ ಬರುತ್ತಿವೆ. ಸಾಧಾರಾಣ, ಸಾಧಾರಣಕ್ಕಿಂತಲೂ ಕಡಿಮೆ. ಅಲ್ಲಿಗೆ ‘ಪುಷ್ಪ’ ಸಿನಿಮಾ ಫ್ಲಾಪ್ ಅಲ್ಲ ಆದರೆ ಹಿಟ್ ಅಂತೂ ಖಂಡಿತ ಅಲ್ಲ” ಎಂದಿದೆ.

Please follow and like us:

Leave a Reply

Your email address will not be published. Required fields are marked *

Next Post

5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಗಂಡನ ಜತೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಪಂ ಅಧ್ಯಕ್ಷೆ!

Fri Dec 17 , 2021
ಬೆಂಗಳೂರು: ಜಮೀನಿಗೆ ಇ-ಖಾತೆ ಕೊಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಇವರ ಗಂಡ ರೆಡ್‌ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಈಕೆಯ ಪತಿ ಶಿವರಾಜ್ ಕುಮಾರ್ ಬಂಧಿತರು. ಮಾಗಡಿ ರಸ್ತೆ ತಾವರೆಕೆರೆ ನಿವಾಸಿ, ಗಂಗೇನಹಳ್ಳಿ ಗ್ರಾಮದಲ್ಲಿ 2 ಎಕರೆ 2 ಗುಂಟೆ ಜಮೀನನ್ನು ವಾಣಿಜ್ಯ […]

Advertisement

Wordpress Social Share Plugin powered by Ultimatelysocial