ಅನಿರ್ದಿಷ್ಟ ಮುಷ್ಕರ ಹಾಗೂ ಭಾರತ್ ಬಂದ್ ಗೆ ಕರೆ ನೀಡಿದ್ದ ರೈತರು

ಅನಿರ್ದಿಷ್ಟ ಮುಷ್ಕರ ಹಾಗೂ ಭಾರತ್ ಬಂದ್ ಗೆ ಕರೆ ನೀಡಿ ರೈತ ಸಂಘಟನೆಗಳಿಂದ ಸುದ್ದಿ ಗೋಷ್ಠಿ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಹಿಂದೆ ರೈತರ, ಕೂಲಿ ಕಾರ್ಮಿಕರ, ಹಾಗೂ ಇನ್ನಿತರೆ ಅಸಂಘಟತಿತ ಕಾರ್ಮಿಕ ವರ್ಗದ ಜನರಿಗೆ ಹಾಗೂ ಅವರ ಅಭಿವೃದ್ಧಿಗಾಗಿ ಸಾಲ ಮನ್ನಾ, ಆರ್ಥಿಕವಾಗಿ ನೆರವು, ಉದ್ಯೋಗ ಶೃಷ್ಟಿ, ರೈತರ ಬೆಳೆಗೆ ನಿಗದಿತ ಬೆಲೆ ಹೀಗೆ ಹಲವಾರು ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದು, ಇದೀಗ ನರೇಂದ್ರ ಮೋದಿ ಸರ್ಕಾರ ಬಲವಂತವಾದ ಭೂ ಸುಗ್ನಿವಜ್ಞೆಯನ್ನು ಜಾರಿಗೆ ತಂದಿರುವ ಮೂಲಕ ರೈತರನ್ನು ಸಂಕಷ್ಟಕ್ಕೆ ಗುರಿಮಾಡಿದೆ. ಈ ಹಿನ್ನೆಲೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಬಲವಂತವಾದ ಭೂ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಹಾಗೂ ರೈತರಿಗೆ ವೈಜ್ಞಾನಿಕವಾಗಿ ಅನುಕೂಲವಾಗುವ ಕೃಷಿ ವಿಜ್ಞಾನಿಗಳಾದ ಡಾ. ಸ್ವಾಮೀನತನ್ ರವರ ವರದಿ ಕೂಡಲೇ ಜಾರಿಗೊಳಿಸಬೇಕು ಮತ್ತು ರೈತರ ವ್ಯವಸಾಯ ಜಮೀನುಗಳನ್ನು ಖಾಸಗಿಕಾರಣಕ್ಕೆ ಅವಕಾಶ ಕಲ್ಪಿಸಬಾರದು, ರೈತರ ಮೇಲೆ ನಡೆಯುತ್ತಿರುವ ದೋರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅಗ್ರಹಿಸಿ ಇದೇ ತಿಂಗಳು 26 ರ ರಂದು ಕರ್ನಾಟಕ ಪ್ರಾಂತ ರೈತ ಸಂಘ, ಹಸಿರು ಸೇನೆ ಮತ್ತು ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನಗಳಿಂದ ಅನಿರ್ದಿಷ್ಟವಾದ ಮುಷ್ಕರ ಹಾಗೂ ಗ್ರಾಮೀಣ ಭಾರತ ಬಂದ್ ಗೆ ಕರೆ ನೀಡಲಾಗಿದ್ದು. ಅದೇ ರೀತಿ ಇದೇ ತಿಂಗಳ 27 ರಂದು ಭಾರತೀಯ ಅಂಚೆ ಕಚೇರಿ ಹಾಗೂ ಬಿ ಎಸ್ ಎನ್ ಎಲ್ ನ ಜಿಲ್ಲಾ ಕಚೇರಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ನವೀನ್ ರವರು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ. ಆರ್. ಸೂರ್ಯ ನಾರಾಯಣ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ ಮತ್ತಿತರರು ಹಾಜರಿದ್ದರು.

ಇದನ್ನು ಓದಿ:8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ

 

Please follow and like us:

Leave a Reply

Your email address will not be published. Required fields are marked *

Next Post

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಅರೆಸ್ಟ್

Tue Nov 24 , 2020
ಬಹುಕೋಟಿ ಹಣ ವಂಚನೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ರೋಷನ್ ಬೇಗ್ ರನ್ನ ವಶಕ್ಕೆ ಪಡೆಯಲಾಗಿದೆ…ಎಸ್ ಇದರ ಕುರಿತಂತೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಈ ಸ್ಟೋರಿಯಲ್ಲಿ .ಬಹುಕೋಟಿ ಹಣ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂದೆ ಮಾಜಿ ಸಚಿವ ರೋಷನ್ ಬೇಗ್ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಜೊತೆಗೆ ಕೆಲವೊಂದಿಷ್ಟು ರಾಜಕೀಯ ವ್ಯಕ್ತಿಗಳು ಹೆಸರುಗಳು ಹೊರಬಂದಿದ್ದಾವೆ ಎನ್ನಲಾಗ್ತಿದೆ.ರೋಷನ್ ಬೇಗ್ ರನ್ನ ಬೆಳಗ್ಗೆಯೆ ಸಿಬಿಐ ವಿಚಾರಣೆಗೆ ಒಳಪಡಿಸಿದ್ದರು ಇದಾದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನ […]

Advertisement

Wordpress Social Share Plugin powered by Ultimatelysocial