ಆಯಶಸ್ ಸರಣಿ: ಅಜೇಯ ದಾಖಲೆ ಮುಂದುವರಿಸಿದ ಆಸೀಸ್

ಆಯಶಸ್ ಸರಣಿ: ಅಜೇಯ ದಾಖಲೆ ಮುಂದುವರಿಸಿದ ಆಸೀಸ್; ಮತ್ತೆ ಮುಗ್ಗರಿಸಿದ ಇಂಗ್ಲೆಂಡ್

ಅಡಿಲೇಡ್: ಆಯಶಸ್ ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಅಡಿಲೇಡ್ ಓವಲ್ ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದ ಸ್ಟೀವ್ ಸ್ಮಿತ್ ಪಡೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ತನ್ನ ಅಜೇಯ ಗೆಲುವಿನ ದಾಖಲೆಯನ್ನು ಮುಂದುವರಿಸಿತು.

ಗೆಲುವಿಗೆ 468 ರನ್ ಗಳ ದೊಡ್ಡ ಮೊತ್ತವನ್ನು ಬೆನ್ನತ್ತಿದ್ದರ ರೂಟ್ ಪಡೆ 192 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 275 ರನ್ ಅಂತರದ ಸೋಲನುಭವಿಸಿತು.

82 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಲ್ಲಿಂದ ಅಂತಿಮ ದಿನದ ಬ್ಯಾಟಿಂಗ್ ಮುಂದುವರಿಸಿದ ಆಂಗ್ಲರು ಇಂದೂ ಸತತ ವಿಕೆಟ್ ಕಳೆದುಕೊಂಡರು. ಕ್ರಿಸ್ ವೋಕ್ಸ್ 44 ರನ್ ಗಳಿಸಿದ್ದೇ ಇಂಗ್ಲೆಂಡ್ ಇನ್ನಿಂಗ್ಸ್ ನ ಹೆಚ್ಚಿನ ಗಳಿಕೆ. ವಿಕೆಟ್ ಕೀಪರ್ ಬ್ಯಾಟ್ಸಮನ್ ಜೋಸ್ ಬಟ್ಲರ್ ಪಂದ್ಯವನ್ನು ಡ್ರಾ ಮಾಡಲು ಭಾರೀ ಪ್ರಯತ್ನ ಮಾಡಿದರು. 207 ಎಸೆತದಲ್ಲಿ 26 ರನ್ ಗಳಿಸಿದ್ದ ವೇಳೆ ಬಟ್ಲರ್ ಹಿಟ್ ವಿಕೆಟ್ ಗೆ ಬಲಿಯಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೋಟರ್ ಐಡಿಗೂ ಆಧಾರ್ ಲಿಂಕ್- ಮಸೂದೆಗೆ ಅಂಕಿತ

Mon Dec 20 , 2021
ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. “ಆಧಾರ್ ಎಂಬುದು ನಿವಾಸದ ದಾಖಲೆಯಾಗಿದೆ ವಿನಃ, ಅದು ಪೌರತ್ವದ ಪುರಾವೆ ಅಲ್ಲ. ಒಂದು ವೇಳೆ ನೀವು ಮತದಾರನ ಬಳಿ ಆಧಾರ್ ಕಡ್ಡಾಯ ಎಂದು ಹೇಳಿದ್ರೆ, ಅದು ಅವರು ವಾಸವಾಗಿರುವುದಕ್ಕೆ ದೊರೆತ ದಾಖಲೆಯಾಗಲಿದೆ. ಇದರಿಂದಾಗಿ ನೀವು(ಕೇಂದ್ರ ಸರ್ಕಾರ) ಈ ದೇಶದ […]

Advertisement

Wordpress Social Share Plugin powered by Ultimatelysocial