ವೋಟರ್ ಐಡಿಗೂ ಆಧಾರ್ ಲಿಂಕ್- ಮಸೂದೆಗೆ ಅಂಕಿತ

ವೋಟರ್ ಐಡಿಗೂ ಆಧಾರ್ ಲಿಂಕ್- ಮಸೂದೆಗೆ ಅಂಕಿತ: ಈ ಕಾಯ್ದೆಯಿಂದ ಎಷ್ಟು ಉಪಯೋಗ?

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

“ಆಧಾರ್ ಎಂಬುದು ನಿವಾಸದ ದಾಖಲೆಯಾಗಿದೆ ವಿನಃ, ಅದು ಪೌರತ್ವದ ಪುರಾವೆ ಅಲ್ಲ.

ಒಂದು ವೇಳೆ ನೀವು ಮತದಾರನ ಬಳಿ ಆಧಾರ್ ಕಡ್ಡಾಯ ಎಂದು ಹೇಳಿದ್ರೆ, ಅದು ಅವರು ವಾಸವಾಗಿರುವುದಕ್ಕೆ ದೊರೆತ ದಾಖಲೆಯಾಗಲಿದೆ. ಇದರಿಂದಾಗಿ ನೀವು(ಕೇಂದ್ರ ಸರ್ಕಾರ) ಈ ದೇಶದ ಪ್ರಜೆಯಲ್ಲದವರಿಗೂ ಮತದಾನದ ಹಕ್ಕನ್ನು ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ತಿಳಿಸಿದ್ದರು.

ಕೇಂದ್ರ ಸರ್ಕಾರದ ವಾದವೇನು?

ಈ ವಿಧೇಯಕದಿಂದ ದೇಶದಲ್ಲಿನ ನಕಲಿ ಮತದಾನ ಕೊನೆಗೊಳ್ಳಲಿದೆ. ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಲಿದೆ ಎಂದು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ.?

Mon Dec 20 , 2021
ನೀವು ಆನ್​ಲೈನ್​​ನಲ್ಲಿ ಆಹಾರವನ್ನು ಆರ್ಡರ್​ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್​ನಿಂದ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು ವಿಧಿಸಿದೆ. ಈ ಹೊಸ ನಿಯಮವು ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರಲಿದೆ. ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಪ್ರಕಾರ, ರೆಸ್ಟೋರೆಂಟ್​ಗಳಂತೆ ಆಯಪ್​ ಕಂಪನಿಗಳು ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್​ನ ಪ್ರಯೋಜನವನ್ನು ಪಡೆಯೋದಿಲ್ಲ. ಆಹಾರ ವಿತರಣಾ ಅಪ್ಲಿಕೇಶನ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕೆಂದು […]

Advertisement

Wordpress Social Share Plugin powered by Ultimatelysocial