ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ.?

ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ.? ಹಾಗಾದ್ರೆ ನಿಮಗೆ ತಿಳಿದಿರಲಿ ಜ.1ರಿಂದ ಬದಲಾಗುವ ಈ ನಿಯಮ

ನೀವು ಆನ್​ಲೈನ್​​ನಲ್ಲಿ ಆಹಾರವನ್ನು ಆರ್ಡರ್​ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್​ನಿಂದ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು ವಿಧಿಸಿದೆ. ಈ ಹೊಸ ನಿಯಮವು ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರಲಿದೆ.

ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಪ್ರಕಾರ, ರೆಸ್ಟೋರೆಂಟ್​ಗಳಂತೆ ಆಯಪ್​ ಕಂಪನಿಗಳು ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್​ನ ಪ್ರಯೋಜನವನ್ನು ಪಡೆಯೋದಿಲ್ಲ. ಆಹಾರ ವಿತರಣಾ ಅಪ್ಲಿಕೇಶನ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕೆಂದು ಬಹಳ ದಿನಗಳಿಂದ ಬೇಡಿಕೆ ಕೇಳಿ ಬರುತ್ತಿತ್ತು. ಸೆಪ್ಟೆಂಬರ್​ 17ರಂದು ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಈ ನಿರ್ಧಾರಕ್ಕೆ ಹಸಿರು ನಿಶಾನೆ ತೋರಲಾಗಿದೆ. ಈ ಹೊಸ ವ್ಯವಸ್ಥೆಯು ಜನವರಿ 1ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ.

ಜನವರಿ 1ರಿಂದ ಆಯಪ್​ಗಳ ಮೇಲೆ ಕಾನೂನುಬದ್ಧವಾಗಿ ಶೇಕಡಾ 5ರಷ್ಟು ತೆರಿಗೆಯು ಗ್ರಾಹಕರ ಮೇಲೆ ಪರಿಣಾಮ ಬೀರೋದಿಲ್ಲ. ಏಕೆಂದರೆ ಸರ್ಕಾರವು ಡೆಲಿವರಿ ಆಯಪ್​ಗಳಿಂದ ಈ ಟ್ಯಾಕ್ಸ್​ನ್ನು ವಸೂಲಿ ಮಾಡುತ್ತದೆ. ಆದರೆ ಈ 5 ಪ್ರತಿಶತ ತೆರಿಗೆಯ ಹೊರೆಯನ್ನು ಡೆಲಿವರಿ ಆಯಪ್​ಗಳು ಗ್ರಾಹಕರ ಮೇಲೆ ಹೊರಿಸಲೂಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

The right way to Keep Your Ex girlfriend or boyfriend Online Dating After a Breakup

Tue Dec 21 , 2021
If your ex is online dating services after a break up, there are some actions you can take to keep it coming from becoming a big drama. Initially, don’t call your ex from it. Instead, simply actually tell them that you don’t wish to be matched with them. This kind […]

Advertisement

Wordpress Social Share Plugin powered by Ultimatelysocial