ಹಾಡುಗಳ ಸಾಲೇ ಸಿನಿಮಾ ಟೈಟಲ್

ಒಂದು ಸಿನಿಮಾಗೆ ಶೀರ್ಷಿಕೆ ಅನ್ನೋದು ಬಹಳ ಇಂಪಾರ್ಟೆಂಟ್‌. ಯಾಕೆಂದರೆ, ಪ್ರೇಕ್ಷಕರಿಗೆ ಮೊದಲು ಕನೆಕ್ಟ್ ಆಗೋದೇ ಸಿನಿಮಾ ಟೈಟಲ್. ಒಂದು ಸಿನಿಮಾದ ಟೈಟಲ್ ಎಷ್ಟು ಇಂಟರೆಸ್ಟಿಂಗ್ ಆಗಿರುತ್ತೋ, ಅಷ್ಟು ಜನರನ್ನು ಸೆಳೆಯುತ್ತದೆ. ಸಿನಿಮಾಗಳಿಗೆ ವಿಭಿನ್ನ ಟೈಟಲ್ ಇಡೋದ್ರಲ್ಲಿ ಉಪೇಂದ್ರ ಎಂಥ ಪರಿಣಿತರು ಅನ್ನೋದು ಎಲ್ಲರಿಗೂ ಗೊತ್ತಿದೆ. ಜೊತೆಗೆ ಹಾಡುಗಳ ಸಾಲನ್ನೇ ಸಿನಿಮಾಗಳಿಗೆ ಶೀರ್ಷಿಕೆಯಾಗಿಸುವ ಟ್ರೆಂಡ್ ಕೂಡ ಇದೆ. ಆದರೆ ಅದ್ಯಾಕೋ ಈಚೆಗೆ ಕೊಂಚ ಜಾಸ್ತಿಯೇ ಆಗಿದೆ. ಅಂದಹಾಗೆ, ಇಂದು (ಅ.5) ಘೋಷಣೆಯಾಗಿರುವ ರಮ್ಯಾ ಅವರ ಹೊಸ ‘ಸ್ವಾತಿಮುತ್ತಿನ ಮಳೆ ಹನಿಯೇ..’ ಸಿನಿಮಾದ ಟೈಟಲ್ ಕೂಡ ಕನ್ನಡದ ಫೇಮಸ್ ಹಾಡೊಂದರ ಸಾಲು. ಹೀಗೆ ಹಾಡುಗಳ ಸಾಲನ್ನೇ ಶೀರ್ಷಿಕೆಯಾಗಿಸಿರುವ ಹೊಸ ಸಿನಿಮಾಗಳ ಕುರಿತು ಇಲ್ಲಿದೆ ಮಾಹಿತಿ.ನಟಿ ರಮ್ಯಾ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದಾಗ ಎಲ್ಲರೂ ಕೂಡ ಸಖತ್ ಥ್ರಿಲ್ ಆಗಿದ್ದರು. ಸದ್ಯ ಅವರ ಹೊಸ ಸಿನಿಮಾದ ಘೋಷಣೆ ಆಗಿದ್ದು, ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂದು ಆ ಸಿನಿಮಾಗೆ ಟೈಟಲ್ ಇಡಲಾಗಿದೆ. ಅಂದಹಾಗೆ, ಇದು ‘ಕ್ರೇಜಿ ಸ್ಟಾರ್‌’ ರವಿಚಂದ್ರನ್ ಅವರ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲು. ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಸಾಂಗ್ ಸಖತ್ ಫೇಮಸ್ ಆಗಿದೆ. ಇದನ್ನು ಬರೆದವರು ಹಂಸಲೇಖ. ಅಂದಹಾಗೆ, ಇದೀಗ ಸೆಟ್ಟೇರಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಸಿನಿಮಾವನ್ನು ರಾಜ್ ಬಿ. ಶೆಟ್ಟಿ ನಿರ್ದೇಶಿಸಲಿದ್ದು, ಅವರೇ ಹೀರೋ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ರಮ್ಯಾ ಈ ಸಿನಿಮಾದ ನಾಯಕಿ ಮತ್ತು ನಿರ್ಮಾಪಕಿ.ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಸೆಟ್ಟೇರಿದ ಹೊಸ ಸಿನಿಮಾ ‘ಇಬ್ಬನಿ ತಬ್ಬಿದ ಇಳೆಯಲಿ’. ಈ ಸಿನಿಮಾದಲ್ಲಿ ಅಂಕಿತಾ ಅಮರ್ ಮತ್ತು ವಿಹಾನ್ ನಟಿಸುತ್ತಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನಿಮಾದ ನಿರ್ದೇಶಕರು. ಅಂದಹಾಗೆ, ‘ಇಬ್ಬನಿ ತಬ್ಬಿದ ಇಳೆಯಲಿ..’ ಅನ್ನೋದು ‘ರಶ್ಮಿ’ ಸಿನಿಮಾದ ಜನಪ್ರಿಯ ಹಾಡು. ಬಿ.ಆರ್. ಛಾಯಾ ಹಾಡಿರುವ ಈ ಹಾಡಿನಲ್ಲಿ ಶ್ರುತಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

'ಗುಳ್ಟು' ಖ್ಯಾತಿಯ ನವೀನ್ ಶಂಕರ್ ಹೊಸ ಸಿನಿಮಾ 'ಮೂಲತಃ ನಮ್ಮವರೇ'

Thu Dec 29 , 2022
‘ಗುಳ್ಟು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾದ ನಂತರ ಇದೀಗ ನವೀನ್ ಶಂಕರ್ ಅವರ ಮತ್ತೊಂದು ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಸಿನಿಮಾಗೆ ವಿಭಿನ್ನವಾದ ಟೈಟಲ್ ಇಡಲಾಗಿದೆ. ಹೌದು, ನವೀನ್ ಶಂಕರ್ ನಟನೆಯ ಮುಂದಿನ ಸಿನಿಮಾ ‘ಮೂಲತಃ ನಮ್ಮವರೇ’. ಈ ಸಿನಿಮಾವನ್ನು ಕಿರಣ್ ಗೋವಿಂದರಾಜ್ ಅವರು ನಿರ್ಮಾಣ […]

Advertisement

Wordpress Social Share Plugin powered by Ultimatelysocial