ಸ್ವಿಗ್ಗಿ ಕಂಪನಿಯ ಮೊಟ್ಟೆ ಜಾಹೀರಾತು ವೈರಲ್!

ವದೆಹಲಿ, ಮಾರ್ಚ್ 08: ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾಗಿರುವ ಬೇಸಿಗೆ ಆರಂಭದಲ್ಲಿ ಎದುರಾಗುವ ಹೋಲಿ ಹಬ್ಬವು ಒಂದು. ಇದನ್ನು ಮನೆ ಮಂದಿ, ಮಕ್ಕಳು, ಕಚೇರಿ ಸಿಬ್ಬಂದಿ ಸೇರಿದಂತೆ ಎಲ್ಲರು ಆಚರಣೆ ಮಾಡುತ್ತಾರೆ. ಇಂತಹ ಆಚರಣೆಗೆ ವಿರುದ್ಧವೆಂಬಂತಹ ಜಾಹೀರಾತು ನೀಡುವ ಮೂಲಕ ‘ಸ್ವಿಗ್ಗಿ ಕಂಪನಿ’ ಟೀಕೆಗೆ ಗುರಿಯಾದ ಬಳಿಕ ಎಚ್ಚೆತ್ತುಕೊಂಡ ಘಟನೆ ನಡೆದಿದೆ.

ಆಹಾರ ಸರಬರಾಜು ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ‘ಸ್ವಿಗ್ಗಿ ಕಂಪನಿ’ಯು ಹೋಳಿ ಹಬ್ಬ ಪ್ರಯುಕ್ತ ಜಾಹೀರಾತುವೊಂದನ್ನು ಅಳವಡಿಸಿತ್ತು. ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಟ್ವೀಟ್ಟರ್‌ನಲ್ಲಿ #ಹಿಂದೂಪೊಬಿಕ್‌ಸ್ವಿಗ್ಗಿ  ಹ್ಯಾಷ್ ಟ್ಯಾಗ್‌ ಹಾಕಿದ್ದು ಟ್ರೆಂಡ್ ಸೃಷ್ಟಿಸಿತ್ತು.

‘ಸ್ವಿಗ್ಗಿ ಕಂಪನಿ’ ಹೋಳಿ ಹಬ್ಬದಾಚರಣೆ ಅಂಗವಾಗಿ ಮೊಟ್ಟೆಯ ಜಾಹೀರಾತುವೊಂದರ ಫಲಕ ಹಾಕಿದ್ದೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುಗಳ ಕೆಂಗಣಿಗೆ ಗುರಿಯಾಯಿತು. ‘ಸ್ವಿಗ್ಗಿ ಕಂಪನಿಯು, ಹೋಳಿ ಹಬ್ಬದ ವೇಳೆಯಲ್ಲಿ ತಲೆಯ ಮೇಲೆ ಮೊಟ್ಟೆ ಹೊಡೆಯದಿರಿ. ಮೊಟ್ಟೆಯನ್ನು ಆಮ್ಲೆಟ್‌ ಮಾಡಿಕೊಂಡು ತಿನ್ನಿರಿ’ ಎಂದು ಜಾಹೀರಾತು ನೀಡಿ ದೆಹಲಿಯ ವಿವಿಧೆಡೆ ನಾಮಫಲಕ ಅಳವಡಿಸಿತ್ತು.

ಇದರ ವಿರುದ್ಧ ನಡೆದ ಹ್ಯಾಷ್ ಟ್ಯಾಗ್ ಅಭಿಯಾನದಿಂದ ಕೂಡಲೇ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ವಿವಾದಿತ ಜಾಹೀರಾತನ್ನು ತೆರವು ಮಾಡಿತು ಎಂದು ಪಿಟಿಐ ವರದಿ ಮಾಡಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದು ಜಾಹೀರಾತು ನೀಡಿದ್ದೀರಿ ಇದು ಅನಗತ್ಯ. ಇದು ಹಿಂದೂ ವಿರೋಧಿ ನಿಲುವು ಎಂದು ಒಂದು ವರ್ಗದ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಹೋಳಿ ಹಬ್ಬದ ಸಂದರ್ಭದಲ್ಲಿ ಸ್ವಿಗ್ಗಿ ಕಂಪನಿಯ ಈ ಕ್ರಮ ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಎಲ್ಲಾ ಹಬ್ಬಗಳಿಗೆ ಗೌರವವನ್ನು ತೋರಿಸಲು ಕಲಿಯಿರಿ. ಆಕ್ಷೇಪಾರ್ಹ ಜಾಹೀರಾತು ತೆಗೆದುಹಾಕಿ. ಅಲ್ಲದೇ ಹಿಂದೂಯೇತರ ಹಬ್ಬಗಳಲ್ಲಿ ಇಂತಹದ್ದನ್ನು ಏಕೆ ಮಾಡುವುದಿಲ್ಲ? ಸಾಮಾಜಿಕ ಜಾಲತಾಣದಲ್ಲಿ ಖಾರವಾದ ಪ್ರಶ್ನೆಗಳು ಸ್ವಿಗ್ಗಿ ಎದುರಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

10ನೇ ಕ್ಲಾಸ್‌ ಓದಿದವರು ಕೂಡ ರೈಲು ಓಡಿಸಬಹುದು!

Wed Mar 8 , 2023
ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾಗುವುದು ಸಹಜ. ಉನ್ನತ ಶಿಕ್ಷಣ ಪಡೆಯದೇ ಇದ್ದವರಲ್ಲಿ ಉದ್ಯೋಗದ ಬಗ್ಗೆ ಆತಂಕ ಹೆಚ್ಚಿರುತ್ತದೆ. ಉನ್ನತ ಶಿಕ್ಷಣ ಪಡೆಯದೇ ಇದ್ದರೂ ನೀವು ಸರ್ಕಾರಿ ಉದ್ಯೋಗವನ್ನು ಮಾಡಲು ಬಯಸಿದರೆ, ಲೊಕೊ ಪೈಲಟ್ ಕೆಲಸ ಉತ್ತಮ ಆಯ್ಕೆಯಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಕೆಲವು ಷರತ್ತುಗಳಿವೆ. ರೈಲಿನ ಚಾಲಕನನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಲೊಕೊ ಪೈಲಟ್ ಹುದ್ದೆಯನ್ನು ಭಾರತವು ಗ್ರೂಪ್ […]

Advertisement

Wordpress Social Share Plugin powered by Ultimatelysocial