ಟಿ. ಎಮ್. ಸೌಂದರರಾಜನ್

ಟಿ. ಎಮ್. ಸೌಂದರರಾಜನ್ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕರು.
ಟಿ ಎಮ್ ಸೌಂದರರಾಜನ್ 1922ರ ಮಾರ್ಚ್ 24ರಂದು ಮಧುರೈನಲ್ಲಿ ಜನಿಸಿದರು. ಮುಂದೆ ಹೊಟ್ಟೆ ಪಾಡಿಗಾಗಿ ಮಧುರೈ ಬಿಟ್ಟು ಹೊರಟ ಟಿಎಮ್ಎಸ್, ಕೊಯಂಬತ್ತೂರಿನ ರಾಯಲ್ ಟಾಕೀಸಿಗೆ ತಿಂಗಳಿಗೆ 50ರೂಪಾಯಿ ಸಂಬಳಕ್ಕೆ ಸೇರಿದರು. 1950ರಲ್ಲಿ ಅವರು ‘ಕೃಷ್ಣ ವಿಜಯಂ’ ಚಿತ್ರಕ್ಕೆ ಪ್ರಥಮ ಬಾರಿಗೆ ಹಿನ್ನೆಲೆಗಾಯಕರಾಗಿ ಹಾಡಿದರು. ತಮಿಳು ನಾಡಿನ ಪ್ರಖ್ಯಾತ ಕಲಾವಿದರಾದ ಎಂ. ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಅವರ ಬಹುತೇಕ ಚಿತ್ರಗಳಲ್ಲಿ ಟಿ ಎಮ್. ಸೌಂದರರಾಜನ್ ಅವರ ಗೀತೆಗಳು ಪ್ರಖ್ಯಾತಿ ಪಡೆದಿದ್ದವು. ಪ್ರಾರಂಭದ ದಶಕಗಳಲ್ಲಿ ಅವರು ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮುಂತಾದವರಿಗೆ ಕನ್ನಡದಲ್ಲಿ ಸಹಾ ಹಿನ್ನೆಲೆ ಗಾಯನ ನೀಡಿದ್ದರು. ರತ್ನಗಿರಿ ರಹಸ್ಯ, ಪ್ರೇಮ ಮಯಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಟಿ. ಎಮ್. ಸೌಂದರರಾಜನ್ ಅವರ ಪ್ರಖ್ಯಾತ ಗೀತೆಗಳಿವೆ. ಇವುಗಳಲ್ಲಿ ಅನುರಾಗದ ಅಮರಾವತಿ, ಬಾರೆ ಬಾರೆ ನನ್ನ ಹಿಂದೆ ಹಿಂದೆ ಇಂದಿಗೂ ಜನಪ್ರಿಯ. ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸೇರಿದಂತೆ 13 ಭಾಷೆಗಳ ಸುಮಾರು 10,000ಕ್ಕೂ ಹೆಚ್ಚು ಚಿತ್ರಗೀತೆಗಳು ಮತ್ತು 3000ಕ್ಕೂ ಹೆಚ್ಚು ಭಕ್ತಿಗೀತೆಗಳನ್ನೂ ಹಾಡಿದ್ದ ಟಿ. ಎಮ್. ಸೌಂದರರಾಜನ್ ಅವರ 6 ದಶಕಗಳಿಗೂ ಹೆಚ್ಚು ಕಾಲದ ಗಾಯನ ಸೇವೆ ಅನುಪಮವಾದದ್ದು.
ಟಿ. ಎಮ್. ಸೌಂದರರಾಜನ್ ಅವರು 2013ರ ಮೇ 25ರಂದು 91ನೇ ವಯಸ್ಸಿನಲ್ಲಿ ನಿಧನರಾದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎನ್ಟಿಆರ್ ತೆರೆಗೆ ಬೆಂಕಿ ಹಚ್ಚುತ್ತಿದ್ದಂತೆ RRR ಅಭಿಮಾನಿಗಳು ನಾಟು ನಾಟು ಹಾಡಿಗೆ ಚಿತ್ರಮಂದಿರಗಳಲ್ಲಿ ಹಣದ ಸುರಿಮಳೆಗೈದ,ರಾಮ್ ಚರಣ್ ಮತ್ತು ಜೂನಿಯರ್!

Fri Mar 25 , 2022
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಒಳಗೊಂಡ ನಾಟು ನಾಟು ಹಾಡು RRR ಜ್ವರ ಅಧಿಕೃತವಾಗಿ ರಾಷ್ಟ್ರವನ್ನು ಆವರಿಸಿದೆ. ಬಹುನಿರೀಕ್ಷಿತ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಿಡುಗಡೆಯ ಮೊದಲು, ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರು ಮಾಧ್ಯಮಗಳಲ್ಲಿ ಅದರ ಬಗ್ಗೆ ಮಾತನಾಡುವ ಮೂಲಕ ಮತ್ತು ಪ್ರವಾಸಗಳ ಸಮಯದಲ್ಲಿ ಅಭಿಮಾನಿಗಳೊಂದಿಗೆ ಸಂವಾದಿಸುವ ಮೂಲಕ ಚಲನಚಿತ್ರವನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದ್ದರು. ಮಾರ್ಚ್ 25 ರಂದು ಚಿತ್ರ ಬಿಡುಗಡೆಯಾಗುತ್ತಿದ್ದಂತೆ, RRR ಗೆ […]

Advertisement

Wordpress Social Share Plugin powered by Ultimatelysocial