TCS:ಟಿಸಿಎಸ್‌ ಜಗತ್ತಿನ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ ಪಟ್ಟಿಯಲ್ಲಿದೆ;

ಜಾಗತಿಕ ಮಟ್ಟದಲ್ಲಿ ಐ.ಟಿ. ಸೇವಾ ವಲಯದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಬ್ರ್ಯಾಂಡ್‌ ಮೌಲ್ಯಮಾಪನ ಸಲಹಾ ಸಂಸ್ಥೆ ಬ್ರ್ಯಾಂಡ್‌ ಫೈನಾನ್ಸ್‌ ಹೇಳಿದೆ.

ಆಯಕ್ಸೆಂಚರ್‌ ಕಂಪನಿಯು ಜಗತ್ತಿನ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.

ಸಂಸ್ಥೆಯು ಬಿಡುಗಡೆ ಮಾಡಿರುವ ‘ಬ್ರ್ಯಾಂಡ್‌ ಫೈನಾನ್ಸ್‌ ಐ.ಟಿ. ಸರ್ವಿಸ್‌ 25’ ವರದಿಯ ಪ್ರಕಾರ, ಪ್ರಮುಖ 25 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಭಾರತದ ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌, ಟೆಕ್‌ ಮಹೀಂದ್ರ ಮತ್ತು ಎಲ್‌ಟಿಐ ಬ್ರ್ಯಾಂಡ್‌ಗಳು ಸಹ ಸ್ಥಾನ ಪಡೆದಿವೆ.

2020-2022ರ ಅವಧಿಯಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮುಂಚೂಣಿ 10 ಐ.ಟಿ. ಸೇವಾ ಕಂಪನಿಗಳ ಪೈಕಿ ಭಾರತದ ಒಟ್ಟು ಆರು ಕಂಪನಿಗಳು ಇವೆ ಎಂದು ಸಂಸ್ಥೆ ತಿಳಿಸಿದೆ.

2020-2022ರ ಅವಧಿಯಲ್ಲಿ ಭಾರತದ ಐ.ಟಿ. ಬ್ರ್ಯಾಂಡ್‌ಗಳ ಸರಾಸರಿ ಬೆಳವಣಿಗೆಯು ಶೇಕಡ 51ರಷ್ಟಾಗಿದೆ. ಇದೇ ವೇಳೆ, ಅಮೆರಿಕದ ಬ್ರ್ಯಾಂಡ್‌ಗಳ ಬೆಳವಣಿಗೆಯು ಶೇ 7ರಷ್ಟು ಇಳಿಕೆ ಕಂಡಿದೆ.

ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮತ್ತು ಡಿಜಿಟಲೀಕರಣವು ವೇಗ ಪಡೆದುಕೊಂಡಿದ್ದು ಭಾರತದಲ್ಲಿ ಐ.ಟಿ. ಸೇವಾ ಕೇಂದ್ರಗಳ ವಿಸ್ತರಣೆಯನ್ನು ಸುಗಮಗೊಳಿಸಿದೆ. ಐ.ಟಿ. ಸೇವೆಗಳ ಬ್ರ್ಯಾಂಡ್‌ಗಳ ಉತ್ತಮ ಬೆಳವಣಿಗೆ ಮತ್ತು ಹೆಚ್ಚಿನ ಜನರು ಡಿಜಿಟಲ್‌ ಕೌಶಲ ಪಡೆದುಕೊಂಡಿರುವುದರಿಂದಾಗಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಇಂಟರ್‌ನೆಟ್‌ ಆಫ್ ಥಿಂಗ್ಸ್‌ (ಐಒಟಿ) ವ್ಯವಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ತಿಳಿಸಿದೆ.

ರ್‍ಯಾಂಕಿಂಗ್‌ನಲ್ಲಿ ಐಬಿಎಂ ನಾಲ್ಕನೇ ಸ್ಥಾನಕ್ಕೆ ಇಳಿಕೆ ಕಂಡಿದ್ದು, ಟಿಸಿಎಸ್‌ ಎರಡನೇ ಸ್ಥಾನಕ್ಕೇರಿದೆ ಎಂದು ಹೇಳಿದೆ. ಈ ಶ್ರೇಯಾಂಕವು ಕಂಪನಿಗೆ ಒಂದು ಪ್ರಮುಖ ಮೈಲಿಗಲ್ಲು ಆಗಿದ್ದು, ಮಾರುಕಟ್ಟೆ ಪ್ರಸ್ತುತತೆಯಲ್ಲಿ ಆಗಿರುವ ಹೆಚ್ಚಳದ ಸಂಕೇತವಾಗಿದೆ ಎಂದು ಟಿಸಿಎಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ರಾಜಶ್ರೀ ಅರ್‌. ಅಭಿಪ್ರಾಯಪಟ್ಟಿದ್ದಾರೆ.

ಕಂಪನಿ; ಬ್ರ್ಯಾಂಡ್‌ ಮೌಲ್ಯ

.ಆಯಕ್ಸೆಂಚರ್‌;₹ 2.71 ಲಕ್ಷ ಕೋಟಿ

.ಟಿಸಿಎಸ್‌;₹ 1.26 ಲಕ್ಷ ಕೋಟಿ

.ಇನ್ಫೊಸಿಸ್‌;₹ 96,000 ಕೋಟಿ

.ವಿಪ್ರೊ;₹ 47,250 ಕೋಟಿ

.ಎಚ್‌ಸಿಎಲ್‌;₹ 45,750 ಕೋಟಿ

.ಟೆಕ್‌ ಮಹೀಂದ್ರ;₹ 22,500 ಕೋಟಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

́ಮೆಗಾಸ್ಟಾ‌ರ್‌ ಚಿರಂಜೀವಿʼ ಅವರಿಗೆ ಕೊರೋನಾ ಪಾಸಿಟಿವ್‌

Wed Jan 26 , 2022
ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೂ ಕೊರೋನಾ ಪಾಸಿಟಿವ್ಎಂ ಬುದಾಗಿ ದೃಢಪಟ್ಟಿದೆ. ಹೀಗಾಗಿ ಹೋಂ ಐಸೋಲೇಷನ್ ( Home Isolation ) ಆಗಿ ಚಿಕಿತ್ಸೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada ಪಡೆಯುತ್ತಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial