ಸಣ್ಣ-ಪುಟ್ಟ ಜ್ವರ ಬಂದಾಗ ಆಸ್ಪತ್ರೆಗೆ ಹೋಗುವವರು ಕಡಿಮೆ,

 

ಸಣ್ಣ-ಪುಟ್ಟ ಜ್ವರ ಬಂದಾಗ ಆಸ್ಪತ್ರೆಗೆ ಹೋಗುವವರು ಕಡಿಮೆ, ಅಲ್ಲಿ ಹೋದರೂ ಪ್ಯಾರಾಸಿಟಮೋಲ್‌ ಸಿಗುವುದು ತಾನೇ ಎಂದು ಸ್ವ- ಚಿಕಿತ್ಸೆ ಮಾಡುತ್ತಾರೆ. ಜ್ವರ ಕಡಿಮೆಯಾಗುವವರೆಗೆ ಪ್ಯಾರಾಸಿಟಮೋಲ್‌ ತೆಗೆದುಕೊಳ್ಳುತ್ತಾರೆ. ಆದರೆ ದಿನಾ ಪ್ಯಾರಾಸಿಟಮೋಲ್‌ ತೆಗೆದುಕೊಂಡರೆ ಹೃದಯಾಘಾತವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.ಯೂನಿವರ್ಸಿಟಿ ಆಫ್‌ ಈಡನ್‌ಬರ್ಗ್‌ನಲ್ಲಿ ಈ ಕುರಿತು ಅಧ್ಯಯನ ನಡೆಸಲಾಯಿತು. 110 ರೋಗಿಗಳನ್ನು ಈ ಅಧ್ಯಯನದಲ್ಲಿ ಒಳಪಡಿಸಲಾಗಿತ್ತು. ಒಂದು ಗ್ರಾಂ ಪ್ಯಾರಾಸಿಟಮೋಲ್‌ ಅನ್ನು ದಿನದಲ್ಲಿ ನಾಲ್ಕು ಹೊತ್ತಿನಂತೆ ಎರಡು ವಾರ ನೀಡಲಾಗಿತ್ತು. ನಾಲ್ಕು ದಿನದ ಒಳಗಾಗಿ ರಕ್ತದೊತ್ತಡ ಹೆಚ್ಚಾಗಿರುವುದು ಗಮನಕ್ಕೆ ಬಂತು. ಇದರಿಂದ ಹೃದಯಾಘಾತ ಸಾಧ್ಯತೆ ಹೆಚ್ಚುವುದಾಗಿ ಸಂಶೋಧಕರು ಹೇಳಿದ್ದಾರೆ.ದೀರ್ಘಕಾಲದ ಕಾಯಿಲೆಗೆ ಪ್ಯಾರಾಸಿಟಮೋಲ್‌ ತೆಗೆದುಕೊಂಡರೆ ಅಪಾಯಯುಕೆಯಲ್ಲಿ ದೀರ್ಘಕಾಲ ಆರೋಗ್ಯ ಸಮಸ್ಯೆ ಇರುವ 10 ಜನರಲ್ಲಿ ಒಬ್ಬರಿಗೆ ನೋವು ಕಡಿಮೆಯಾಗಲು ಚಿಕಿತ್ಸೆ ಭಾಗವಾಗಿ ದಿನಾ ಪ್ಯಾರಾಸಿಟಮೋಲ್‌ ನೀಡಲಾಗುವುದು. ಅವರಲ್ಲಿ ಮೂವರಲ್ಲಿ ಒಬ್ಬರಿಗೆ ರಕ್ತದೊತ್ತಡ ಸಮಸ್ಯೆ ಇರುವುದಾಗಿ ಅಧ್ಯಯನ ವರದಿ ಹೇಳಿದೆ.ಪ್ರತಿದಿನ ಪ್ಯಾರಾಸಿಟಮೋಲ್ ತೆಗೆದುಕೊಂಡರೆ ಇದರಿಂದ ರಕ್ತದೊತ್ತಡ ಹೆಚ್ಚಾಗಿ ಹರದಯಾಘಾತ ಉಂಟಾಗುವುದು ಎಂದು ಸಂಶೋಧಕರು ಹೇಳಿದ್ದಾರೆ.ರೋಗಿಗೆ ibuprofen ಚಿಕಿತ್ಸೆ ನೀಡುತ್ತಿದ್ದರೆ ಅದನ್ನು ನಿಲ್ಲಿಸಲು ವೈದ್ಯರು ಅದರ ಬದಲಿಗೆ ಪ್ಯಾರಾಸಿಟಮೋಲ್‌ ನೀಡಲಾಗುತ್ತಿತ್ತು. ಆದರೆ ಈಗ ಸಂಶೋಧನೆ ವರದಿಯಿಂದ ಪ್ಯಾರಾಸಿಟಮೋಲ್ ಅನ್ನು ದಿನಾ ನೀಡುವುದು ಕೂಡ ರಕ್ತದೊತ್ತಡ ಹೆಚ್ಚಲು ಕಾರಣವಾಗುವುದು ಎಂದು ತಿಳಿದು ಬಂದಿದೆ.ರೋಗಿಯ ನೋವು ಕಡಿಮೆಯಾಗಲು ಲಸಿಕೆ ನೀಡಲೇಬೇಕು. ಆದ್ದರಿಂದ ಮೊದಲಿಗೆ ತುಂಬಾ ಕಡಿಮೆ ಡೋಸ್‌ನ ಪ್ಯಾರಾಸಿಟಮೋಲ್‌ ನೀಡಲು ಸಂಶೋಧಕರು ಸಲಹೆ ನೀಡಿದ್ದಾರೆ. ಯಾರಿಗೆ ಪ್ಯಾರಾಸಿಟಮೋಲ್‌ ಅವಶ್ಯಕ ಇದೆಯೋ ಅವರಿಗೆ ರಕ್ತದೊತ್ತಡ ಕಡಿಮೆ ಮಾಡುವ ಚಿಕಿತ್ಸೆ ಕೂಡ ನೀಡಬೇಕು ಎಂಬುವುದಾಗಿ ಸಂಶೋಧಕರು ಹೇಳಿದ್ದಾರೆ.ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆ ಪ್ಯಾರಾಸಿಟಮೋಲ್‌ ತೆಗೆದುಕೊಳ್ಳಬಹುದೇ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

20 ವರ್ಷ ಪೂರೈಸಿದ ಮೆಜೆಸ್ಟಿಕ್‌ ಸಿನಿಮಾದ ಸಂಭ್ರಮ ಮೆಲುಕು ಹಾಕಿದ ಡಿ ಬಾಸ್‌ Majestic | Darshan | Speed News |

Wed Feb 9 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial