ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಕೂಲಿ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಕಳೆದ ವಾರ ವ್ಯಕ್ತಿಯ ಮೇಲೆ ಆನೆ ದಾಳಿಮಾಡಿದ್ದು, ಇಂದು ಮತ್ತೆ ತೋಟದಲ್ಲಿ ಆನೆಗಳ ಗುಂಪು ಓಡಾಟ ಜಾಸ್ತಿಯಾಗಿದೆ. ಕೂಲಿಕಾರ್ಮಿಕರಿಗೆ ಅರಣ್ಯ ಇಲಾಖೆಯವರು ಮುಂಜಾಗೃತ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಫಿ ತೋಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಚಲಿಸುತ್ತಿದ್ದ ಟ್ರಾಕ್ಟರ್ ಪಲ್ಟಿ, ಓರ್ವ ಸಾವು

ವಿದ್ಯುತ್ ಟ್ರಾನ್ಸ್‌ಫಾರ್ಮರ್ಸ್‌ ಗೆ ಡಿಕ್ಕಿ ಹೊಡೆದ ಆನೆ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಹಾರ ಹರಸಿಕೊಂಡು ಬಂದಿದ್ದ ಕಾಡಾನೆ ದಾರಿಯಲ್ಲಿ ಟ್ರಾನ್ಸ್‌ಫಾರ್ಮರ್ಸ್‌ ಗಮನಿಸದೇ ಡಿಕ್ಕಿ ಹೊಡೆದ ಹಿನ್ನೆಲೆ ವಿದ್ಯುತ್ ಶಾಕ್ ನಿಂದ ಗಂಡಾನೆ ಸ್ಥಳದಲ್ಲೇ ಸಾವನಪ್ಪಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ:ಬೈಕ್ ಸವಾರ ಸ್ಥಳದಲ್ಲೇ ಸಾವು ಒರ್ವನಿಗೆ ಗಾಯ.!

ಕಾಡಾನೆ ತುಳಿದ ಪರಿಣಾಮ ತಲೆ ಛಿದ್ರಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ.ಮೃತಪಟ್ಟ ಕಾರ್ಮಿಕನನ್ನು ಸಂದೀಪ್ ಎಂದು ಗುರುತಿಸಲಾಗಿದೆ.ಕಾಫಿ ಪಲ್ಪಿಂಗ್ ಕಣದಲ್ಲಿ ಸಂದೀಪ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.ಕಳೆದ ರಾತ್ರಿ ಸಂದೀಪ್ ನಿದ್ರೆಯಲ್ಲಿದ್ದ ಸಂದರ್ಭ ಹಠಾತ್ತನೆ ಬಂದ ಕಾಡಾನೆ ದಾಳಿ ಮಾಡಿದೆ. ಕಾಡಾನೆ ತುಳಿತಕ್ಕೆ ತಲೆ ಛಿದ್ರಗೊಂಡು ಸ್ಥಳದಲ್ಲೇ ಕಾರ್ಮಿಕ ಸಂದೀಪ್ ಮೃತಪಟ್ಟಿದ್ದಾನೆ.ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ […]

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಆನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದೆ. ಕಾಡಾನೆಗಳ ಅಬ್ಬರಕ್ಕೆ 10-15 ತೆಂಗಿನ ಸಸಿಗಳು ನಾಶವಾಗಿದೆ.3-5 ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು,ವೆಂಕಟಲಕ್ಷ್ಮಮ್ಮ, ಮಲ್ಲೇಶ್ ಎಂಬುವರಿಗೆ ಸೇರಿದ ಬೆಳೆಯನ್ನು ಸಂಪೂರ್ಣ ಧ್ವಂಸ ಮಾಡಿದೆ. ಕಳೆದ 1 ತಿಂಗಳಿಂದ ಸತತವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದು,ಆನೆಗಳ ದಾಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ:ಚಿರತೆ ದಾಳಿಗೆ ಕುರಿ ಸಾವು

ಆನೆ ಹಿಂಡುಗಳ ದಾಳಿಯಿಂದ ರೈತನ ತಲೆ ನಜ್ಜಗುಜ್ಜಾಗಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಭತ್ತಲಹಳ್ಳಿ ಬಳಿ ಘಟನೆ ನಡೆದಿದೆ. ರಾತ್ರಿ ತೋಟದ ಬಳಿ ಕಾವಲಿಗೆಂದು ವೆಂಕಟೇಶಪ್ಪ ತೆರಳುತ್ತಿದ್ದ ವೇಳೆ ಆನೆ ಹಿಂಡುಗಳು ವೆಂಕಟೇಶಪ್ಪನ ಮೇಲೆ ದಾಳಿ ನಡೆಸಿ ತಲೆ ನಜ್ಜಗುಜ್ಜಾಗಿ ಮಾಡಿದೆ ವ್ಯೇಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಳೆದ 6 ತಿಂಗಳಲ್ಲಿ ಆನೆ ಹಿಂಡುಗಳ ದಾಳಿಗೆ 3 ನೇ ಬಲಿಯಾಗಿದ್ದು, ಆನೆ ದಾಳಿ ಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ […]

ಕರ್ನಾಟಕ ತಮಿಳುನಾಡು ರಾಜ್ಯದ ಗಡಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ… ಕೃಷ್ಣಗಿರಿ ಜಿಲ್ಲೆಯ ಸೂಲಗಿರಿ ಬಳಿಯ ಕಾಮನ್ ದೊಡ್ಡಿ ಅರಣ್ಯದಿಂದ ಒಂಟಿ ಆನೆಯೊಂದು ಗ್ರಾಮಕ್ಕೆ ಬಂದಿದ್ದು ,ಕೂಲಿ ಕೆಲಸಕ್ಕೆ ಹೋಗುವವರಿಗೆ ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ನೀಡಿದೆ.. ಇದನ್ನೂ ಓದಿ :ಆಕಸ್ಮಿಕ ಬೆಂಕಿ,ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮ  

ಐಷಾರಾಮಿ ರೆಸಾರ್ಟ್ ಗೆ ಬಂದಿದ್ದ ಕಾಡಾನೆಯನ್ನು ಓಡಿಸಲು ಕೆಲಸಗಾರರು ಟೈರ್ ಗೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದರು. ಟೈರ್ ನೇರವಾಗಿ ಆನೆಯ ನೆತ್ತಿ ಮೇಲೆ ಸಿಕ್ಕಿ ಹಾಕಿಕೊಂಡಿತ್ತು. ಈ ವೇಳೆ ಅಲ್ಲಿಂದ ಓಡಿ ಹೋದ ಆನೆ ದೂರದ ಕಾಡಿನಲ್ಲಿ ಸತ್ತು ಹೋಗಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ಬಳಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಆನೆಯೊಂದು ರೆಸಾರ್ಟ್ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಟ್ ನೋಡಿಕೊಳ್ಳುತ್ತಿದ್ದ ಪ್ರಶಾಂತ್ […]

ಕಾಡಾನೆಯೊಂದು ಅನುಮಾನಸ್ಪದವಾಗಿ ಮೃತ ಪಟ್ಟಿದ್ದು ಹೊಸೂರು ಬಳಿಯ ಉಡೆದುರ್ಗಂ ಅರಣ್ಯ ಪ್ರದೇಶ ವ್ಯಾಪ್ತಿಯ ಕವಿಪುರಂ ಗ್ರಾಮದ ಬಳಿ  ಘಟನೆ ನಡೆದಿದೆ. ಬೆಳಿಗ್ಗೆ ಗ್ರಾಮಸ್ಥರು ಹೊಲದ ಕಡೆ ಹೋಗುವಾಗ ಆನೆ ಮೃತ ಪಟ್ಟಿರುವುದನ್ನು ಕಂಡು ರಾಯಕೋಟೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ . ಇನ್ನೂ ಓದಿ :ಮದುವೆಗೆ ಚಿನ್ನ ಕಳ್ಳತನ          

Advertisement

Wordpress Social Share Plugin powered by Ultimatelysocial