ಮುಂಬೈ: ನಗರದ ವಿವಿಧೆಡೆ ಗುರುವಾರ ಬೆಳಗ್ಗೆ ವರೆಗೆ 66,700ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. 10 ದಿನಗಳ ವರೆಗೆ ನಡೆಯುವ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಗಳನ್ನು ಒಂದೂವರೆ ದಿನ, ಐದು ದಿನ, ಏಳು ದಿನ ಹಾಗೂ ಹತ್ತು ದಿನಗಳ ಬಳಿಕ ನೀರಿನಲ್ಲಿ ಮುಳುಗಿಸುವ ಪ್ರತೀತಿ ಇದೆ.   ಬಿಎಂಸಿ ಅಧಿಕಾರಿಗಳ ಪ್ರಕಾರ, ಸಮುದ್ರ […]

ದಾವಣಗೆರೆ,ಸೆಪ್ಟೆಂಬರ್‌ 20: ಬೆಣ್ಣೆನಗರಿ ದಾವಣಗೆರೆಯಲ್ಲಿ ಗೌರಿಗಣೇಶ ಹಬ್ಬ ಸಂಭ್ರಮದಿಂದ ನೆರವೇರಿದೆ. ಎಲ್ಲೆಡೆ ವಿಘ್ನ ನಿವಾರಕನ ಮೂರ್ತಿಗಳನ್ನಿಟ್ಟು ವಿಶೇಷವಾಗಿ ಪೂಜಿಸಲಾಗಿದ್ದು, ಕೆಲವೆಡೆ ಇಂದು ಕೂಡ ಹಬ್ಬದ ಸಂಭ್ರಮ ಮುಂದುವರಿದಿದೆ. ನಗರದ ಹಲವೆಡೆ ವಿಭಿನ್ನವಾಗಿ ಗಣಪತಿ ಕೂರಿಸಲಾಗಿದೆ. ಹರಿಹರ, ದಾವಣಗೆರೆಯಲ್ಲಿ ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಚಂದ್ರನ ನೆಲದಲ್ಲಿ ಗಣಪನ ಮೂರ್ತಿ ಕೂರಿಸಿ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ದಾವಣಗೆರೆಯಲ್ಲಿ ಕೂರಿಸಲಾದ, ವಿಶೇಷ ಗಣೇಶ ವಿಗ್ರಹಗಳ ಬಗ್ಗೆ ಮಾಹಿತಿ ಇಲ್ಲಿದೆ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ […]

ಮೈಸೂರು, ಸೆಪ್ಟೆಂಬರ್‌, 17: ಗೌರಿ-ಗಣೇಶ ಹಬ್ಬದ ಸಾಮಗ್ರಿಗಳ ಖರೀದಿ ಭಾನುವಾರ ಜೋರಾಗಿದ್ದು, ಬೆಲೆ ಏರಿಕೆ ನಡುವೆಯೂ ಸಾರ್ವಜನಿಕರು ನಗರದ ಮಾರುಕಟ್ಟೆಯಲ್ಲಿ ಹೂವು-ಹಣ್ಣು ಖರೀದಿಸಿದರು. ಹಾಗಾದರೆ ಹೂ, ಹಣ್ಣು ದರಗಳ ವಿವರವನ್ನು ಇಲ್ಲಿ ತಿಳಿಯಿರಿ. ನಗರದ ದೇವರಾಜ ಮಾರುಕಟ್ಟೆ ಸೇರಿ ಇನ್ನಿತರ ಕಡೆಗಳಲ್ಲಿ ಜೋರಾದ ವ್ಯಾಪಾರ ವಹಿವಾಟು ನಡೆಯಿತು. ನಗರದ ಹಲವು ಬಡಾವಣೆ, ರಸ್ತೆಬದಿಗಳಲ್ಲಿ ಗೌರಿಗಣೇಶನ ಮೂರ್ತಿಗಳು ಹಾಗೂ ಹಬ್ಬಕ್ಕೆ ಬೇಕಾದ ಹೂವು-ಬಾಳೆಕಂದು, ಗರಿಕೆ ಹಾಗೂ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯಿತು. […]

ಬೆಂಗಳೂರು, ಸೆಪ್ಟೆಂಬರ್‌, 17: ರಾಜಾಧಾನಿ ಬೆಂಗಳೂರಿನಲ್ಲಿ‌ ಗೌರಿ – ಗಣೇಶನ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಗಣೇಶ ವಿಸರ್ಜನೆಗೆ ಬೇಕಾದ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ. ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.‌ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗೌರಿ – ಗಣೇಶನ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಗೌರಿ – ಗಣೇಶನ ಮೂರ್ತಿಗಳಿಂದ ಸಿಲಿಕಾನ್ ಸಿಟಿ ಕಂಗೋಳಿಸುತ್ತಿದೆ. ಈ ಮಧ್ಯೆ ಬಿಬಿಎಂಪಿ ಗಣೇಶ ಮೂರ್ತಿ ವಿಸರ್ಜನೆಗೆ ಸಕಲ […]

ಕೋಲ್ಕತ್ತಾ : ದುರ್ಗಾ ಪೂಜೊ ಉತ್ಸವ ಪ್ರಾರಂಭವಾಗಲು ಒಂದು ತಿಂಗಳು ಉಳಿದಿರುವಾಗ, ಕೋಲ್ಕತ್ತಾದ ಜನರು ಮೊದಲು ಗಣಪತಿಯನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಗಣೇಶ ಚತುರ್ಥಿಗೆ ಮುಂಚಿತವಾಗಿ ನಗರದಾದ್ಯಂತ ವಿವಿಧ ವಿಷಯಗಳನ್ನು ಆಧರಿಸಿದ ನೂರಾರು ಪೆಂಡಾಲ್ಗಳನ್ನು ನಿರ್ಮಿಸಲಾಗಿದೆ ಆದರೆ ಭಾರತದ ಚಂದ್ರಯಾನ -3 ಚಂದ್ರನ ಮಿಷನ್ ಅನ್ನು ಪ್ರದರ್ಶಿಸುವ ಪೆಂಡಾಲ್ ಹೆಚ್ಚಿನ ಗಮನ ಸೆಳೆಯುತ್ತಿದೆ.   ನೀವು ಪೆಂಡಾಲ್ ಅನ್ನು ಪ್ರವೇಶಿಸುತ್ತಿದ್ದಂತೆ, ನೀವು ಚಂದ್ರ ಮತ್ತು ವಿಕ್ರಮ್ ರೋವರ್ ಅನ್ನು ನೋಡಬಹುದು ಮತ್ತು […]

ಮಂಗಳೂರು, ಸೆಪ್ಟೆಂಬರ್‌, 14: ಸೆಪ್ಟೆಂಬರ್‌ 19ರಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಸೆಪ್ಟೆಂಬರ್‌ 19ರಂದು ಸರ್ಕಾರಿ ರಜೆ ಘೋಷಣೆ ಮಾಡಬೇಕೆನ್ನುವ ಕೂಗುಗಳು ಎದ್ದಿದೆ. ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಅದೇ ಬೇಡಿಕೆಗಳು ಕೇಳಿಬಂದಿವೆ.   ಗಣೇಶೋತ್ಸವ ಹಿನ್ನೆಲೆ ಸೆಪ್ಟೆಂಬರ್‌ 19ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ರಜೆ ಘೋಷಣೆ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಜಿಲ್ಲಾ ಉಸ್ತುವಾರಿ […]

Advertisement

Wordpress Social Share Plugin powered by Ultimatelysocial