ದಾವಣಗೆರೆ ಟಾಪ್ 10 ಗಣೇಶ ಮೂರ್ತಿಗಳು ಯಾವುವು ಗೊತ್ತಾ..?

ದಾವಣಗೆರೆ,ಸೆಪ್ಟೆಂಬರ್‌ 20: ಬೆಣ್ಣೆನಗರಿ ದಾವಣಗೆರೆಯಲ್ಲಿ ಗೌರಿಗಣೇಶ ಹಬ್ಬ ಸಂಭ್ರಮದಿಂದ ನೆರವೇರಿದೆ. ಎಲ್ಲೆಡೆ ವಿಘ್ನ ನಿವಾರಕನ ಮೂರ್ತಿಗಳನ್ನಿಟ್ಟು ವಿಶೇಷವಾಗಿ ಪೂಜಿಸಲಾಗಿದ್ದು, ಕೆಲವೆಡೆ ಇಂದು ಕೂಡ ಹಬ್ಬದ ಸಂಭ್ರಮ ಮುಂದುವರಿದಿದೆ.

ನಗರದ ಹಲವೆಡೆ ವಿಭಿನ್ನವಾಗಿ ಗಣಪತಿ ಕೂರಿಸಲಾಗಿದೆ.

ಹರಿಹರ, ದಾವಣಗೆರೆಯಲ್ಲಿ ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಚಂದ್ರನ ನೆಲದಲ್ಲಿ ಗಣಪನ ಮೂರ್ತಿ ಕೂರಿಸಿ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ದಾವಣಗೆರೆಯಲ್ಲಿ ಕೂರಿಸಲಾದ, ವಿಶೇಷ ಗಣೇಶ ವಿಗ್ರಹಗಳ ಬಗ್ಗೆ ಮಾಹಿತಿ ಇಲ್ಲಿದೆ.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯು ಕೇದಾರನಾಥ ಮಂಟಪದ ಮಾದರಿಯಲ್ಲಿ 140 ಅಡಿ ಉದ್ದ ಹಾಗೂ 65 ಅಡಿ ಅಗಲದ ಗಣೇಶನ ಮಂಪಟವನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಗಣೇಶ ಮೂರ್ತಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಸದ್ಯಕ್ಕೆ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ. ಹಿಂದೂಪರ ಸಂಘಟನೆಗಳು ಸಹ ಈ ಗಣಪನ ಪ್ರತಿಷ್ಠಾಪನೆ ಮಾಡಿ ನಿತ್ಯವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಮಂಟಪದ ಸುತ್ತ ನಾಗೇಶ್ವರ, ಭೀಮಾಶಂಕರ, ವೈದ್ಯನಾಥೇಶ್ವರ, ಓಂಕಾರೇಶ್ವರ, ಮಹಾಕಾಳೇಶ್ವರ, ಮಲ್ಲಿಕಾರ್ಜುನ, ಸೋಮನಾಥೇಶ್ವರ, ಕಾಶಿ ವಿಶ್ವನಾಥ, ಘೃಷ್ಲೇಶರ, ತ್ರಯಂಬಕೇಶ್ವರ, ಕೇದಾರೇಶ್ವರ, ರಾಮೇಶ್ವರ ಜ್ಯೋತಿರ್ಲಿಂಗಗಳ ಚಿತ್ರಗಳ ಮಾದರಿ ಗಮನ ಸೆಳೆಯುತ್ತಿದೆ. ಸುಮಾರು 26 ದಿನಗಳ ಕಾಲ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರಸಾದ ವಿತರಣೆಯೂ ನಡೆಯುತ್ತಿದೆ. ಮಂಟಪದ ಪಕ್ಕದಲ್ಲಿ ಮಕ್ಕಳಿಗಾಗಿ ಅಮ್ಯೂಸ್ ಮೆಂಟ್ ಪಾರ್ಕ್ ಸಹ ಇದೆ.

ಗೋಪಿ ಚಂದನ ಅಲಂಕಾರ

ಹಿಂದೂ ಯುವ ಶಕ್ತಿ ವತಿಯಿಂದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಗೋಪಿ ಚಂದನ ಅಲಂಕಾರ ಮಾಡಲಾಗಿದೆ. ಕಳೆದ ಬಾರಿ ಕೊಬ್ಬರಿಯಿಂದ ಗಣೇಶನ ಮೂರ್ತಿ ಅಲಂಕರಿಸಲಾಗಿತ್ತು. ಪ್ರತಿವರ್ಷವೂ ಒಂದೊಂದು ರೀತಿಯಲ್ಲಿ ಅಲಂಕಾರ ಮಾಡುವುದು ಇಲ್ಲಿನ ವಾಡಿಕೆ. ಗಣೇಶನ ವಿಗ್ರಹ 18 ಅಡಿ ಇದ್ದು, 250 ಕೆಜಿಯಷ್ಟು ಗೋಪಿಚಂದನದಿಂದ ಅಲಂಕರಿಸಲಾಗಿದೆ.

ರಾಂ ಅಂಡ್ ಕೋ ಸರ್ಕಲ್ ನಲ್ಲಿ

ರಾಂ ಅಂಡ್ ಕೋ ವೃತ್ತದಲ್ಲಿ ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿಯು 31ನೇ ವರ್ಷದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಶಂಕರಾಚಾರ್ಯರಿಗೆ ಕಾಳಿದೇವಿ ದರ್ಶನ ನೀಡುವ ರೂಪಕ ಆಯೋಜಿಸಲಾಗಿದೆ. ಅನ್ನಸಂತರ್ಪಣೆ

ಹಾಗೂ ಸೆ. 30ರಂದು ವಿಸರ್ಜನೆ ನಡೆಯಲಿದೆ.

ಕ್ಷೀರ ಸಾಗರ ಮಂಥನ

ಎಸ್. ಕೆ. ಪಿ.ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ 42ನೇ ವಿನಾಯಕ ಮಹೋತ್ಸವದ ಪ್ರಯುಕ್ತ ಶ್ರೀ ಕಾಸಲ್ ವಿಠಲ್, ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿ ಪ್ರತಿಷ್ಠಾಪನೆ ಮಾಡಲಾಗಿದೆ.

ಮಹೋತ್ಸವದ ಅಂಗವಾಗಿ ಭಕ್ತರ ವೀಕ್ಷಣೆಗಾಗಿ ಕ್ಷೀರ ಸಾಗರ ಮಂಥನ ಪ್ರದರ್ಶನ ಆಯೋಜಿಸಲಾಗಿದ್ದು, ಸೆ. 25ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಡ್ರೈ ಫ್ರೂಟ್ಸ್ ಗಣಪತಿ

ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಈ ವರ್ಷ ವಿವಿಧ ಡ್ರೈ ಫ್ರ್ಯೂಟ್ಸ್ ಗಳಿಂದ ಮನಮೋಹಕ ವಿನೋದಕನನ್ನು ಅಲಂಕರಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಅಂದದ ಮಂಟಪದಲ್ಲಿ ವಿಘ್ನನಿವಾರಕ

ಹೊಂಡದ ಸರ್ಕಲ್ ನ ವಾಲ್ಮೀಕಿ ಯುವಕರ ಸಂಘವು 13 ಅಡಿ ಸಿದ್ದೇಶ್ವರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದುರ್ಗಾಂಬಿಕಾ ದೇವಸ್ಥಾನದ ಬಳಿಕ ಜೈ ಭಜರಂಗ ಬಲಿ ಯುವಕರ ಸಂಘವು ರಾಣಾ ಪ್ರತಾಪ ಸಿಂಗ್ ಅವರ ರೂಪದ ಗಣೇಶ ಮೂರ್ತಿ

ಕೂರಿಸಲಾಗಿದೆ.

ಬಂಬೂ ಬಜಾರ್‌ನಲ್ಲಿ ಗಣೇಶೋತ್ಸವ

ನಗರದ ಬಂಬೂ ಬಜಾರ್ ನಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮೇದಾರ ಸಮಾಜದಿಂದ 53 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪೂರ್ಣ ಪ್ರಮಾಣದ ಬಿದಿರಿನಿಂದ ನಿರ್ಮಿಸಲಾದ ಚಂದ್ರಯಾನ -3 ಮಾದರಿಯನ್ನು ನಿರ್ಮಿಸಿ ಗಣೇಶ ಪ್ರತಿಷ್ಠಾಪಿಸಲಾಗಿದೆ.

36 ಅಡಿ ಎತ್ತರ ಹಾಗೂ 8 ಅಡಿ ಸುತ್ತಳತೆಯಲ್ಲಿ ಜಿ.ಎಸ್.ಎಲ್.ವಿ ಲಾಂಚ್ ವೆಹಿಕಲ್‌ನ ಎಲ್ ವಿ ಎಂ 3,4 ಹಾಗೂ ಚಂದ್ರನ ಮೈಲ್ಮೈನಲ್ಲಿ ಲ್ಯಾಂಡಿಂಗ್ ಮಾಡಿರುವ ವಿಕ್ರಂ ಲ್ಯಾಂಡರ್ ಅನ್ನು ಹಾಗೂ ಪ್ರಗ್ಯಾನ್ ರೋವರ್ ಗಳಿಂದ ಬಿದಿರಿನ ಚಾಪೆಗಳು ಹಾಗೂ ಬಂಬೂಗಳಿಂದ ನಿರ್ಮಾಣ ಮಾಡಲಾಗಿದೆ. 150 ಕರಕುಶಲ ಕರ್ಮಿಗಳು ಸತತ 10 ದಿನಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ನಿರ್ಮಿಸಿರುವುದು ಇಲ್ಲಿನ ಸ್ಪೆಷಾಲಿಟಿ.

ದಾವಣಗೆರೆ ಸಮೀಪದ ಎಲೇಬೆತೂರು ಗ್ರಾಮ ಪಂಚಾಯಿತಿಯಲ್ಲಿ ಬೆಲ್ಲದ ಗಣಪತಿ, ವಿನೋಬನಗರದಲ್ಲಿ ಪ್ರತಿಷ್ಠಾಪಿಸಿರುವ ಗಣಪ, ಕೆ.ಬಿ ಬಡಾವಣೆ, ಪಿ.ಜೆ ಬಡಾವಣೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,876 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಸಂವಿಧಾನದ ಹೊಸ ಪ್ರತಿಗಳಿಂದ 'ಸಮಾಜವಾದಿ, ಜಾತ್ಯತೀತ' ಪದವನ್ನು ತೆಗೆದುಹಾಕಲಾಗಿದೆ: ಅಧೀರ್ ರಂಜನ್ ಚೌಧರಿ

Wed Sep 20 , 2023
ನವದೆಹಲಿ: ನೂತನ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು ರಾಜಕಾರಣಿಗಳಿಗೆ ಹಸ್ತಾಂತರಿಸಲಾದ ಸಂವಿಧಾನದ ಹೊಸ ಪ್ರತಿಗಳಲ್ಲಿ ‘ಸಮಾಜವಾದಿ ಜಾತ್ಯತೀತ’ ಎಂಬ ಪದಗಳಿಲ್ಲ ಎಂದು ಹೇಳುವ ಮೂಲಕ ಸಂವಿಧಾನದ ಮೇಲಿನ ದಾಳಿಯ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಳವಳ ವ್ಯಕ್ತಪಡಿಸಿದ್ದಾರೆ.   “ಇಂದು (ಸೆಪ್ಟೆಂಬರ್ 19) ನಮಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳು, ನಾವು ನಮ್ಮ ಕೈಯಲ್ಲಿ ಹಿಡಿದು ಪ್ರವೇಶಿಸಿದ (ಹೊಸ ಸಂಸತ್ ಕಟ್ಟಡ), ಅದರ ಪೀಠಿಕೆಯಲ್ಲಿ ‘ಸಮಾಜವಾದಿ […]

Advertisement

Wordpress Social Share Plugin powered by Ultimatelysocial