ನಟಿ ಶಾನ್ವಿ ಶ್ರೀವಾಸ್ತವ ಅಭಿನಯದ ಮಲಯಾಳಂ ಸಿನಿಮಾ ‘ಮಹಾ ವೀರ್ಯರ್​’ ಚಿತ್ರದ ಫಸ್ಟ್​ ಲುಕ್ ಬಿಡುಗಡೆ ಆಗಿದೆ.

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಶಾನ್ವಿ ಶ್ರೀವಾಸ್ತವ ಅಭಿನಯದ ಮಲಯಾಳಂ ಸಿನಿಮಾ ‘ಮಹಾ ವೀರ್ಯರ್​’ ಚಿತ್ರದ ಫಸ್ಟ್​ ಲುಕ್ ಬಿಡುಗಡೆ ಆಗಿದೆ.ಈ ಚಿತ್ರದಲ್ಲಿ ನಾಯಕ ನಿವಿನ್ ಪೌಲಿಗೆ ನಟಿ ಶಾನ್ವಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇದು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಖ್ಯಾತ ಲೇಖಕ ಎಂ. ಮುಕುಂದನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು.ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆ. ಟೈಮ್​ ಟ್ರಾವೆಲಿಂಗ್ ಸೇರಿ ಕಾನೂನು ಕಟ್ಟಳೆಯ ಅಂಶವೂ ಈ ಚಿತ್ರದಲ್ಲಿದೆ. ನಿವಿನ್ ಅವರ ಹೋಮ್ ಬ್ಯಾನರ್ ‘ನಿವಿನ್ ಜೂನಿಯರ್ ಪಿಕ್ಚರ್ಸ್’ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್.​ ಶ್ಯಾಮ್​ನಾಸ್​ ಅವರ ‘ಇಂಡಿಯನ್ ಮೂವಿ ಮೇಕರ್ಸ್’ ಸಂಸ್ಥೆಯೂ ಜಂಟಿಯಾಗಿ ಬಂಡವಾಳ ಹೂಡಿದೆ.ಈ ಹಿಂದೆ ನಿವಿನ್ ಜತೆಗೆ ‘1983’ ಮತ್ತು ‘ಆಯಕ್ಷನ್ ಹೀರೋ ಬಿಜು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್ ಅವರೇ ಈ ಚಿತ್ರಕ್ಕೂ ಆಯಕ್ಷನ್-ಕಟ್ ಹೇಳಿದ್ದು, ಇವರು ಮೂರನೇ ಬಾರಿ ಒಂದಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿವಿನ್ ಮತ್ತು ಆಸಿಫ್ ಅಲಿ ಒಟ್ಟಿಗೆ ನಟಿಸದೇ 10 ವರ್ಷಗಳಾಗಿದ್ದವು. ಇದೀಗ ದಶಕದ ಬಳಿಕ ಈ ಜೋಡಿ ಒಂದಾಗಿದೆ.ಚಿತ್ರದಲ್ಲಿ ಲಾಲ್, ಲಾಲು ಅಲೆಕ್ಸ್, ಸಿದ್ದಿಕಿ, ಶಾನ್ವಿ ಶ್ರೀವಾಸ್ತವ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್. ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್ ಸೇರಿ ಹಲವರು ನಟಿಸಿದ್ದಾರೆ.ಕರೊನಾ ಹಾವಳಿ ನಡುವೆಯೂ ದೊಡ್ಡ ಬಜೆಟ್​ನ ಈ ಸಿನಿಮಾದ ಶೂಟಿಂಗ್​ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದ್ದು, ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ. ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್ 2022 ಹರಾಜು: ಮೆಗಾ ಹರಾಜಿನಲ್ಲಿ ಹರಾಜುಗಾರ ಹ್ಯೂ ಎಡ್ಮೀಡ್ಸ್ ಮಧ್ಯದಲ್ಲಿ ಕುಸಿದುಬಿದ್ದರು

Sat Feb 12 , 2022
    ಹಗ್ ಎಡ್ಮೀಡ್ಸ್ ಅವರ ಫೈಲ್ ಫೋಟೋ. ಭಯಾನಕ ಘಟನೆಯೊಂದರಲ್ಲಿ, ಬೆಂಗಳೂರಿನಲ್ಲಿ ಶನಿವಾರ ನಡೆದ ಐಪಿಎಲ್ 2022 ರ ಹರಾಜಿನ ವೇಳೆ ಐಪಿಎಲ್ ಹರಾಜುದಾರ ಹ್ಯೂ ಎಡ್ಮೀಡ್ಸ್ ಮಧ್ಯದಲ್ಲಿ ಕುಸಿದು ಬಿದ್ದಿದ್ದಾರೆ. 63 ವರ್ಷದ ಬ್ರಿಟಿಷ್ ಹರಾಜುದಾರ ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಸುದೀರ್ಘ ಹರಾಜು ಯುದ್ಧವನ್ನು ನಡೆಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ ನೆಲದ ಮೇಲೆ […]

Advertisement

Wordpress Social Share Plugin powered by Ultimatelysocial