ಚೀನಾಗೆ ತಿರುಗೇಟು ನೀಡಿದ ತೈವಾನ್‌ ಅಧ್ಯಕ್ಷೆ..?

ತೈಪೆ: ‘ಚೀನಾದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ದ್ವೀಪರಾಷ್ಟ್ರದ ತೈವಾನ್‌ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲಾಗುವುದು’ ಎಂದು ತೈವಾನ್‌ ಭಾನುವಾರ ಹೇಳಿದೆ.

‘ತೈವಾನ್‌ ದೇಶದ ಭಾಗವಾಗಿದ್ದು, ಬಲಪ್ರಯೋಗ ಮಾಡಿಯಾದರೂ ಅದನ್ನು ವಶಕ್ಕೆ ಪಡೆಯುತ್ತೇವೆ’ ಎಂಬ ಚೀನಾದ ಪ್ರತಿಪಾದನೆಗೆ ಈ ಮೂಲಕ ಭಾನುವಾರ ತಿರುಗೇಟು ನೀಡಿದೆ.

‘ತೈವಾನ್‌ನ ರಾಷ್ಟ್ರೀಯ ದಿನ’ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷೆ ಸೈ ಇಂಗ್ ವೆನ್‌, ‘ನಾವು ಸಾಧನೆ ಮಾಡಿದಷ್ಟೂ ಚೀನಾದ ಒತ್ತಡ ಹೆಚ್ಚಲಿದೆ. ಚೀನಾದ ಮಾರ್ಗದಲ್ಲಿಯೇ ಸಾಗಬೇಕು ಎಂದು ನಮ್ಮ ಮೇಲೆ ಒತ್ತಡ ಹೇರಲಾಗದು’ ಎಂದೂ ಪ್ರತಿಪಾದಿಸಿದರು.

ಚೀನಾದ ಯುದ್ಧ ವಿಮಾನಗಳು ದ್ವೀಪರಾಷ್ಟ್ರದ ವಾಯುಗಡಿ ಪ್ರವೇಶಿಸಿವೆ ಎಂಬ ವರದಿಗಳ ಹಿಂದೆಯೇ ಈ ಮಾತು ಹೇಳಿದರು. ತೈವಾನ್‌ ರಕ್ಷಣಾ ಸಚಿವಾಲಯದ ಪ್ರಕಾರ, ಎರಡು ಯುದ್ಧ ವಿಮಾನ ಸೇರಿದಂತೆ ಮೂರು ವಿಮಾನಗಳು ತೈವಾನ್‌ ವಾಯುಗಡಿಯನ್ನು ಪ್ರವೇಶಿಸಿವೆ.

‘ಚೀನಾ ಜೊತೆಗಿನ ಗೊಂದಲವು ಬಗೆಹರಿಯುವ ವಿಶ್ವಾಸವಿದೆ. ಆದರೆ, ತೈವಾನ್‌ ನಾಗರಿಕರು ಒತ್ತಡಕ್ಕೆ ಮಣಿಯುತ್ತಾರೆ ಎಂಬ ಭ್ರಮೆ ಬೇಡ. ತೈವಾನ್‌ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆ’ ಎಂದು ಹೇಳಿದರು.

ಸ್ವತಂತ್ರ ಆಡಳಿತವುಳ್ಳ ತೈವಾನ್‌ ಸುಮಾರು 2.3 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ನಿರಂತರವಾಗಿ ಚೀನಾದಿಂದ ಅತಿಕ್ರಮಣ ಭೀತಿ ಎದುರಿಸುತ್ತಿದೆ. 1949ರ ಯುದ್ಧದ ಬಳಿಕ ಉಭಯ ದೇಶಗಳು ಪ್ರತ್ಯೇಕವಾಗಿವೆ.

2022ರಲ್ಲಿ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸಿಕೊಳ್ಳುವ ಸಿದ್ಧತೆಯಲ್ಲಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು, ‘ತೈವಾನ್‌ ಸ್ವಾಧೀನ ಪಡೆಯುವುದು ತಮ್ಮ ನಾಯಕತ್ವದ ಮುಖ್ಯ ಗುರಿ’ ಎಂದು ಈಗಾಗಲೇ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚೀನಾದೊಂದಿಗೆ ಭಾರತ 13 ನೇ ಸುತ್ತಿನ ಮಿಲಿಟರಿ ಮಾತುಕತೆ

Mon Oct 11 , 2021
ನವದೆಹಲಿ: ಚೀನಾದೊಂದಿಗಿನ 13 ನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಪೂರ್ವ ಲಡಾಖ್‌ನ ಉಳಿದ ಘರ್ಷಣೆ ಸ್ಥಳಗಳಲ್ಲಿ ಸೈನಿಕರನ್ನು ಬೇಗನೆ ಬೇರ್ಪಡಿಸುವಂತೆ ಭಾರತ ಭಾನುವಾರ ಒತ್ತಾಯಿಸಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಕಾರ್ಪ್ಸ್ ಕಮಾಂಡರ್-ಮಟ್ಟದ ಮಾತುಕತೆಯ ಪ್ರಮುಖ ಗಮನವು ಪೆಟ್ರೋಲಿಂಗ್ ಪಾಯಿಂಟ್ 15 ರಲ್ಲಿ ಸ್ಥಗಿತಗೊಂಡ ನಿರ್ಲಿಪ್ತತೆಯನ್ನು ಪೂರ್ಣಗೊಳಿಸುವುದು ಎಂದು ತಿಳಿದುಬಂದಿದೆ. ಪೂರ್ವ ಲಡಾಖ್‌ನ ಚುಶುಲ್-ಮೊಲ್ಡೊ ಗಡಿ ಬಿಂದುವಿನ ಚೀನಾದ ಭಾಗದಲ್ಲಿ ನಡೆದ ಮಾತುಕತೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ.ಮಾತುಕತೆಗಳು, […]

Advertisement

Wordpress Social Share Plugin powered by Ultimatelysocial